ಕೇಂದ್ರ ಬಜೆಟ್ ನೋಡಿ ಷೇರುಪೇಟೆ ಫುಲ್ ಖುಷ್: ಗಗನಮುಖಿಯಾಯ್ತು ಸೆನ್ಸೆಕ್ಸ್!

Sensex vvani
Published on

ಮುಂಬಯಿ: ಕಳೆದ ಐದಾರು ದಿನಗಳಿಂದ ಸಾಕಷ್ಟು ಅನಿರೀಕ್ಷಿತ ಏರಿಳಿತ ಕಂಡಿದ್ದ ಷೇರುಪೇಟೆ, ಕೇಂದ್ರ ಸರ್ಕಾರದ 2021-22ರ ಬಜೆಟ್‌ನಿಂದ ತೀವ್ರ ಉತ್ತೇಜಿತಗೊಂಡಿದೆ. ಸೋಮವಾರದ ವಹಿವಾಟಿನ ಅಂತ್ಯಕ್ಕೆ ಸೆನ್ಸೆಕ್ಸ್ 2315 ಅಂಶ ಏರಿಕೆ ಕಂಡು ಅಚ್ಚರಿ ಮೂಡಿಸಿದೆ.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಆರಂಭಿಸಿದ ಕೆಲವೇ ನಿಮಿಷಗಳಲ್ಲಿ 400 ಅಂಶ ಏರಿಕೆ ಕಂಡಿದ್ದ ಸೆನ್ಸೆಕ್ಸ್ ಮಧ್ಯಾಹ್ನ 2 ಗಂಟೆಯ ಹೊತ್ತಿಗೆ 1500 ಅಂಶ ಹೆಚ್ಚಾಗಿತ್ತು. 2315 ಅಂಶ ಏರಿಕೆಯೊಂದಿಗೆ ದಿನದ ವಹಿವಾಟು ಅಂತ್ಯವಾಯಿತು. ಒಂದು ಹಂತದಲ್ಲಿ 48764.40ಗೆ ತಲುಪಿದ್ದ ಸೆನ್ಸೆಕ್ಸ್ ಕೊನೆಗೆ 48600ಕ್ಕೆ ಇಳಿದು ಕೊನೆಗೊಂಡಿತು.

ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ ಕೂಡ 646 ಅಂಶಗಳಷ್ಟು ಏರಿಕೆ ಕಂಡು 14281ಕ್ಕೆ ತಲುಪಿತು. ಈ ಹಿಂದಿನ ವಹಿವಾಟಿನ ದಿನಕ್ಕೆ ಹೋಲಿಸಿದರೆ ಇವೆರಡೂ ಕ್ರಮವಾಗಿ ಶೇಕಡಾ 5 ಮತ್ತು ಶೇ 4.74ರಷ್ಟು ಏರಿಕೆ ದಾಖಲಿಸಿದಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net