More

    ಕೇಂದ್ರ ಬಜೆಟ್​| ಚುನಾವಣೆ ನಡೆಯುವ ಈ 4 ರಾಜ್ಯಗಳಿಗೆ ಮಾತ್ರ ಬಂಪರ್​ ಅನುದಾನ

    ನವದೆಹಲಿ: ಮಹಾಮಾರಿ ಕರೊನಾದಿಂದ ಕಂಗೆಟ್ಟಿದ್ದ ಆರ್ಥಿಕತೆಯ ಚೇತರಿಕೆಗೆ ಒಳಗೊಂಡ ಅಂಶವನ್ನೇ ಕೇಂದ್ರವಾಗಿಸಿಕೊಂಡ 2021-22ನೇ ಸಾಲಿನ ಕೇಂದ್ರ ಬಜೆಟ್​ನಲ್ಲಿ ದೇಶದ 4 ರಾಜ್ಯಗಳಿಗೆ ಮಾತ್ರ ಬಂಪರ್​ ಆಫರ್​ ಸಿಕ್ಕಿದೆ.

    ಈ ವರ್ಷ ಕೇರಳ, ತಮಿಳುನಾಡು, ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಚುನಾವಣೆಯನ್ನೇ ಗಮನದಲ್ಲಿಟ್ಟುಕೊಂಡ ಕೇಂದ್ರ ಸರ್ಕಾರ, ಈ ನಾಲ್ಕೂ ರಾಜ್ಯಗಳ ಅಭಿವೃದ್ಧಿಗೆ ವಿಶೇಷ ಯೋಜನೆಗಳನ್ನು ಪ್ರಕಟಿಸಿದೆ. ಇದನ್ನೂ ಓದಿರಿ ಕೇಂದ್ರ ಬಜೆಟ್​| ಜನ ಸಾಮಾನ್ಯರಿಗೆ ಯಾವುದು ಅಗ್ಗ? ಯಾವುದು ದುಬಾರಿ?

    2022ರೊಳಗಾಗಿ 8,500 ಕಿ.ಮೀ ಹೆದ್ದಾರಿ ನಿರ್ಮಾಣ ಯೋಜನೆ ಗುರಿ ಹೊಂದಿರುವುದಾಗಿ ಹೇಳಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​, ಕೇರಳ, ತಮಿಳುನಾಡು, ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ರಸ್ತೆ ಅಭಿವೃದ್ಧಿಗೆ ಆದ್ಯತೆ ನೀಡುವುದಾಗಿ ಹೇಳಿದರು.

    • ತಮಿಳುನಾಡಿನಲ್ಲಿ 3,500 ಕಿ.ಮೀ. ದೂರ ರಾಷ್ಟ್ರೀಯ ಹೆದ್ದಾರಿ ಯೋಜನೆ- 1 ಲಕ್ಷ ಕೋಟಿ ರೂ. ಅನುದಾನ
    • ಚೆನ್ನೈನಲ್ಲಿ ಹೊರ ಮೆಟ್ರೋ ಮಾರ್ಗ ನಿರ್ಮಾಣಕ್ಕೆ 63,246 ಕೋಟಿ ಹಣ
    • ಕೇರಳದಲ್ಲಿ 1,100 ಕಿ.ಮೀ. ಹೊಸ ಹೆದ್ದಾರಿ ಯೋಜನೆ, ಮೂಲಸೌಕರ್ಯಕ್ಕೆ 65 ಸಾವಿರ ಕೋಟಿ ರೂ. ವೆಚ್ಚ
    • ಪಶ್ಚಿಮ ಬಂಗಾಳದಲ್ಲಿ 675 ಕಿ.ಮೀ. ಹೊಸ ಹೆದ್ದಾರಿ ನಿರ್ಮಾಣ, 25 ಸಾವಿರ ಕೋಟಿ ರೂ. ಅನುದಾನ
    • ಅಸ್ಸಾಂನಲ್ಲಿ 1,300 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಯೋಜನೆಗೆ 3,400 ಕೋಟಿ ರೂ. ಅನುದಾನ

    ರಸ್ತೆ ಅಭಿವೃದ್ಧಿಯಲ್ಲದೇ ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಚಹಾ ವ್ಯಾಪಾರಿಗಳಿಗೆ ಬಜೆಟ್​ನಲ್ಲಿ 1,000 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಈ ಎರಡೂ ರಾಜ್ಯಗಳಲ್ಲಿ ಮಹಿಳೆಯರು ಮತ್ತು ಮಕ್ಕಳ ಕಲ್ಯಾಣಕ್ಕಾಗಿ ವಿಶೇಷ ಯೋಜನೆ ಜಾರಿ ಮಾಡುವ ಬಗ್ಗೆ ಬಜೆಟ್​ನಲ್ಲಿ ನಿರ್ಮಲಾ ಸೀತಾರಾಮನ್​ ಹೇಳಿದ್ದಾರೆ.

    ಶೃಂಗೇರಿಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಮೇಲೆ 30ಕ್ಕೂ ಹೆಚ್ಚು ಜನರಿಂದ ಸಾಮೂಹಿಕ ಅತ್ಯಾಚಾರ!

    ಕೇಂದ್ರ ಬಜೆಟ್​| ಚಿನ್ನಾಭರಣ ಪ್ರಿಯರಿಗೆ ಗುಡ್​ನ್ಯೂಸ್​

    ಮಾಜಿ ಸಿಎಂ ದಿ. ಧರ್ಮಸಿಂಗ್​‌ ಸಂಬಂಧಿ ಕೊಲೆ, 10 ದಿನದ ಬಳಿಕ ಪ್ರಕರಣ ಬಯಲು

    ಕರ್ನಾಟಕದ ಈ ಊರಲ್ಲಿ 150 ಎಕರೆ ಜಮೀನು ಫ್ರೀ! ಸಿಕ್ಕಷ್ಟು ಜಾಗಕ್ಕೆ ಬೇಲಿ ಹಾಕಿದ ಜನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts