ನವದೆಹಲಿ: ವಾಯು ಮಾಲಿನ್ಯ ತಡೆಗಟ್ಟಲು ಬಜೆಟ್ನಲ್ಲಿ ಅನುದಾನ ಬಿಡುಗಡೆ ಮಾಡಿರುವುದಲ್ಲದೇ ಕೇಂದ್ರ ಸರ್ಕಾರ ನೂತನ ವಾಹನ ಸ್ಕ್ರ್ಯಾಪಿಂಗ್ ನೀತಿಯನ್ನು ಘೋಷಣೆ ಮಾಡಿದೆ.
ವಾಯು ಮಾಲಿನ್ಯ ತಡೆಗಟ್ಟಲು ಬಜೆಟ್ನಲ್ಲಿ 2,217 ಕೋಟಿ ರೂ. ಅನ್ನು 42 ನಗರ ಕೇಂದ್ರಗಳಿಗೆ ಹಂಚಿಕೆ ಮಾಡಲಾಗಿದೆ. ಇದರೊಂದಿಗೆ ಹಳೆಯ ಅಥವಾ ಅನರ್ಹ ವಾಹನಗಳನ್ನು ಹೊರ ಹಾಕಲು ಪ್ರತ್ಯೇಕವಾಗಿ ನೂತನ ವಾಹನ ಸ್ಕ್ರ್ಯಾಪಿಂಗ್ ನೀತಿಯನ್ನು ಘೋಷಣೆ ಮಾಡಲಾಗಿದೆ.
ನೂತನ ನೀತಿಯ ಮೂಲಕ ಖಾಸಗಿ ಅಥವಾ ಸ್ವಂತ ವಾಹನಗಳಿಗೆ 20 ವರ್ಷಗಳ ಬಳಿಕ ಫಿಟ್ನೆಸ್ ಪರೀಕ್ಷೆ ನಡೆಸಲಾಗುವುದು ಮತ್ತು ವಾಣಿಜ್ಯ ವಾಹನಗಳಿಗೆ 15 ವರ್ಷಗಳ ಬಳಿಕ ಫಿಟ್ನೆಸ್ ಪರೀಕ್ಷೆ ನಡೆಸಿ ಅದರ ಗುಣಮಟ್ಟಣವನ್ನು ನಿರ್ಧರಿಸಲಾಗುವುದು. ಈ ಮೂಲಕ ವಾಹನ ದಟ್ಟನೆಗೆ ಕಡಿವಾಣ ಹಾಕಲು ಸರ್ಕಾರ ನಿರ್ಧರಿಸಿದೆ.