ರಾಸಾಯನಿಕ ಮತ್ತು ಸಿದ್ಧ ಉಡುಪು ಕಾರ್ಖಾನೆಯಲ್ಲಿ ಬೆಂಕಿ ಅವಘಡ; 16 ಜನ ಸಾವು.. Fire At Chemical And Garments Factory

At Least 16 Killed In Fire At Chemical And Garments Factory In Dhaka
Published on

ಬಾಂಗ್ಲಾದೇಶ:  ಕಾರ್ಖಾನೆಗಳಲ್ಲಿ ಭಾರಿ ಬೆಂಕಿ ಅವಘಡ ಸಂಭವಿಸಿದ್ದು, ರಾಸಾಯನಿಕ ಕಾರ್ಖಾನೆ ಮತ್ತು ಜವಳಿ ಕಾರ್ಖಾನೆಯಲ್ಲಿದ್ದ (Fire At Chemical And Garments Factory) 16 ಜನರು ಸಾವನ್ನಪ್ಪಿದ್ದಾರೆ. ಈ ಘಟನೆ ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ನಡೆದಿದೆ.

ಮೊದಲು ರಾಸಾಯನಿಕ ಕಾರ್ಖಾನೆಯ ಗೋಡೌನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತು. ನಂತರ, ಅದು ಜವಳಿ ಕಾರ್ಖಾನೆಗೆ ಹರಡಿತು. ಜವಳಿ ಕಾರ್ಖಾನೆಯಲ್ಲಿದ್ದವರು ಬೆಂಕಿಯಲ್ಲಿ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಹಲವಾರು ಜನರು ಕಾಣೆಯಾಗಿದ್ದಾರೆ. ಕುಸಿತಕ್ಕೆ ಸ್ವಲ್ಪ ಮೊದಲು ಇಲ್ಲಿ ದೊಡ್ಡ ಸ್ಫೋಟದ ಶಬ್ದ ಕೇಳಿಬಂದಿದೆ ಎಂದು ವರದಿಯಾಗಿದೆ ಎಂದು ಢಾಕಾ ಅಗ್ನಿಶಾಮಕ ಸೇವಾ ಇಲಾಖೆಯ ನಿರ್ದೇಶಕ ತಾಜುಲ್ ಇಸ್ಲಾಂ ಚೌಧರಿ ಹೇಳಿದ್ದಾರೆ.

ರಾಸಾಯನಿಕ ಕಾರ್ಖಾನೆಯ ನೌಕರರು ಸಹ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಅಗ್ನಿಶಾಮಕ ದಳದವರು ಆಗಮಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. 

ಸುರಕ್ಷತಾ ಮಾನದಂಡಗಳ ಕೊರತೆ ಅಪಘಾತಕ್ಕೆ ಕಾರಣ!

ಸುರಕ್ಷತಾ ಮಾನದಂಡಗಳ ಅನುಸರಣೆಯ ಕೊರತೆಯಿಂದಾಗಿ ಬಾಂಗ್ಲಾದೇಶದಲ್ಲಿ ಇಂತಹ ಅಪಘಾತಗಳು ಸಾಮಾನ್ಯವಾಗಿದೆ. ಕಳೆದ ವರ್ಷವೊಂದರಲ್ಲೇ, ದೇಶದಲ್ಲಿ 26,500 ಕ್ಕೂ ಹೆಚ್ಚು ಬೆಂಕಿ ಅವಘಡಗಳು ವರದಿಯಾಗಿವೆ. 2021 ರಲ್ಲಿ, ಆಹಾರ ಸಂಸ್ಕರಣಾ ಕಾರ್ಖಾನೆಯಲ್ಲಿ ಸಂಭವಿಸಿದ ಬೆಂಕಿಯಲ್ಲಿ ಹಲವಾರು ಮಕ್ಕಳು ಸೇರಿದಂತೆ 52 ಜನರು ಸಾವನ್ನಪ್ಪಿದರು.

2012 ರಲ್ಲಿ, ಢಾಕಾದ ಹೊರವಲಯದಲ್ಲಿರುವ ಜವಳಿ ಕಾರ್ಖಾನೆಯಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ 111 ಜನರು ಸಾವನ್ನಪ್ಪಿದರು ಮತ್ತು 200 ಕ್ಕೂ ಹೆಚ್ಚು ಜನರು ಗಾಯಗೊಂಡರು. ಇದನ್ನು ಬಾಂಗ್ಲಾದೇಶ ಕಂಡ ಅತ್ಯಂತ ಭೀಕರ ಅಗ್ನಿ ದುರಂತವೆಂದು ಪರಿಗಣಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net