ಇಂಡಿಯಾ ಮೈತ್ರಿಕೂಟದಲ್ಲಿ ಕಾಣಿಸಿಕೊಳ್ಳುತ್ತಿದೆ ಬಿರುಕು: 23 ಸ್ಥಾನಗಳಲ್ಲಿ ಸ್ಪಧಿಸಲು ಶಿವಸೇನೆ (ಯುಬಿಟಿ) ಪಟ್ಟು

ನವದೆಹಲಿ: ಲೋಕಸಭೆ ಚುನಾವಣೆಗೆ ಸಮೀಪಿಸುತ್ತಿರುವಂತೆಯೇ ಪ್ರತಿಪಕ್ಷಗಳ ಮೈತ್ರಿಕೂಟವಾದ ಇಂಡಿಯಾ ಬ್ಲಾಕ್​ನಲ್ಲಿ ಒಡಕು ಕಾಣಿಸಿಕೊಳ್ಳುವ ಮುನ್ಸೂಚನೆ ಮತ್ತೆ ಕಂಡುಬರುತ್ತಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸೀಟು ಹಂಚಿಕೆ ಕುರಿತಂತೆ ಮೈತ್ರಿಪಕ್ಷಗಳ ನಡುವೆ ಈಗಾಗಲೇ ತಕರಾರುಗಳು ಕೇಳಿಬರುತ್ತಿವೆ. ಮಾಜಿ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ) ಕೂಡ ಇಂಡಿಯಾ ಮೈತ್ರಿಕೂಟದಲ್ಲಿದೆ. ಆದರೆ, ಈಗ ಈ ಪಕ್ಷವು ಮಹಾರಾಷ್ಟ್ರದಲ್ಲಿ ತಾನು ಹಿಂದೆ ಸ್ಪರ್ಧಿಸಿದ ಎಲ್ಲ 23 ಲೋಕಸಭೆ ಸ್ಥಾನಗಳಲ್ಲಿ ಮತ್ತೆ ಸ್ಪರ್ಧಿಸುವುದಾಗಿ ಹೇಳಿರುವುದು ಮೈತ್ರಿಕೂಟದಲ್ಲಿನ ಹೊಂದಾಣಿಕೆ ಕೊರತೆಯನ್ನು ತೋರಿಸಿದೆ. ಕಾಂಗ್ರೆಸ್ ರಾಷ್ಟ್ರೀಯ … Continue reading ಇಂಡಿಯಾ ಮೈತ್ರಿಕೂಟದಲ್ಲಿ ಕಾಣಿಸಿಕೊಳ್ಳುತ್ತಿದೆ ಬಿರುಕು: 23 ಸ್ಥಾನಗಳಲ್ಲಿ ಸ್ಪಧಿಸಲು ಶಿವಸೇನೆ (ಯುಬಿಟಿ) ಪಟ್ಟು