More

    ಇಂಡಿಯಾ ಮೈತ್ರಿಕೂಟದಲ್ಲಿ ಕಾಣಿಸಿಕೊಳ್ಳುತ್ತಿದೆ ಬಿರುಕು: 23 ಸ್ಥಾನಗಳಲ್ಲಿ ಸ್ಪಧಿಸಲು ಶಿವಸೇನೆ (ಯುಬಿಟಿ) ಪಟ್ಟು

    ನವದೆಹಲಿ: ಲೋಕಸಭೆ ಚುನಾವಣೆಗೆ ಸಮೀಪಿಸುತ್ತಿರುವಂತೆಯೇ ಪ್ರತಿಪಕ್ಷಗಳ ಮೈತ್ರಿಕೂಟವಾದ ಇಂಡಿಯಾ ಬ್ಲಾಕ್​ನಲ್ಲಿ ಒಡಕು ಕಾಣಿಸಿಕೊಳ್ಳುವ ಮುನ್ಸೂಚನೆ ಮತ್ತೆ ಕಂಡುಬರುತ್ತಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸೀಟು ಹಂಚಿಕೆ ಕುರಿತಂತೆ ಮೈತ್ರಿಪಕ್ಷಗಳ ನಡುವೆ ಈಗಾಗಲೇ ತಕರಾರುಗಳು ಕೇಳಿಬರುತ್ತಿವೆ.

    ಮಾಜಿ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ) ಕೂಡ ಇಂಡಿಯಾ ಮೈತ್ರಿಕೂಟದಲ್ಲಿದೆ. ಆದರೆ, ಈಗ ಈ ಪಕ್ಷವು ಮಹಾರಾಷ್ಟ್ರದಲ್ಲಿ ತಾನು ಹಿಂದೆ ಸ್ಪರ್ಧಿಸಿದ ಎಲ್ಲ 23 ಲೋಕಸಭೆ ಸ್ಥಾನಗಳಲ್ಲಿ ಮತ್ತೆ ಸ್ಪರ್ಧಿಸುವುದಾಗಿ ಹೇಳಿರುವುದು ಮೈತ್ರಿಕೂಟದಲ್ಲಿನ ಹೊಂದಾಣಿಕೆ ಕೊರತೆಯನ್ನು ತೋರಿಸಿದೆ.

    ಕಾಂಗ್ರೆಸ್ ರಾಷ್ಟ್ರೀಯ ಪಕ್ಷವಾಗಿದ್ದರೂ, ಶಿವಸೇನೆ (ಯುಬಿಟಿ) ಮಹಾರಾಷ್ಟ್ರದಲ್ಲಿ ಪ್ರಮುಖ ರಾಜಕೀಯ ಶಕ್ತಿಯಾಗಿ ಗಮನಾರ್ಹ ಪ್ರಭಾವವನ್ನು ಹೊಂದಿದೆ. ಹಿಂದಿನಂತೆ 23 ಲೋಕಸಭೆ ಸ್ಥಾನಗಳಲ್ಲಿ ಪಕ್ಷವು ಸ್ಪರ್ಧಿಸಲಿದೆ. ಮುಂಬರುವ ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಶಿವಸೇನೆ (ಯುಬಿಟಿ) ನಾಯಕ ಮತ್ತು ಸಂಸದ ಸಂಜಯ್ ರಾವುತ್ ಅವರು ಶುಕ್ರವಾರ ಹೇಳಿದ್ದಾರೆ.

    ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮತ್ತು ಕೆ ಸಿ ವೇಣುಗೋಪಾಲ್ ಸೇರಿದಂತೆ ಕಾಂಗ್ರೆಸ್‌ನ ಹಿರಿಯ ನಾಯಕರೊಂದಿಗೆ ಉದ್ಧವ್ ಠಾಕ್ರೆ ಸಕಾರಾತ್ಮಕ ಚರ್ಚೆ ನಡೆಸುತ್ತಿದ್ದಾರೆ. ದಾದ್ರಾ ಮತ್ತು ನಗರ ಹವೇಲಿ ಸೇರಿದಂತೆ ಲೋಕಸಭೆ ಚುನಾವಣೆಯಲ್ಲಿ ಶಿವಸೇನೆ ಯಾವಾಗಲೂ ಎಲ್ಲ 23 ಸ್ಥಾನಗಳಲ್ಲಿ ಸ್ಪರ್ಧಿಸುತ್ತದೆ ಎಂದು ನಾವು ಯಾವಾಗಲೂ ಹೇಳಿದ್ದೇವು. ಇದು ದೃಢ ನಿರ್ಧಾರವಾಗಿರುತ್ತದೆ ” ಎಂದು ಸಂಜಯ್ ರಾವುತ್ ಹೇಳಿದ್ದಾರೆ.

    “ನಮ್ಮ ಮೈತ್ರಿಕೂಟ ಸಭೆಯಲ್ಲಿ, ನಾವು ಗೆದ್ದಿರುವ ಸ್ಥಾನಗಳ ಬಗ್ಗೆ ನಂತರ ಚರ್ಚೆ ನಡೆಸಲಾಗುವುದು. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಒಂದು ಸ್ಥಾನವನ್ನೂ ಗೆದ್ದಿಲ್ಲ. ಆದ್ದರಿಂದ ಅವರು ಶೂನ್ಯದಿಂದ (ಸೀಟುಗಳಿಂದ) ಪ್ರಾರಂಭಿಸಬೇಕು. ಆದರೆ, ಕಾಂಗ್ರೆಸ್ ಪ್ರಮುಖ ಮಿತ್ರ ಪಕ್ಷವಾಗಿದೆ. ನಾವು ಮಹಾರಾಷ್ಟ್ರ ವಿಕಾಸ ಅಗಡಿ (ಎಂವಿಎ)ಯಲ್ಲಿದ್ದು, ಒಟ್ಟಿಗೆ ಕೆಲಸ ಮಾಡುತ್ತೇವೆ,” ಎಂದು ಅವರು ಹೇಳಿದರು.

    ಇಂದಿಗೂ ಶಿವಸೇನೆ (ಯುಬಿಟಿ) ಮಹಾರಾಷ್ಟ್ರದಲ್ಲಿ ನಂಬರ್ ಒನ್ ಪಕ್ಷವಾಗಿದೆ. ಜನರು ಶಿವಸೇನೆ ಮತ್ತು ಶರದ್ ಪವಾರ್‌ಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ. ಸೀಟು ಹಂಚಿಕೆ ವಿಚಾರದಲ್ಲಿ ಎಂವಿಎ ನಡುವೆ ಯಾವುದೇ ಸಂಘರ್ಷವಿಲ್ಲ. ಲೋಕಸಭೆ ಚುನಾವಣೆಯಲ್ಲಿ ಶಿವಸೇನೆ ಯಾವಾಗಲೂ 23 ಸ್ಥಾನಗಳಿಗೆ ಸ್ಪರ್ಧಿಸಿದೆ. ಸೀಟು ಹಂಚಿಕೆ ಕುರಿತು ನಾವು ದೆಹಲಿಯಲ್ಲಿ ಮಾತ್ರ ಕಾಂಗ್ರೆಸ್ ನಾಯಕರೊಂದಿಗೆ ಮಾತನಾಡುತ್ತೇವೆಯೇ ಹೊರತು ಮಹಾರಾಷ್ಟ್ರದ ಸ್ಥಳೀಯ ನಾಯಕರೊಂದಿಗಲ್ಲ ಎಂದು ಅವರು ಹೇಳಿದರು.

    ಪ್ರಧಾನಿ ಮೋದಿಯವರಿಂದ ಡಿ.30ರಂದು ಉದ್ಘಾಟನೆ: ಅಮೃತ ಭಾರತ ಎಕ್ಸ್​ಪ್ರೆಸ್​ ವೈಶಿಷ್ಟ್ಯಗಳೇನು?

    ರಾಮ ಮಂದಿರ ಕುರಿತು ಸ್ಯಾಮ್​ ಪಿತ್ರೋಡಾ ಹೇಳಿಕೆ ವಿವಾದ: ಕಾಂಗ್ರೆಸ್​ ನೀಡಿದ ಸ್ಪಷ್ಟನೆ ಏನು?

    ಮೂರು ಮೂರ್ತಿಗಳ ನಡುವೆ ಪೈಪೋಟಿ: ರಾಮ ಮಂದಿರದಲ್ಲಿ ಪ್ರತಿಷ್ಠಾಪಿಸಲಾಗುವ ವಿಗ್ರಹ ಆಯ್ಕೆಗೆ ಶುರುವಾಗಿದೆ ಮತದಾನ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts