

ನವದೆಹಲಿ: ಪ್ರಸ್ತುತ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಭಾರತ ತಂಡವು 1-1 ಸಮಬಲ ಸಾಧಿಸಿದ್ದು, ಮುಂಬರುವ ಎರಡು ಪಂದ್ಯಗಳಲ್ಲಿ ಗೆದ್ದರೆ ಮಾತ್ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ಹಾದಿ ಸುಗಮವಾಗಲಿದೆ. ಇನ್ನೂ ಟೀಮ್ ಇಂಡಿಯಾವನ್ನು ಯಶಸ್ವಿಯಾಗಿ ಮುನ್ನಡೆಸಿದ ಸಾಲಿನಲ್ಲಿ ರೋಹಿತ್ ಶರ್ಮ (Rohit Sharma) ಸ್ಥಾನ ಪಡೆದಿದ್ದು, ಇವರ ಕ್ಯಾಪ್ಟನ್ಸಿಯಲ್ಲಿ ತಂಡವು ಉತ್ತಮ ಪ್ರದರ್ಶನ ನೀಡಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಹಿಟ್ಮ್ಯಾನ್ ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿದ್ದು, ಫಾರ್ಮ್ ಕಂಡುಕೊಳ್ಳಲು ಪರದಾಡುತ್ತಿದ್ದಾರೆ. ಇದಕ್ಕೆ ಉತ್ತಮ ನಿದರ್ಶನ ಎಂದರೆ ಪ್ರಸ್ತುತ ಹಾೂಗೂ ಈ ಹಿಂದಿನ ಸರಣಿ ಎಂದರೆ ತಪ್ಪಾಗಲಾರದು.
ಫಾರ್ಮ್ ಕಂಡುಕೊಳ್ಳಲು ರೋಹಿತ್ (Rohit Sharma) ಪರದಾಡುತ್ತಿರುವ ನಡುವೆಯೇ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಮಾಜಿ ಆಟಗಾರ ಹರ್ಷಲ್ ಗಿಬ್ಸ್ ಹಿಟ್ಮ್ಯಾನ್ರನ್ನು ಅನ್ಫಿಟ್ ಎಂದು ಕರೆದಿದ್ದು, ಭಾರತೀಯ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹರ್ಷಲ್ ಗಿಬ್ಸ್ (Herschelle Gibbs) ಈ ರೀತಿ ಮಾತನಾಡಿದ್ದಾರೆ.
ನಾನೂ ಕೆಲವೊಂದು ವಿಚಾರವಾಗಿ ಯಾರ ಹೆಸರನ್ನು ಉಲ್ಲೇಖಿಸುವ ಅಗತ್ಯವಿಲ್ಲ ಎಂದು ಭಾವಿಸುತ್ತೇನೆ. ಟಿವಿಯಲ್ಲಿ ಎಲ್ಲವನ್ನೂ ನೀವು ನೋಡಬಹುದಾಗಿದೆ. ಅನರ್ಹರು ಹಾಗೂ ಹೆಚ್ಚು ತೂಕವನ್ನು ಹೊಂದಿರುವವರನ್ನು ನೋಡಲು ಇಡೀ ಜಗತ್ತು ಇರುತ್ತದೆ. ಈ ವಿಚಾರ ಅವರಿಗೆ ಬಿಟ್ಟಿದ್ದು, ರೋಹಿತ್ ಬೌಲ್ ಮಾಡುವುದಿಲ್ಲ ಎಂದು ಭಾವಿಸುತ್ತೇನೆ. ನೀವು ಬೌಲರ್ ಅಥವಾ ಬ್ಯಾಟರ್ ಆಗಿದ್ದರೆ, ಫಿಟ್ ಆಗಿ ತಂಡಕ್ಕೆ ನಿಮ್ಮ ಉಪಯುಕ್ತ ಕೊಡುಗೆಯನ್ನು ನೀಡುವುದು ನಿಮ್ಮ ಕರ್ತವ್ಯ.
ಇವರೆಲ್ಲರೂ ಅನ್ಫಿಟ್ ಎಂದು ನಾನು ಭಾವಿಸುತ್ತೇನೆ. ಚಾಂಪಿಯನ್ಸ್ ಟ್ರೋಫಿ ಹತ್ತಿರದಲ್ಲಿದ್ದು, ನೀವು ಬದಲಾಗುವ ಮೂಲಕ ತಂಡಕ್ಕೆ ಏನು ಕೊಡುಗೆ ಕೊಡುತ್ತೀರಿ ಎಂಬುದು ಬಹಳ ಮುಖ್ಯವಾಗಿದೆ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಮಾಜಿ ಆಟಗಾರ ಹರ್ಷಲ್ ಗಿಬ್ಸ್ (Herschelle Gibbs) ಹಿಟ್ಮ್ಯಾನ್ (Rohit Sharma) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.