ಮೃತ ದೇಹದೊಂದಿಗೆ ಸಂಭೋಗ; ಲೈಂಗಿಕ ಯೋಚನೆ ಭಯಾನಕ ಆದರೆ.... : ಹೈಕೋರ್ಟ್​ ಅಭಿಪ್ರಾಯ | High Court

dk (11)
Published on

ನವದೆಹಲಿ: ಒಬ್ಬ ವ್ಯಕ್ತಿಯು ಮೃತದೇಹದೊಂದಿಗೆ ಲೈಂಗಿಕ ಸಂಭೋಗದಲ್ಲಿ ತೊಡಗುವುದು ಅತ್ಯಂತ ಭಯಾನಕ ಕೃತ್ಯಗಳಲ್ಲಿ ಒಂದಾಗಿದೆ. ಆದರೆ, ಈ ಅಪರಾಧವು ಭಾರತೀಯ ದಂಡ ಸಂಹಿತೆ ಐಪಿಸಿ ಸೆಕ್ಷನ್​ 376ರ ಅಡಿ ಅಥವಾ ಪೋಕ್ಸ್​ ಕಾಯ್ದೆಯಡಿಯಲ್ಲಿ ಬರುವುದಿಲ್ಲ ಎಂದು ಛತ್ತಿಸ್​ಘಡ ಹೈಕೋಟ್​​(High Court )ಅಭಿಪ್ರಾಯಪಟ್ಟಿದೆ.

ಅಪ್ರಾಪ್ತ ಬಾಲಕಿಯ ಮೃತದೇಹ (ನೆಕ್ರೋಫಿಲಿಯಾ) ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಮೊಕದ್ದಮೆ ಹೂಡಿದ್ದ ನೀಲು ನಾಗೇಶ್ ಎಂಬಾತನನ್ನು ಖುಲಾಸೆಗೊಳಿಸಿರುವುದನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಅಲ್ಲದೆ, ಇತರ ಅಪರಾಧಗಳಿಗೆ ಶಿಕ್ಷೆಗೆ ಗುರಿಯಾಗಿದ್ದರೂ ಸಹ ಈ ಇದೇ ಅಭಿಪ್ರಾಯ ವ್ಯಕ್ತಪಡಿಸಿದೆ.

ಇಂತಹ ಸೆಕ್ಷನ್​ಗಳು ಸಂತ್ರಸ್ತೆ ಜೀವಂತವಾಗಿರುವಾಗ ಮಾತ್ರ ಅನ್ವಯಿಸುತ್ತವೆ. ಆರೋಪಿ-ನೀಲಕಂಠ ಅಲಿಯಾಸ್ ನೀಲು ನಾಗೇಶ್ ಮೃತದೇಹದ ಮೇಲೆ ಅತ್ಯಾಚಾರ ಎಸಗಿರುವ ಅಪರಾಧವು ಒಬ್ಬರು ಯೋಚಿಸಬಹುದಾದ ಅತ್ಯಂತ ಭೀಕರ ಅಪರಾಧಗಳಲ್ಲಿ ಒಂದಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ರಮೇಶ್ ಅವರ ಪೀಠವು ಹೇಳಿದೆ.

ಈ ಹಿಂದೆ ನಾಗೇಶ್ ಮತ್ತು ಇತರ ಆರೋಪಿಗಳಾದ ನಿತಿನ್ ಯಾದವ್ ವಿರುದ್ಧ ಐಪಿಸಿ ಮತ್ತು ಪೋಕ್ಸೋ ಕಾಯ್ದೆಯಡಿ ವಿವಿಧ ಅಪರಾಧಗಳಿಗೆ ಶಿಕ್ಷೆ ವಿಧಿಸಲಾಗಿದೆ. ಯಾದವ್ ಎಂಬ ವ್ಯಕ್ತಿ ಅತ್ಯಾಚಾರ, ಅಪಹರಣ ಮತ್ತು ಕೊಲೆಯ ಅಪರಾಧಿ ಎಂದು ಸಾಬೀತಾಗಿದ್ದು, ಜೀವಾವಧಿ ಶಿಕ್ಷೆ ವಿಧಿಸಲಾಯಿತು.

ಇನ್ನು ನಾಗೇಶ್, ಯಾದವ್ ಸಹಾಯಕ ಕೆಲಸಗಾರ ಇತನಿಗೂ ಸೆಕ್ಷನ್ 201 (ಅಪರಾಧದ ಸಾಕ್ಷ್ಯಾಧಾರಗಳನ್ನು ಕಣ್ಮರೆಯಾಗುವಂತೆ ಮಾಡುವುದು ಅಥವಾ ಅಪರಾಧಿಗಳಿಗೆ ತಪ್ಪು ಮಾಹಿತಿ ನೀಡುವುದು) ಮತ್ತು 34 (ಸಾಮಾನ್ಯ ಉದ್ದೇಶಕ್ಕಾಗಿ ಹಲವಾರು ವ್ಯಕ್ತಿಗಳು ಮಾಡಿದ ಕೃತ್ಯಗಳು) ಅಡಿಯಲ್ಲಿ ಅಪರಾಧಿ ಎಂದು ಘೋಷಿಸಲಾಯಿತು ಮತ್ತು ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಇತನಿಗೂ ಮರಣದಂಡನೆ ವಿಧಿಸಬೇಕು ಎಂದು ಸಂತ್ರಸ್ತರ ಪರ ವಾದ ಮಂಡಿಸಲಾಗಿತ್ತು,(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net