More

    ಪ್ರಧಾನಿ ಮೋದಿಯವರಿಂದ ಡಿ.30ರಂದು ಉದ್ಘಾಟನೆ: ಅಮೃತ ಭಾರತ ಎಕ್ಸ್​ಪ್ರೆಸ್​ ವೈಶಿಷ್ಟ್ಯಗಳೇನು?

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಡಿ. 30ರಂದು ಅಯೋಧ್ಯೆಯಲ್ಲಿ ಎರಡು ಅಮೃತ ಭಾರತ ಎಕ್ಸ್‌ಪ್ರೆಸ್ ರೈಲುಗಳನ್ನು ಉದ್ಘಾಟಿಸಲಿದ್ದಾರೆ.

    ವೇಗವನ್ನು ಮತ್ತು ಪ್ರಯಾಣಿಕರ ಸೌಕರ್ಯವನ್ನು ಈ ರೈಲುಗಳ ಗಮನಾರ್ಹವಾಗಿ ಹೆಚ್ಚಿಸುತ್ತವೆ ಎಂದು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಇದಲ್ಲದೆ, ಪ್ರಯಾಣಿಕರ ಸೌಕರ್ಯ ಮತ್ತು ಅನುಕೂಲಕ್ಕಾಗಿ ಸಾಕಷ್ಟು ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಲಾಗಿದೆ ಎಂದೂ ಅವರು ತಿಳಿಸಿದ್ದಾರೆ.

    ಇದು ಹೈಸ್ಪೀಡ್ ರೈಲು ವಂದೇ ಭಾರತ್ ರೈಲುಗಳ ಸ್ಲೀಪರ್ ಆವೃತ್ತಿಯಾಗಿದೆ. ಈ ಹೊಸ ಸೂಪರ್‌ಫಾಸ್ಟ್ ಪ್ರಯಾಣಿಕರ ರೈಲುಗಳು ಹೆಚ್ಚಿನ ವೇಗ ಪಡೆದುಕೊಳ್ಳುವುದಕ್ಕಾಗಿ ಎರಡೂ ತುದಿಗಳಲ್ಲಿ ಇಂಜಿನ್‌ಗಳನ್ನು ಹೊಂದಿರುತ್ತವೆ. “ಪುಶ್-ಪುಲ್” ತಂತ್ರಜ್ಞಾನ ಒಳಗೊಂಡಿವೆ,

    ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಎಲ್‌ಇಡಿ ಲೈಟ್‌ಗಳು, ಸಿಸಿಟಿವಿಗಳು, ಸಾರ್ವಜನಿಕ ಮಾಹಿತಿ ವ್ಯವಸ್ಥೆ, ಇತರ ಸೌಲಭ್ಯಗಳೂ ಇರುತ್ತವೆ.

    ತಾಂತ್ರಿಕ ಸವಾಲುಗಳು ಏನಾದರೂ ಎದುರಾಗುತ್ತವೆಯೋ ಎಂಬುದನ್ನು ಪರಿಶೀಲಿಸಲು ಆರಂಭಿಕ ನಾಲ್ಕರಿಂದ ಐದು ತಿಂಗಳುಗಳ ಕಾಲ ಸಾಮಾನ್ಯ ರೈಲಿನಂತೆಯೇ ಈ ರೈಲುಗಳ ಓಡಾಟವನ್ನು ನಡೆಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

    ರಾಮ ಮಂದಿರ ಕುರಿತು ಸ್ಯಾಮ್​ ಪಿತ್ರೋಡಾ ಹೇಳಿಕೆ ವಿವಾದ: ಕಾಂಗ್ರೆಸ್​ ನೀಡಿದ ಸ್ಪಷ್ಟನೆ ಏನು?

    ಮೂರು ಮೂರ್ತಿಗಳ ನಡುವೆ ಪೈಪೋಟಿ: ರಾಮ ಮಂದಿರದಲ್ಲಿ ಪ್ರತಿಷ್ಠಾಪಿಸಲಾಗುವ ವಿಗ್ರಹ ಆಯ್ಕೆಗೆ ಶುರುವಾಗಿದೆ ಮತದಾನ…

    ಜೆಡಿಯು ಮುಖ್ಯಸ್ಥರಾಗಿ ನಿತೀಶ್ ಕುಮಾರ್ ನೇಮಕ: ಇಂಡಿಯಾ ಮೈತ್ರಿಕೂಟದಲ್ಲಿ ಏನಾಗಬಹುದು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts