More

    ಪತಿ, ತಾಯಿಗೆ ಗನ್​ ತೋರಿಸಿ ಮಣಿಪುರ ಗಾಯಕ ಅಪಹರಣ

    ನವದೆಹಲಿ: ಮಣಿಪುರ ಮೂಲದ ಗಾಯಕ ಮತ್ತು ಗೀತರಚನೆಕಾರ ಅಖು ಚಿಂಗಾಂಗ್‌ಬಾಮ್ ಅವರನ್ನು ಸಶಸ್ತ್ರ ದುಷ್ಕರ್ಮಿಗಳು ಅಪಹರಿಸಿದ್ದಾರೆ.

    ಅಖು ಚಿಂಗಾಂಗ್‌ಬಾಮ್ ಅವರು ಇಂಫಾಲ್ ಪೂರ್ವದ ಖುರೈ ಮೂಲದವರು. ಗಾಯಕ, ಗೀತರಚನೆಕಾರ ಆಗಿರುವ ಅವರು ‘ಇಂಫಾಲ್ ಟಾಕೀಸ್’ ಎಂಬ ಜಾನಪದ ರಾಕ್ ಬ್ಯಾಂಡ್‌ನ ಸಂಸ್ಥಾಪಕರಾಗಿದ್ದಾರೆ.

    ಅಖು ಅವರ ಪತ್ನಿ ಮತ್ತು ತಾಯಿ ಅವರನ್ನು ಗನ್‌ಪಾಯಿಂಟ್‌ನಲ್ಲಿ ಹಿಡಿದು ಬೆದರಿಕೆ ತೋರಿಸಿದ ಬಂದೂಕುಧಾರಿಗಳು, ನಂತರ ಇವರನ್ನು ಅಪಹರಿಸಿಕೊಂಡು ಹೋಗಿದ್ದಾರೆ. ಯಾರು ಅಪಹರಿಸಿದ್ದಾರೆ ಮತ್ತು ಅಪಹರಣಕ್ಕೆ ಕಾರಣಗಳೇನು ಎಂಬ ವಿವರಗಳು ಲಭ್ಯವಾಗಿಲ್ಲ.

    ಮಣಿಪುರದಲ್ಲಿ ಈ ವರ್ಷದ ಮೇ ತಿಂಗಳಿನಿಂದ ಮೈತೆಯಿ ಮತ್ತು ಕುಕಿಗಳ ನಡುವೆ ಜನಾಂಗೀಯ ಹಿಂಸಾಚಾರಕ್ಕೆ ತಲೆದೋರಿದೆ. ಪರಿಶಿಷ್ಟ ಪಂಗಡದ (ಎಸ್‌ಟಿ) ಸ್ಥಾನಮಾನಕ್ಕಾಗಿ ಮೈತೆಯಿ ಸಮುದಾಯದ ಬೇಡಿಕೆ ಇಟ್ಟಿದ್ದು, ಇದನ್ನು ವಿರೋಧಿಸಲು ಮಣಿಪುರದ ಬೆಟ್ಟದ ಜಿಲ್ಲೆಗಳಲ್ಲಿ “ಬುಡಕಟ್ಟು ಐಕ್ಯತಾ ಮೆರವಣಿಗೆ” ಆಯೋಜಿಸಿದಾಗ ಮೇ ತಿಂಗಳಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಇದುವರೆಗಿನ ಹಿಂಸಾಚಾರಗಳಲ್ಲಿ 160 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, 3,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

    ಮೈತೆಯಿ ಸಮುದಾಯದವರು ಈ ರಾಜ್ಯದ ಜನಸಂಖ್ಯೆಯ ಅಂದಾಜು 53 ಪ್ರತಿಶತ ಇದ್ದು, ಹೆಚ್ಚಾಗಿ ಇಂಫಾಲ್ ಕಣಿವೆಯಲ್ಲಿ ವಾಸಿಸುತ್ತಿದ್ದಾರೆ. ನಾಗಾಗಳು ಮತ್ತು ಕುಕಿಗಳು ಸೇರಿದಂತೆ ಆದಿವಾಸಿಗಳು ಶೇಕಡಾ 40 ರಷ್ಟಿದ್ದು, ಗುಡ್ಡಗಾಡು ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ.

    ಇಂಡಿಯಾ ಮೈತ್ರಿಕೂಟದಲ್ಲಿ ಕಾಣಿಸಿಕೊಳ್ಳುತ್ತಿದೆ ಬಿರುಕು: 23 ಸ್ಥಾನಗಳಲ್ಲಿ ಸ್ಪಧಿಸಲು ಶಿವಸೇನೆ (ಯುಬಿಟಿ) ಪಟ್ಟು

    ಪ್ರಧಾನಿ ಮೋದಿಯವರಿಂದ ಡಿ.30ರಂದು ಉದ್ಘಾಟನೆ: ಅಮೃತ ಭಾರತ ಎಕ್ಸ್​ಪ್ರೆಸ್​ ವೈಶಿಷ್ಟ್ಯಗಳೇನು?

    ರಾಮ ಮಂದಿರ ಕುರಿತು ಸ್ಯಾಮ್​ ಪಿತ್ರೋಡಾ ಹೇಳಿಕೆ ವಿವಾದ: ಕಾಂಗ್ರೆಸ್​ ನೀಡಿದ ಸ್ಪಷ್ಟನೆ ಏನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts