ನನ್ನ ಬಾಯ್​ಫ್ರೆಂಡ್​​ ಸಬ್​​ಇನ್​​ಸ್ಪೆಕ್ಟರ್​​​​​... Metro ರೈಲಿನಲ್ಲಿ ಮಹಿಳೆ ಮೇಲೆ ಹುಡುಗಿ ಜಬರ್ದಸ್ತ್​​​​​​​; ಮುಂದೇನಾಯ್ತು ನೀವೇ ನೋಡಿ

Ladies Fight
Published on

ನವದೆಹಲಿ: ಸದಾ ಒಂದಿಲ್ಲೊಂದು ಕಾರಣಕ್ಕೆ ರಾಷ್ಟರಾಜಧಾನಿ ನವದೆಹಲಿಯ ಜೀವನಾಡಿ ಮೆಟ್ರೋ (Metro) ಸುದ್ದಿಯಲ್ಲಿರುತ್ತದೆ. ಪ್ರೇಮಿಗಳ ಅಸಭ್ಯ ವರ್ತನೆ, ರೀಲ್ಸ್​ಗಾಗಿ ಹುಚ್ಚಾಟ ಹಾಗೂ ಸೀಟಿಗಾಗಿ ಪ್ರಯಾಣಿಕರು ಸದಾ ಕಿತ್ತಾಡುತ್ತಲೇ ಇರುವುದನ್ನು ನಾವು ನೋಡುತ್ತಲೇ ಇರುತ್ತೇವೆ. ಇದೀಗ ದೆಹಲಿ ಮೆಟ್ರೋದಲ್ಲಿ ಇಬ್ಬರು ಮಹಿಳೆಯರು ಕಿತ್ತಾಡಿಕೊಂಡಿರುವ ಘಟನೆ ನಡೆದಿದ್ದು, ಸದ್ಯ ಈ ವಿಡಿಯೋ ವೈರಲ್​ ಆಗಿದೆ.

ವೈರಲ್​ ಆಗಿರುವ ವಿಡಿಯೋ ನೋಡುವುದಾದರೆ ಯುವತಿಯೊಬ್ಬಳು ಮಹಿಳೆಗೆ ನನ್ನ ಹುಡುಗ ದೆಹಲಿಯಲ್ಲಿ ಪೊಲೀಸ್​ ಇನ್ಸ್​ಪೆಕ್ಟರ್​ ಆಗಿ ಕೆಲಸ ಮಾಡುತ್ತಿದ್ದು, ಅವನಿಗೆ ಹೇಳಿ ನಿಮ್ಮನ್ನು ಒಳಗೆ ಹಾಕಿಸುತ್ತೇನೆ ಎಂದು ಯುವತಿ ಹೇಳುತ್ತಾಳೆ. ಇದಕ್ಕೆ ಪ್ರತಿಕ್ರಿಯಿಸುವ ಮಹಿಳೆ ಕರೆಸು ನೋಡುವ ಏನು ಮಾಡುತ್ತಾನೆಂದು ಅವಾಜ್​ ಹಾಕಿದ್ದಾರೆ. ಇದಕ್ಕೆ ವಿಚಲಿಳಾದಂತೆ ಕಂಡ ಯುವತಿ ಏನು ಮಾಡದೆ ಸುಮ್ಮನೇ ಹೋಗುತ್ತಾಳೆ. ಆದರೆ, ಯಾವ ಕಾರಣಕ್ಕೆ ಇವರಿಬ್ಬರು ಕಿತ್ತಾಡಿಕೊಂಡಿದ್ಧಾರೆ ಎಂಬುದು ಈವರೆಗೂ ಸ್ಪಷ್ಟವಾಗಿಲ್ಲ.

ದೆಹಲಿ ಮೆಟ್ರೋದಲ್ಲಿ ಈ ರೀತಿ ಜಗಳವಾಗುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮುನ್ನ ಅನೇಕ ಬಾರಿ ಈ ರೀತಿ ಗಲಾಟೆಗಳಾಗಿದ್ದು, ಕೆಲ ದಿನಗಳ ಹಿಂದೆ ಇಬ್ಬರು ಮಹಿಳೆಯರು ಕಿತ್ತಾಡಿಕೊಂಡು ತಳ್ಳಾಡಿಕೊಂಡಿದ್ದರು. ಇದಲ್ಲದೆ ಇಬ್ಬರು ವ್ಯಕ್ತಿಗಳು ಸೀಟಿನ ವಿಚಾರವಾಗಿ ಚಪ್ಪಲಿಯಲ್ಲಿ ಹೊಡೆದಾಡಿಕೊಂಡಿದ್ದರು ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸಖತ್ ವೈರಲ್​ ಆಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net