ಕೇಂದ್ರ ಬಜೆಟ್: ಮನೆ ನಿರ್ಮಾಣದ ಕನಸುಳ್ಳವರಿಗೆ ಅಗ್ಗದ ಗೃಹಸಾಲ
Published on:
Copied
Follow Us
ನವದೆಹಲಿ: ಸ್ವಂತ ಮನೆ ಹೊಂದುವ ಕನಸುಳ್ಳವರಿಗೆ 2021-22ನೇ ಸಾಲಿನ ಕೇಂದ್ರ ಬಜೆಟ್ ತುಸು ನಿರಾಳ ಎನಿಸಿದೆ. ಜನರಿಗೆ ಕೈಗೆಟಕುವ ದರದಲ್ಲೇ ವಸತಿ ಸೌಲಭ್ಯ ಸಿಗಬೇಕು ಎಂಬುದು ಕೇಂದ್ರ ಸರ್ಕಾರ ಆಶಯ. ಪ್ರಸಕ್ತ ಸಾಲಿನ ಬಜೆಟ್ನಲ್ಲಿ ವಸತಿ ಕ್ಷೇತ್ರಕ್ಕೆ ಏನೆಲ್ಲ ಸಿಕ್ಕಿದೆ ಎಂಬುದರ ಮಾಹಿತಿ ಇಲ್ಲಿದೆ.
ವಸತಿ ಯೋಜನೆಗೆ ಈ ಹಿಂದೆ ಇದ್ದ ಸಬ್ಸಿಡಿ ವಿಸ್ತರಣೆ, ಗೃಹ ಸಾಲದ ಮೇಲಿನ ಸಬ್ಸಿಡಿ ವಿಸ್ತರಣೆ, 2022ರ ಮಾರ್ಚ್ವರೆಗೆ ಸಾಲ ಪಡೆಯುವವರಿಗೂ ಅನ್ವಯ
ಅಧಿಕೃತ ಬಾಡಿಗೆ ಮನೆಗಳಿಗೆ ತೆರಿಗೆ ವಿನಾಯಿತಿ
ಕಡಿಮೆ ವೆಚ್ಚದಲ್ಲಿ ಮನೆಕಟ್ಟುವವರಿಗೆ ತೆರಿಗೆ ವಿನಾಯಿತಿ
ವಲಸೆ ಕಾರ್ಮಿಕರನ್ನು ಗಮನದಲ್ಲಿಟ್ಟು ಬಾಡಿಗೆ ಮನೆಗಳಿಗೆ ತೆರಿಗೆ ವಿನಾಯಿತಿ