VIDEO| ಸೆಲ್ಫಿ ಕ್ಲಿಕ್ಕಿಸಲು ಮುಂದಾದ ಅಭಿಮಾನಿಯನ್ನು ನೂಕಿದ ಶಾರುಖ್​; ವ್ಯಾಪಕ ಟೀಕೆ

Shahrukh khan
Published on

ಮುಂಬೈ: ಬಾಲಿವುಡ್​ ನಟ-ನಟಿಯರು ಆಗೊಮ್ಮೆ ಈಗೊಮ್ಮೆ ಸಾರ್ವಜನಿಕ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಸುದ್ದಿಯಲ್ಲಿರುತ್ತಾರೆ.

ಕೆಲವೊಮ್ಮೆ ವಿವಾದವನ್ನು ತಮ್ಮ ಮೈಮೇಲೆ ಎಳೆದುಕೊಳ್ಳುವ ಸಿನಿಮಂದಿ ನಂತರ ಅದಕ್ಕೆ ತೇಪೆ ಹಚ್ಚಿ ಸರಿ ಮಾಡಲು ಇನ್ನಿಲ್ಲದ ಕಸರತ್ತನ್ನು ಮಾಡುತ್ತಾರೆ.

ಸೆಲ್ಫಿ ಕ್ಲಿಕಿಸಲು ನಿರಾಕರಣೆ

ಇದೀಗ ಈ ವಿಚಾರವಾಗಿ ಸದ್ದು ಮಾಡುತ್ತಿರುವವರು ಬಾಲಿವುಡ್ ನಟ ಶಾರುಖ್​ ಖಾನ್​. ಮುಂಬೈನ ಏರ್​ಪೋರ್ಟ್​ನಲ್ಲಿ ಅಭಿಮಾನಿ ಒಬ್ಬ ನಟನ ಜೊತೆ ಸೆಲ್ಫಿ ಕ್ಲಿಕಿಸಲು ಮುಂದಾಗುತ್ತಾನೆ.

ಇದಕ್ಕೆ ಕೋಪಗೊಂಡ ಶಾರುಖ್​ ಆತನನ್ನು ತಳ್ಳಿ ಮುಂದೆ ಹೋಗುತ್ತಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು ವ್ಯಾಪಕ ಟೀಕೆಗೆ ಗುರಿಯಾಗಿದೆ.

ಫೋಟೋ-ವಿಡಿಯೋ ವೈರಲ್​

ಇನ್ನು ರಾಜ್​ಕುಮಾರ್ ಹಿರಾನಿ ನಿರ್ದೇಶನದ ಡಂಕಿ ಚಿತ್ರದ ಚಿತ್ರೀಕರಣದ ಸಲುವಾಗಿ ಜಮ್ಮು-ಕಾಶ್ಮೀರದಲ್ಲಿ ಬೀಡು ಬಿಟ್ಟಿದ್ದು ಈ ವೇಳೆ ಅಭಿಮಾನಿಗಳ ಜೊತೆ ತೆಗೆಸಿಕೊಂಡಿರುವ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಇನ್ನು ಈ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದ್ದಂತೆ ನೆಟ್ಟಿಗರು ಮುಂಬೈ ವಿಮಾನ ನಿಲ್ದಾಣದ ಘಟನೆಯನ್ನು ತಾಳೆ ಮಾಡಿ ಟೀಕಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net