ಒಡಹುಟ್ಟಿದ್ದ ತಂಗಿಯನ್ನೇ ಮದುವೆಯಾದ ಅಣ್ಣ! ಕಾರಣ ಕೇಳಿದ್ರೆ ಕೆಟ್ಟ ಕೋಪ ಬರೋದು ಖಂಡಿತ | Brother-Sister Marriage

Brother-Sister Marriage
Published on

ಲಖನೌ: ಸಹೋದರ ( Brother ) ಮತ್ತು ಸಹೋದರಿ ( Sister ) ಯ ಸಂಬಂಧಕ್ಕೆ ಬೆಲೆ ಕಟ್ಟಲಾಗದು. ಶ್ರೇಷ್ಠ ಸಂಬಂಧಗಳಲ್ಲಿ ಅಣ್ಣ-ತಂಗಿ ಸಂಬಂಧವೂ ಒಂದು. ಸಣ್ಣ ಸಣ್ಣ ವಿಚಾರಕ್ಕೂ ಕಿತ್ತಾಡಿದರೂ ತೊಂದರೆ ಅಂತ ಬಂದಾಗ ಒಬ್ಬರೊನ್ನೊಬ್ಬರನ್ನು ಎಂದಿಗೂ ಬಿಟ್ಟುಕೊಡುವುದಿಲ್ಲ. ಒಬ್ಬರಿಗೆ ಆಪತ್ತು ಬಂದರೆ ಮತ್ತೊಬ್ಬರು ಕಣ್ಣೀರು ಹಾಕುತ್ತಾರೆ ಮತ್ತು ಪರಸ್ಪರ ಬೆಂಬಲಕ್ಕೆ ನಿಲ್ಲುತ್ತಾರೆ. ಒಟ್ಟಾರೆ ಅಣ್ಣ ತಂಗಿಯ ಸಂಬಂಧವೆಂದರೆ, ತುಂಬಾ ಪವಿತ್ರವಾದದ್ದು. ಆದರೆ, ಇಲ್ಲೊಬ್ಬ ಅಣ್ಣ ಇಡೀ ಸಮಾಜ ತಲೆ ತಗ್ಗಿಸುವಂತೆ ನಡೆದುಕೊಂಡಿದ್ದಾನೆ. ಕೇವಲ 35 ಸಾವಿರ ರೂಪಾಯಿಗೆ ಮಾಡಬಾರದ ಕೆಲಸ ಮಾಡಿದ್ದಾನೆ. ಅದೇನೆಂದರೆ, ಸ್ವಂತ ತಂಗಿಯನ್ನೇ ಅಣ್ಣ ಮದುವೆ ( Brother-Sister Marriage ) ಆಗಿದ್ದಾನೆ. ಈ ಘಟನೆ ದೇಶಾದ್ಯಂತ ಸಂಚಲನ ಮೂಡಿಸುತ್ತಿದೆ.

ಅಣ್ಣ-ತಂಗಿ ಎಲ್ಲಿಯಾದರೂ ಮದುವೆ ಆಗುತ್ತಾರೆಯೇ? ಆದರೆ, ಉತ್ತರ ಪ್ರದೇಶದಲ್ಲಿ ಇಂಥದ್ದೊಂದು ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ. ಹಣಕ್ಕಾಗಿ ಯಾವ ಹಂತಕ್ಕಾದರೂ ಮನುಷ್ಯ ಹೋಗುತ್ತಾನೆ ಎಂಬುದನ್ನು ಈ ಘಟನೆ ನೆನಪಿಸಿದೆ. ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ಅಣ್ಣನೊಬ್ಬ ತನ್ನ ತಂಗಿಯನ್ನೇ ಮದುವೆಯಾಗಿದ್ದಾನೆ. ಕೇವಲ 35 ಸಾವಿರ ರೂಪಾಯಿಗೊಸ್ಕರ ಇಬ್ಬರು ಮದುವೆಯಾಗಿದ್ದಾನೆ. ಆದರೆ, ಸತ್ಯವನ್ನು ಎಷ್ಟು ದಿನ ಮುಚ್ಚಿಡಲು ಸಾಧ್ಯ. ಒಂದಲ್ಲ ಒಂದು ದಿನ ಅದು ಬಯಲಿಗೆ ಬರಲೇಬೇಕು.

Marriage 1

ಅಣ್ಣ-ತಂಗಿ ಇಬ್ಬರು ಹಣಕ್ಕಾಗಿ ಮದುವೆಯಾಗಿರುವ ವಿಚಾರವನ್ನು ತಿಳಿದು ಸ್ಥಳೀಯರು ನೀಡಿದ ದೂರಿನ ಮೇರೆಗೆ ಜಿಲ್ಲಾಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಈ ವಿವಾಹದ ಹಿಂದೆ ಸ್ಥಳೀಯ ಪುರಸಭೆ ನೌಕರನ ಕೈವಾಡ ಇರುವುದು ಕಂಡು ಬಂದಿದೆ. ಇಬ್ಬರಿಗೂ ನಕಲಿ ವಿವಾಹ ಪ್ರಮಾಣ ಪತ್ರ ನೀಡಿರುವುದು ತಿಳಿದುಬಂದಿದೆ. ಈ ಘಟನೆ ಕುರಿತು ಜಿಲ್ಲಾಧಿಕಾರಿ ವೇದ್ ಸಿಂಗ್ ಚೌಹಾಣ್ ಮಾತನಾಡಿದ್ದು, ಸರ್ಕಾರದ ಖಜಾನೆಗೆ ವಂಚನೆ ಮಾಡುವವರನ್ನು ಗುರುತಿಸಿ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದಿದ್ದಾರೆ.

ಅಂದಹಾಗೆ ಉತ್ತರ ಪ್ರದೇಶದಲ್ಲಿ ಸಿಎಂ ಯೋಗಿ ಆದಿತ್ಯನಾಥ್​ ನೇತೃತ್ವದ ಬಿಜೆಪಿ ಸರ್ಕಾರ, ಆರ್ಥಿಕವಾಗಿ ಹಿಂದುಳಿದ ವರ್ಗಗಳು ಮದುವೆಯಾದರೆ ಅವರಿಗೆ ಹಣಕಾಸಿನ ನೆರವು ನೀಡುತ್ತದೆ. ಮುಖ್ಯಮಂತ್ರಿ ಸಮೋಹಿಕ್ ವಿವಾಹ ಯೋಜನೆಯಡಿ ಆರ್ಥಿಕ ನೆರವು ನೀಡಲಾಗುತ್ತದೆ. ವಿವಾಹಿತ ಯುವತಿಗೆ ಮದುವೆ ವೆಚ್ಚವಾಗಿ ಸರ್ಕಾರ 35 ಸಾವಿರ ರೂ. ನಗದು, 10 ಸಾವಿರ ರೂ. ಮೌಲ್ಯದ ಅಗತ್ಯ ವಸ್ತುಗಳು ಹಾಗೂ ಹೆಚ್ಚುವರಿಯಾಗಿ 6 ಸಾವಿರ ರೂ. ನೀಡುತ್ತಿದೆ. ಈ ನೆರವನ್ನು ಪಡೆಯಲು ಅಣ್ಣ-ತಂಗಿ ಇಬ್ಬರು ಮದುವೆಯಾಗಿದ್ದರು. ಆದರೆ, ಈಗ ಸಿಕ್ಕಿಬಿದ್ದಿದ್ದಾರೆ. (ಏಜೆನ್ಸೀಸ್​)

ಇದೇ ರೀತಿಯ ಅನೇಕ ಮಂದಿ ನಕಲಿ ಮದುವೆ ಮಾಡಿಕೊಂಡಿರುವುದು ತಿಳಿದುಬಂದಿದೆ. ಸರ್ಕಾರ ಪತ್ತೆಹಚ್ಚುವ ಕೆಲಸ ಆರಂಭಿಸಿದ್ದು, ನಕಲಿ ಮದುವೆಯಾದವರು ಸಿಕ್ಕರೆ ಜೈಲಿಗೆ ಕಳುಹಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net