ಶಿವಮೊಗ್ಗ ಕ್ರಷರ್​ ಸ್ಫೋಟ; ಬುಲೆರೋ ಚಾಲಕ ಸುರಕ್ಷಿತ! ಪ್ರಕರಣಕ್ಕೆ ಟ್ವಿಸ್ಟ್

Front lead
ಶಿವಮೊಗ್ಗ ಸಮೀಪದ ಹುಣಸೋಡು ಕಲ್ಲು ಕ್ವಾರಿಯಲ್ಲಿ ಗುರುವಾರ ರಾತ್ರಿ ಸಂಭವಿಸಿದ ಸ್ಪೋಟದಲ್ಲಿ ಸಂಪೂರ್ಣವಾಗಿ ನಜ್ಜುಗುಜ್ಜಾದ ಸ್ಪೋಟಕ ತುಂಬಿದ್ದ ಲಾರಿ.
Published on

ಶಿವಮೊಗ್ಗ: ಹುಣಸೋಡು ಗ್ರಾಮದ ಕ್ರಷರ್​ನಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ ಜಿಲೆಟಿನ್​ ತುಂಬಿದ್ದ ಲಾರಿ ಮತ್ತು ಅದರ ಜತೆಯಲ್ಲೇ ಇದ್ದ ಬುಲೆರೋ ಕಾರು ಛಿದ್ರಛಿದ್ರವಾಗಿದೆ. ಘಟನೆ ನಡೆದ ಸ್ಥಳದಲ್ಲಿ ಛಿದ್ರಛಿಧ್ರಗೊಂಡ 5 ಜನರ ಮೃತದೇಹಗಳು ಸಿಕ್ಕಿದ್ದು, ಮತ್ತೊಂದು ದೇಹ ಗುರುತೇ ಸಿಗದ ಸ್ಥಿತಿಯಲ್ಲಿದೆ. ಈ ನಡುವೆ ಬುಲೆರೋ ಚಾಲಕ ಶಶಿಕುಮಾರ್ ಸುರಕ್ಷಿತವಾಗಿದ್ದಾನೆ ಎಂಬ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟಿದೆ.

ಕ್ರಷರ್‌ ಸ್ಫೋಟಕ ಅವಘಡದಲ್ಲಿ ಬುಲೆರೋ ವಾಹನ ಸಂಪೂರ್ಣ ಛಿದ್ರವಾಗಿದ್ದು, ಅದರ ಚಾಲಕ ಕೆ.ಎಚ್.ನಗರದ ಶಶಿಕುಮಾರ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸ್ಫೋಟದ ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿ ತಲೆಮರೆಸಿಕೊಂಡಿರುವ ಆತನ ಹುಡುಕಾಟ ಮುಂದುವರಿದೆ. ಈ ನಡುವೆ ಶುಕ್ರವಾರವೇ ಶಶಿಕುಮಾರ್ ತನ್ನ ತಂದೆಗೆ ಕರೆ ಮಾಡಿ ಸುರಕ್ಷಿತವಾಗಿ ಇರುವುದಾಗಿ ಹೇಳಿ ಮೊಬೈಲ್ ಆಫ್ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಇದನ್ನೂ ಓದಿರಿ ಶವಗಳ ಮೇಲೆಯೇ ಓಡಾಡಿದ ಜನ… ಬೆಚ್ಚಿಬೀಳಿಸುತ್ತೆ ಶಿವಮೊಗ್ಗದಲ್ಲಿನ ಸ್ಫೋಟದ ಭೀಕರತೆ

ಘಟನೆ ನಡೆದ ದಿನ ಸ್ಫೋಟಕ ತುಂಬಿದ್ದ ಲಾರಿ ಜತೆಯೇ ಬುಲೆರೋ ವಾಹನ ಕೂಡ ತೆರಳಿತ್ತು. ಸ್ಫೋಟದಲ್ಲಿ ಲಾರಿ ಮತ್ತು ಬುಲೆರೋ ಸ್ಫೋಟಗೊಂಡು ಛಿದ್ರವಾಗಿದ್ದು, ಘಟನಾ ಸ್ಥಳದಲ್ಲಿ ಐದು ಜನರ ಮೃತದೇಹ ಸಿಕ್ಕಿದೆ. ಮತ್ತೊಂದು ದೇಹದ ಬಿಡಿ ಭಾಗಗಳ ಮಾದರಿಯನ್ನು ಎಫ್‌ಎಸ್‌ಎಲ್‌ಗೆ ರವಾನಿಸಿದ್ದು, ಅಲ್ಲಿಂದ ವರದಿ ಬಂದ ಬಳಿಕ ಛಿದ್ರವಾದ ಈ ದೇಹ ಯಾರದ್ದು? ಎಂಬುದು ಸ್ಪಷ್ಟವಾಗಲಿದೆ. ಈ ನಡುವೆ ಶಶಿಕುಮಾರ್ ಸುರಕ್ಷಿತವಾಗಿರುವುದಾಗಿ ಹೇಳಿರುವುದು ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net