More

    ಕೇಂದ್ರ ಬಜೆಟ್​: ಆರೋಗ್ಯ ಕ್ಷೇತ್ರಕ್ಕೆ 64,180 ಕೋಟಿ ರೂ. ಘೋಷಣೆ

    ನವದೆಹಲಿ: ಮಹಾಮಾರಿ ಕರೊನಾ ವೈರಸ್​ ಆರೋಗ್ಯ ಮಹತ್ವವನ್ನು ಇಡೀ ಜಗತ್ತಿಗೆ ಸಾರಿದ್ದು, ಈ ಹಿನ್ನೆಲೆಯಲ್ಲಿ ಪ್ರಸ್ತುತ ಬಜೆಟ್​ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ವಿಶೇಷ ಗಮನಹರಿಸಲಾಗಿದ್ದು, ಮುಂದಿನ ಆರು ವರ್ಷಗಳಲ್ಲಿ ಆರೋಗ್ಯ ಕ್ಷೇತ್ರಕ್ಕೆ 64,180 ಕೋಟಿ ರೂ. ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಘೋಷಿಸಿದ್ದಾರೆ.

    ಆರೋಗ್ಯ ಕ್ಷೇತ್ರಕ್ಕೆ ಶೇಕಡಾ 137ರಷ್ಟು ಹೆಚ್ಚು ಅನುದಾನ ನೀಡಲಾಗುವುದು. ಹೀಗಾಗಿ ಮುಂದಿನ ಆರು ವರ್ಷಗಳಲ್ಲಿ ಆರೋಗ್ಯ ಕ್ಷೇತ್ರಕ್ಕೆ 64,180 ಕೋಟಿ ವ್ಯಯಿಸಲಾಗುವುದು ಎಂದು ತಿಳಿಸಿದರು. ಇದೇ ವೇಳೆ ಹೊಸ ಹೆಲ್ತ್​ ಇನ್ಫ್ರಾ ಯೋಜನೆ ಘೋಷಿಸಿದ ಹಣಕಾಸು ಸಚಿವೆ, ಯೋಜನೆಗೆ 61 ಸಾವಿರ ಕೋಟಿ ಅನುದಾನ ಬಿಡುಗಡೆ ಮಾಡಿದರು.

    ಸಾರ್ವಜನಿಕ ಆರೋಗ್ಯ ಲ್ಯಾಬ್​ಗಳ ನಿರ್ಮಾಣ ಘೋಷಣೆ ಮಾಡಿದ ವಿತ್ತಸಚಿವೆ, 11 ರಾಜ್ಯಗಳ 3,382 ಕೇಂದ್ರಗಳಲ್ಲಿ ಲ್ಯಾಬ್​ಗಳ ನಿರ್ಮಾಣ, 20 ಮಹಾನಗರಗಳಲ್ಲಿ ರೋಗ ನಿಯಂತ್ರಣ ಕೇಂದ್ರ ಸ್ಥಾಪನೆ, 32 ವಿಮಾನ ನಿಲ್ದಾಣಗಳಲ್ಲಿ, 11 ಸೀ ಪೋರ್ಟ್​ಗಳಲ್ಲಿ ಆರೋಗ್ಯ ಕೇಂದ್ರ ಮತ್ತು 50 ತುರ್ತು ಆಪರೇಷನ್ ಕೇಂದ್ರ ಹಾಗೂ 2 ಮೊಬೈಲ್ ಆಸ್ಪತ್ರೆ ಸ್ಥಾಪನೆ ಮಾಡುವುದಾಗಿ ಘೋಷಿಸಿದರು.

    ಕೇಂದ್ರ ಬಜೆಟ್​: 2ನೇ ಮಹಾಯುದ್ಧದಂತೆ ಕರೊನಾ ಬಿಕ್ಕಟ್ಟು…

    LIVE| 2021-22ನೇ ಸಾಲಿನ ಕೇಂದ್ರ​ ಬಜೆಟ್​ ಮಂಡನೆ ಆರಂಭ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts