More

    ಕೇಂದ್ರ ಬಜೆಟ್​: ರೈತರಿಗೆ 16.5 ಲಕ್ಷ ಕೋಟಿ ರೂ. ಸಾಲ ಸೌಲಭ್ಯ

    ನವದೆಹಲಿ: ಪ್ರಸಕ್ತ ಸಾಲಿನ ಕೇಂದ್ರ ಬಜೆಟ್​ನಲ್ಲಿ ಕೃಷಿಕರ ಆದಾಯ 5 ಪಟ್ಟು ಹೆಚ್ಚಳಕ್ಕೆ ಆದ್ಯತೆ ನೀಡಲಾಗಿದ್ದು, ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ನೀಡುವುದಾಗಿ ಹಾಗೂ ಕೃಷಿ ವಲಯಕ್ಕೆ 16.5 ಲಕ್ಷ ಕೋಟಿ ರೂಪಾಯಿ ಸಾಲ ಸೌಲಭ್ಯ ನೀಡುವುದಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಘೋಷಿಸಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸೋಮವಾರ ಮಂಡನೆಯಾದ 2021-22ನೇ ಸಾಲಿನ ಬಜೆಟ್​ನಲ್ಲಿ ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ಕಾರ್ಮಿಕರಿಗೆ ಯೋಜನೆ ತರಲಾಗಿದೆ. ಪ್ರಸಕ್ತ ವರ್ಷ ಕೇಂದ್ರ ಸರ್ಕಾರದಿಂದಲೇ ಭತ್ತ ಮತ್ತು ಗೋಧಿ ಖರೀದಿಸುವುದಾಗಿ ಹೇಳಲಾಗಿದೆ. ಅಲ್ಲದೆ ಹಲವು ಮಹತ್ತರ ಯೋಜನೆಗೂ ಆದ್ಯತೆ ನೀಡಿದ್ದು, ಅದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
    ರೈತರಿಗೆ 16.5 ಲಕ್ಷ ಕೋಟಿ ರೂಪಾಯಿ ಸಾಲ
    ಗೋಧಿ ಖರೀದಿಗೆ 75 ಸಾವಿರ ಕೋಟಿ ರೂಪಾಯಿ
    ಭತ್ತ ಖರೀದಿಗೆ 1.41 ಲಕ್ಷ ಸಾವಿರ ಕೋಟಿ ಹಣ ಮೀಸಲು
    ಪಶುಪಾಲನೆ -ಕಕ್ಕುಟೋದ್ಯಮಕ್ಕೆ ಹೆಚ್ಚಿನ ಅನುದಾನ
    ಇ ನ್ಯಾಮ್ಸ್​ನಲ್ಲಿ ಸಾವಿರಕ್ಕೂ ಅಧಿಕ ಕೃಷಿ ಮಂಡಿಗಳ ಸೇರ್ಪಡೆ
    ಕೃಷಿ ವಲಯಕ್ಕೆ 16.5 ಲಕ್ಷ ಕೋಟಿ ರೂ. ಸಾಲ ನೀಡುವ ಗುರಿ
    ದೇಶದಲ್ಲಿ 5 ಮೀನುಗಾರಿಕೆ ಹಬ್​ ಸ್ಥಾಪನೆ
    ದ್ವಿದಳ ಧಾನ್ಯಗಳ ಖರೀದಿಗೆ 10,530 ಕೋಟಿ ರೂ. ಮೀಸಲು
    ಎಪಿಎಂಸಿಗಳ ಸಬಲೀಕರಣಕ್ಕೆ ಕೇಂದ್ರದ ಯೋಜನೆ ಜಾರಿ
    ಪಶುಸಂಗೋಪನೆ, ಮೀನುಗಾರಿಕೆಗೆ 40 ಸಾವಿರ ಕೋಟಿ ರೂ.
    ಹತ್ತಿ ಬೆಳೆಗಾರರಿಗೆ 25,974 ಕೋಟಿ ರೂ. ಬೆಂಬಲ ಬೆಲೆ

    ಸ್ವಾಮಿತ್ವ ಯೋಜನೆಯಡಿ ರೈತರಿಗೆ ಮಾಲೀಕತ್ವ ಕಾರ್ಡ್, 1 ಲಕ್ಷಕ್ಕೂ ಅಧಿಕ ರೈತರಿಗೆ ಸ್ವಾಮಿತ್ವ ಕಾರ್ಡ್
    ಹಣ್ಣು, ತರಕಾರಿಗಳಿಗೆ ಆಪರೇಷನ್‌ ಗ್ರೀನ್‌ ವಿಸ್ತರಣೆ, ಕೊಳೆತುಹೋಗುವ 22 ಪದಾರ್ಥಗಳು ಆಪರೇಷನ್ ಗ್ರೀನ್ ವ್ಯಾಪ್ತಿಗೆ

    ಕೇಂದ್ರ ಬಜೆಟ್​: 2ನೇ ಮಹಾಯುದ್ಧದಂತೆ ಕರೊನಾ ಬಿಕ್ಕಟ್ಟು…

    ಮಾಜಿ ಸಿಎಂ ದಿ. ಧರ್ಮಸಿಂಗ್​‌ ಸಂಬಂಧಿ ಕೊಲೆ, 10 ದಿನದ ಬಳಿಕ ಪ್ರಕರಣ ಬಯಲು

    ಕರ್ನಾಟಕದ ಈ ಊರಲ್ಲಿ 150 ಎಕರೆ ಜಮೀನು ಫ್ರೀ! ಸಿಕ್ಕಷ್ಟು ಜಾಗಕ್ಕೆ ಬೇಲಿ ಹಾಕಿದ ಜನ

    ಶೃಂಗೇರಿಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಮೇಲೆ 30ಕ್ಕೂ ಹೆಚ್ಚು ಜನರಿಂದ ಸಾಮೂಹಿಕ ಅತ್ಯಾಚಾರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts