More

    ಚಹಾ ನಿಜವಾಗಿಯೂ ಚೆನ್ನಾಗಿದೆ; ನಾನು ಚಾಯ್​ವಾಲಾ ಆಗಿದ್ದೆ… ಅಯೋಧ್ಯೆಯಲ್ಲಿ ಪ್ರಧಾನಿ ಹೀಗೆ ಹೇಳಿದ್ದೇಕೆ?

    ಅಯೋಧ್ಯೆ: ಪ್ರಧಾನಿ ನರೇಂದ್ರ ಮೋದಿ ಅವರು ಡಿ. 30ರಂದು ಅಯೋಧ್ಯೆಯಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಹತ್ತನೇ ಕೋಟಿ ಫಲಾನುಭವಿ ಮಹಿಳೆಯೊಬ್ಬರ ಮನೆಗೆ ಭೇಟಿ ನೀಡಿದರು.

    ಉರುವಲು, ಕಲ್ಲಿದ್ದಲು ಮತ್ತು ಹಸುವಿನ ಕುಳ್ಳುಗಳನ್ನು ಬಳಸುತ್ತಿದ್ದ ಗ್ರಾಮೀಣ ಮತ್ತು ವಂಚಿತ ಮನೆಗಳಿಗೆ ಎಲ್‌ಪಿಜಿ ಸಿಲಿಂಡರ್‌ಗಳಂತಹ ಶುದ್ಧ ಅಡುಗೆ ಇಂಧನವನ್ನು ಒದಗಿಸುವ ಪ್ರಮುಖ ಯೋಜನೆ ಇದಾಗಿದೆ.

    ಬಿಪಿಎಲ್ ಕುಟುಂಬಗಳಿಗೆ ಎಲ್‌ಪಿಜಿ ಸಂಪರ್ಕಕ್ಕಾಗಿ ಆರ್ಥಿಕ ನೆರವು ನೀಡುವ ಸರ್ಕಾರದ ಉಜ್ವಲ ಯೋಜನೆಯ 10 ಕೋಟಿ ಫಲಾನುಭವಿಗಳಾಗಿರುವ ಮೀರಾ ಮಾಂಝಿ ಅವರ ಮನೆಗೆ ಶನಿವಾರ ಪ್ರಧಾನಿ ಭೇಟಿ ನೀಡಿದರು.
    ಈ ಕುಟುಂಬದವರು ಗ್ಯಾಸ್ ಸಂಪರ್ಕ ಪಡೆದ ಮರುದಿನವೇ ಈ ಭೇಟಿ ನೀಡಿದ್ದು ವಿಶೇಷವಾಗಿತ್ತು. ಪ್ರಧಾನಿ ಮೋದಿ ಅವರಿಗೆ ಮನೆಯವರು ಕುಡಿಯಲು ಚಹಾ ನೀಡಿದರು. “ಚಹಾ ನಿಜವಾಗಿಯೂ ಚೆನ್ನಾಗಿದೆ. ನಾನು ಚಾಯ್​ವಾಲಾ ಆಗಿದ್ದರಿಂದ ನನಗೆ ತಿಳಿದಿದೆ” ಎಂದು ಹೇಳಿದರು.

    ನಂತರ ಅಯೋಧ್ಯೆಯ ಕಿರಿದಾದ ರಸ್ತೆಗಳಲ್ಲಿ ರೋಡ್​ ಶೋ ನಡೆಸಿದ ಪ್ರಧಾನಿ ಮೋದಿ ಅವರನ್ನು ಅಪಾರ ಜನಸ್ತೋಮ ಸ್ವಾಗತಿಸಿತು. ಬಾಲಕನೊಬ್ಬ ತೋರಿಸಿದ ಪೇಂಟಿಂಗ್‌ನಲ್ಲಿ ಪ್ರಧಾನಿ ಸಹಿ ಹಾಕಿದರು.

    ಶನಿವಾರ ಮುಂಜಾನೆ, ಪ್ರಧಾನಿ ಮೋದಿ ಅವರು ಪುನರಾಭಿವೃದ್ಧಿಗೊಂಡ ಅಯೋಧ್ಯೆ ರೈಲು ನಿಲ್ದಾಣವನ್ನು ಉದ್ಘಾಟಿಸಿದರು. ಎರಡು ಅಮೃತ್ ಭಾರತ್ ಮತ್ತು ಆರು ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಿದರು, ರೈಲ್ವೆ ನಿಲ್ದಾಣವನ್ನು ಉದ್ಘಾಟಿಸಿದ ನಂತರ, ಪ್ರಧಾನಿ ಮೋದಿ ಅವರು ಅಲ್ಲಿನ ಸೌಲಭ್ಯಗಳನ್ನು ವೀಕ್ಷಿಸಿದರು. ಅವರ ಜತೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮೊದಲಾದವರು ಇದ್ದರು. ಜ. 22ರಂದು ನಡೆಯಲಿರುವ ‘ಪ್ರಾಣ ಪ್ರತಿಷ್ಠಾ’ ಅಥವಾ ರಾಮ ಮಂದಿರ ಉದ್ಘಾಟನೆ ಸಮಾರಂಭಕ್ಕೆ ಮುಂಚಿತವಾಗಿ ಪ್ರಧಾನಮಂತ್ರಿಯವರ ಈ ಭೇಟಿಯು ನಡೆಯಿತು.

    2023ರಲ್ಲಿ ಮಿಡ್​ ಕ್ಯಾಪ್​ಗಳಲ್ಲಿ ಶೇ. 46.57ರಷ್ಟು ಲಾಭ: ಟಾಪ್​ 10 ಷೇರುಗಳಲ್ಲಿ ಹಣ ತೊಡಗಿಸಿದವರು ಈಗ ಕುಬೇರರು…

    ಪ್ರಧಾನಿ ಮೋದಿಗೆ ಪುಷ್ಪಾರ್ಚನೆ ಮಾಡಿದ ಇಕ್ಬಾಲ್​ ಅನ್ಸಾರಿ: ಬಾಬ್ರಿ ಮಸೀದಿ ರಾಮ ಮಂದಿರ ಪ್ರಕರಣದ ಈ ವ್ಯಕ್ತಿ ಯಾರು ಗೊತ್ತೆ?

    ಪುಟಿನ್​ ಹತ್ಯೆ, ಆರ್ಥಿಕ ಕುಸಿತ, ಪ್ರವಾಹ… : 2024ರ ಭವಿಷ್ಯವಾಣಿಯಲ್ಲಿ ಏನೇನಿದೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts