ಅರೆನಗ್ನ ಸ್ಥಿತಿಯಲ್ಲಿ ವೈದ್ಯರ ಹುಚ್ಚಾಟ! ವಿಡಿಯೋ ವೈರಲ್​....Shirtless Doctors

untitled-design-2025-10-15t111612274-68ef3538000ce
Published on

ಉತ್ತರಾಖಂಡ: ಸ್ನಾತಕೋತ್ತರ ವೈದ್ಯರ ಹಾಸ್ಟೆಲ್​ವೊಂದರಲ್ಲಿ ಪುರುಷರು (Shirtless Doctors) ತಡರಾತ್ರಿ ಪಾರ್ಟಿ ಮಾಡಿದ್ದು, ಈ ವೇಳೆ ಸ್ಥಳೀಯ ನಿವಾಸಿಗಳಿಗೆ ತೊಂದರೆ ಉಂಟಾಗಿರುವ ಘಟನೆ ಡೆಹ್ರಾಡೂನ್​ ಡೂನ್​ ಆಸ್ಪತ್ರೆಯ ಹಾಸ್ಟೆಲ್​ನಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ.

ಮಾಹಿತಿ ಪ್ರಕಾರ, ಸ್ಥಳೀಯರ ಆಕ್ಷೇಪಣೆಯ ಹೊರತಾಗಿಯು ವಿದ್ಯಾರ್ಥಿಗಳು ಗದ್ದಲ ಮಾಡಲು ಮುಂದುವರೆಸಿದ್ದಾರೆ. ಈ ವೇಳೆ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪಾರ್ಟಿಯನ್ನು ನಿಲ್ಲಿಸುವಂತೆ ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಪುರುಷ ವಿದ್ಯಾರ್ಥಿಗಳು ಅರೆನಗ್ನ ಸ್ಥಿತಿಯಲ್ಲಿದ್ದು, ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ವರದಿಯಾಗಿದೆ.

ವಿಡಿಯೋ ಎಲ್ಲೆಡೆ ಪ್ರಸಾರವಾಗುತ್ತಿದ್ದಂತೆಯೇ, ಕಾಲೇಜು ಆಡಳಿತವು ಈ ಪ್ರಕರಣದಲ್ಲಿ ಭಾಗಿಯಾಗಿರುವ ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿತು. ಪಾರ್ಟಿಯ ಸಮಯದಲ್ಲಿ ವೈದ್ಯರು ಕರ್ತವ್ಯದಲ್ಲಿ ಇರಲಿಲ್ಲ ಎಂದು ಕಾಲೇಜಿನ ಪ್ರಾಂಶುಪಾಲರಾದ ಗೀತಾ ಜೈನ್ ದೃಢಪಡಿಸಿದರು. ಈ ವಿಷಯವನ್ನು ತನಿಖೆ ಮಾಡಲಾಗುತ್ತಿದೆ ಮತ್ತು ಆಡಳಿತವು ಘಟನೆಯನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಆರೋಗ್ಯ ಕಾರ್ಯದರ್ಶಿ ಆರ್. ರಾಜೇಶ್ ಕುಮಾರ್ ಅವರಿಗೆ ವರದಿ ನೀಡಿದ್ದು, ಪಾರ್ಟಿ ಏರ್ಪಡಿಸಿದ್ದ ಪಿಜಿ ವೈದ್ಯರನ್ನು ಆಸ್ಪತ್ರೆಯಿಂದ ಹೊರಹಾಕಿ 10 ಸಾವಿರ ದಂಡವನ್ನು ವಿಧಸಲಾಗಿದೆ. ಹಾಗೆಯೇ ಘಟನೆಯಲ್ಲಿ ಭಾಗಿಯಾಗಿರುವ ವೈದ್ಯರನ್ನು ಗುರುತಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net