More

    ಅಂಬಾನಿ, ಅದಾನಿ, ಟಾಟಾ ಮೀರಿಸಿದ ಜಗತ್ತಿನ ಶ್ರೀಮಂತ ಮಹಿಳೆ: ಬೈಬಲ್​ ಓದು, ಪಿಯಾನೊ ನುಡಿಸುವಿಕೆ ಈಕೆಯ ಹವ್ಯಾಸ!

    ಮುಂಬೈ: ಈಕೆಯ ಹೆಸರು ಬೆಟೆನ್‌ಕೋರ್ಟ್ ಮೇಯರ್ಸ್. ಈಕೆ ಈಗ 70,241 ಬಿಲಿಯನ್ ಪೌಂಡ್‌ಗಳ (268 ಶತಕೋಟಿ ಡಾಲರ್. ಅಂದರೆ, 22.31 ಲಕ್ಷ ಕೋಟಿ ರೂಪಾಯಿ) ಮೌಲ್ಯದ ಜಾಗತಿಕ ಸಂಸ್ಥೆಯಾದ ಲೋರಿಯಲ್‌ನ ಏಕೈಕ ಅತಿದೊಡ್ಡ ಪಾಲುದಾರರಾಗಿದ್ದಾರೆ. ಅಲ್ಲದೆ, ವಿಶ್ವದ 12 ನೇ ಶ್ರೀಮಂತ ವ್ಯಕ್ತಿಯೂ ಈಕೆಯಾಗಿದ್ದಾಳೆ.

    100 ಶತಕೋಟಿ ಡಾಲರ್​ ಸಂಪತ್ತನ್ನು ಗಳಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಯೂ ಈಕೆಯದ್ದಾಗಿದೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ, ಇವರ ಸಂಪತ್ತು ಈಗ 100.1 ಶತಕೋಟಿ ಡಾಲರ್​ಗೆ (8.33 ಲಕ್ಷ ಕೋಟಿ ರೂಪಾಯಿ) ಏರಿದೆ. ಈಕೆಯ ಅಜ್ಜ ಸ್ಥಾಪಿಸಿದ ಸೌಂದರ್ಯ ಉತ್ಪನ್ನಗಳ ಸಾಮ್ರಾಜ್ಯವಾದ ಲೋರಿಯಲ್​ ಸಾ (L’Oreal SA) ಸಂಸ್ಥೆಯ ಯ ಷೇರುಗಳು ದಾಖಲೆಯ ಏರಿಕೆ ಕಂಡಿವೆ.

    ಈ ಹೆಚ್ಚಳದ ಹೊರತಾಗಿಯೂ, ಬೆಟೆನ್‌ಕೋರ್ಟ್ ಮೆಯರ್ಸ್‌ನ ಸಂಪತ್ತು, ಇನ್ನೊಬ್ಬ ಫ್ರೆಂಡ್​ ಕುಬೇರ ಬರ್ನಾರ್ಡ್ ಅರ್ನಾಲ್ಟ್‌ ಅವರಿಗಿಂತ ಕಡಿಮೆ ಇದೆ.

    ಫ್ರಾಂಕೋಯಿಸ್ ಬೆಟೆನ್‌ಕೋರ್ಟ್ ಮೇಯರ್ಸ್ ತಮ್ಮ ಸಂಸ್ಥೆಯ ನಿರ್ದೇಶಕರ ಮಂಡಳಿಯ ಉಪಾಧ್ಯಕ್ಷೆ ಆಗಿದ್ದಾರೆ. ಈಕೆಯ ಮಕ್ಕಳಾದ ಜೀನ್-ವಿಕ್ಟರ್ ಮತ್ತು ನಿಕೋಲಸ್ ಮೇಯರ್ಸ್ ಅವರು ಚಲನಚಿತ್ರ ನಿರ್ಮಾಪಕರಾಗಿದ್ದಾರೆ.

    ಬೆಟೆನ್‌ಕೋರ್ಟ್ ಮೇಯರ್ಸ್ ಅವರು ಟೆಥಿಸ್‌ನ ಅಧ್ಯಕ್ಷರಾಗಿದ್ದಾರೆ, ಇದು ಲೋರಿಯಲ್ ಸೇರಿದಂತೆ ಅವರ ಕುಟುಂಬದ ಮಾಲೀಕತ್ವದ ಕಂಪನಿಯಾಗಿದೆ. ಜೀನ್-ಪಿಯರ್ ಮೇಯರ್ಸ್ ಈಕೆಯ ಸಂಗಾತಿಯಾಗಿದ್ದು, ಇವರ ಕಂಪನಿಯ ಸಿಇಒ ಆಗಿ ಕಾರ್ಯನಿರ್ವಹಿಸುತ್ತಾರೆ. ಇಬ್ಬರೂ 2016 ರಲ್ಲಿ ಟೆಥಿಸ್ ಇನ್ವೆಸ್ಟ್ ಎಸ್‌ಎಎಸ್ ಎಂಬ ಸಂಸ್ಥೇಯನ್ನು ಸ್ಥಾಪಿಸಿದ್ದಾರೆ.

    ಕೂದಲಿನ ಬಣ್ಣವನ್ನು ಉತ್ಪಾದಿಸಿ, ಮಾರಾಟ ಮಾಡಲು ಲೋರಿಯಲ್​ ಸಾ ಕಂಪನಿಯನ್ನು 1909 ರಲ್ಲಿ ಬೆಟೆನ್‌ಕೋರ್ಟ್ ಮೇಯರ್ಸ್ ಅವರ ಅಜ್ಜ, ರಸಾಯನಶಾಸ್ತ್ರಜ್ಞ ಯುಜೀನ್ ಶುಲ್ಲರ್ ಆರಂಭಿಸಿದ್ದರು.

    ಇಷ್ಟೊಂದು ಶ್ರೀಮಂತೆಯಾಗಿದ್ದರೂ ಗ್ಲಾಮರಸ್​ ಜೀವನವನ್ನು ಮೆಯರ್ಸ್ ಅನುಸರಿಸುವುದಿಲ್ಲ. ಎರಡು ಪುಸ್ತಕಗಳನ್ನು ಬರೆದಿದ್ದಾರೆ. ಐದು-ಸಂಪುಟಗಳ ಬೈಬಲ್ ಅಧ್ಯಯನ ಮಾಡುತ್ತಾರೆ. ಗ್ರೀಕ್ ದೇವರುಗಳ ವಂಶಾವಳಿಯನ್ನು ಬರೆಯುತ್ತಾರೆ. ಜತೆಗೆ, ಗಂಟೆಗಳ ಕಾಲ ನಿತ್ಯವೂ ಪಿಯಾನೋ ನುಡಿಸುತ್ತಾರೆ.

    ಅಯೋಧ್ಯೆಯ ಲತಾ ಮಂಗೇಶ್ವರ್​ ಚೌಕ್​ನಲ್ಲಿ ಭಾವುಕರಾದ ಮೋದಿ: ಇಲ್ಲಿದ ಬೃಹದಾಕಾರದ ವೀಣೆ

    2023ರಲ್ಲಿ ಮಿಡ್​ ಕ್ಯಾಪ್​ಗಳಲ್ಲಿ ಶೇ. 46.57ರಷ್ಟು ಲಾಭ: ಟಾಪ್​ 10 ಷೇರುಗಳಲ್ಲಿ ಹಣ ತೊಡಗಿಸಿದವರು ಈಗ ಕುಬೇರರು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts