1ರೂ., 2 ರೂ. ನಾಣ್ಯಗಳು... ₹80,000 ಚೀಲದಲ್ಲಿ ತುಂಬಿಕೊಂಡು ಕೋರ್ಟ್​​ಗೆ ಬಂದ ವ್ಯಕ್ತಿ

Coimbatore Court
Published on

ಚೆನ್ನೈ: ಟ್ಯಾಕ್ಸಿ ಚಾಲಕರೊಬ್ಬರು 1 ಹಾಗೂ 2 ರೂ. ಮುಖಬೆಲೆಯ ಎಂಭತ್ತು ಸಾವಿರ ರೂಪಾಯಿಗಳ ನಾಣ್ಯಗಳನ್ನು ತುಂಬಿಕೊಂಡು ಬಂದು ಕೊಯಮತ್ತೂರಿನ ಕೌಟುಂಬಿಕ ನ್ಯಾಯಾಲಯಕ್ಕೆ ಪಾವತಿಸಿರುವ ಘಟನೆ ವರದಿಯಾಗಿದೆ. 

ವರದಿಗಳ ಪ್ರಕಾರ, ಟ್ಯಾಕ್ಸಿ ಚಾಲಕನ ಪತ್ನಿ ಒಂದು ವರ್ಷದ ಹಿಂದೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು, 2 ಲಕ್ಷ ರೂ. ಜೀವನಾಂಶವನ್ನು ಪಾವತಿಸಲು ನ್ಯಾಯಾಲಯವು ಆದೇಶಿಸಿತ್ತು. ಆದರೆ ಆತನು ನೋಟಿನ ಬದಲಾಗಿ ಸೇಡಿನ ಕ್ರಮವಾಗಿ ನಾಣ್ಯಗಳಲ್ಲಿ ಹಣ ಪಾವತಿಸಿದ್ದು, ಡಿಸೆಂಬರ್​ 18ರಂದು ಈ ಘಟನೆ ನಡೆದಿದೆ.

ಪತ್ನಿಯ ಮೇಲಿನ ಸೇಡಿನ ಕ್ರಮವಾಗಿ ವ್ಯಕ್ತಿಯು ನೋಟುಗಳ ಬದಲಾಗಿ ಚಿಲ್ಲರೆಯಲ್ಲಿ ನೀಡಿದ್ದು, ವ್ಯಕ್ತಿಯ ಈ ನಡೆಗೆ ಕೋರ್ಟ್​ ಗರಂ ಆಗಿದೆ. ಇದಲ್ಲದೆ ಆತ ಉಳಿದ 1.20 ಲಕ್ಷ ರೂಪಾಯಿ ಮೊತ್ತ ಕೊರತೆ ಇದೆ ಎಂದು ನ್ಯಾಯಾಲಯಕ್ಕೆ ಹೇಳಿದ್ದು, ನ್ಯಾಯಾಧೀಶರು ಆತನಿಗೆ ಚಿಲ್ಲರೆ ಬದಲಾಗಿ ಒಟ್ಟು ಮೊತ್ತ 2 ಲಕ್ಷ ರೂಪಾಯಿಯನ್ನು ನೋಟುಗಳಲ್ಲಿ ಸಲ್ಲಿಸುವಂತೆ ಸೂಚಿಸಿದ್ದಾರೆ.

ಸದ್ಯ ವ್ಯಕ್ತಿ ಚಿಲ್ಲರೆ ತುಂಬಿಕೊಂಡು ಕೋರ್ಟ್​ ಪ್ರವೇಶಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಹಲವರು ವ್ಯಕ್ತಿಯ ನಡೆಯನ್ನು ಖಂಡಿಸಿದ್ದಾರೆ. ಕೆಲವರು ವಿಚ್ಛೇದನ ನೀಡಿದ ಪತ್ನಿಯದ್ದೆ ತಪ್ಪು ಎಂದು ಹೇಳಿದ್ದು, ಕೆಲವರು ನಾಣ್ಯಗಳನ್ನು ತಿರಸ್ಕರಿಸಿದ ನ್ಯಾಯಾಧೀಶರ ಕ್ರಮವನ್ನು ಖಂಡಿಸಿ ಕಮೆಂಟ್​ ಹಾಕುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net