ಅಂಚೆ ಮೂಲಕ ಮದ್ಯ ಮಾರಾಟ!; ಪೋಸ್ಟ್​ ಮಾಸ್ಟರ್​ನ ಬಂಧನ; ಪ್ರಕರಣ ಬೆಳಕಿಗೆ ಬಂದಿದ್ದೇಗೆ? | Postmaster

dk - 2025-04-15T165433.929
Published on

Postmaster : ಗುಜರಾತ್​ನಲ್ಲಿ ಕಳ್ಳಸಾಗಣಿಕೆದಾರರು ಭಾರತೀಯ ಅಂಚೆ ಸೇವೆಯ ಮೂಲಕ ಮದ್ಯ ಮಾರಾಟ ಮಾಡುವ ಪ್ರಕರಣವನ್ನು ಪೊಲೀಸರು ಇತ್ತೀಚಿಗೆ ಭೇದಿಸಿದ್ದಾರೆ.

ದಿಯು-ಗುಜರಾತ್​ ಗಡಿಯಲ್ಲಿ ದಿನನಿತ್ಯ ಅಂಚೆ ಮೂಲಕ ಅಧಿಕೃತ ಅಂಚೆ ಚೀಟಿಗಳ ತುಂಬಿದ ಚೀಲಗಳಲ್ಲಿ ಮದ್ಯವನ್ನು ಸಾಗಿಸುತ್ತಿದ್ದರು. ಇದರಿಂದ ಗಡಿಯಲ್ಲಿನ ಪೊಲೀಸರ ಕಣ್ತಪ್ಪಿಸಬಹುದು ಎಂದು ಖದೀಮರು ನಂಬಿದ್ದರು. ಆದರೆ, ಪಾರ್ಸೆಲ್​​ ಚೀಲಗಳು ತುಂಬಿದನ್ನು ಶಂಕೆ ವ್ಯಕ್ತಪಡಿಸಿದ ಅಧಿಕಾರಿಗಳು ಪರಿಶೀಲನೆಗೆ ಇಳಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

ಪ್ರಕರಣ ಬೆಳಕಿಗೆ ಬಂದಿದ್ದೇಗೆ..?

ಡಿಯುನಿಂದ ಕೇವಲ 15 ಕಿ.ಮೀ ದೂರದಲ್ಲಿರುವ ಉನಾಪಟ್ಟದ ಪೊಲೀಸರು, ದೆಲ್ವಾಡದಿಂದ ದ್ವಿಚಕ್ರ ವಾಹನದಲ್ಲಿ ಅಂಚೆ ಕಚೇರಿಯ ಬೃಹತ್​ ಚೀಲಗಳನ್ನು ಹೊತ್ತುಕೊಂಡು ಬರುತ್ತಿದ್ದವನನ್ನು ಪೊಲೀಸರು ಬಂಧಿಸಿದ್ದಾರೆ. ವಾಹನ ಚಾಲಕ ಶಂಕಿತ ನಯನ್​ ಜೆತ್ವಾ ಎಂದು ಗುರುತಿಸಲಾಗಿದ್ದು, ಇತನ ಬಳಿ ಇದ್ದ ವಿವಿಧ ಬ್ರಾಂಡ್​ನ 19 ಬಾಟಲಿಗಳನ್ನು ವಶಪಡಿಸಿಕೊಂಡಿದ್ದಾರೆ.

ವಿಚಾರಣೆಯ ಸಮಯದಲ್ಲಿ ಆರೋಪಿ ನಯನ್​ ಜೆತ್ವಾ, ಈ ಒಟ್ಟಾರೆ ಪ್ರಕರಣದಲ್ಲಿ ತನ್ನ ಸ್ನೇಹಿತ, ಪೋಸ್ಟ್​ ಮಾಸ್ಟರ್​ ಮಯೂರ್​ ಗೋಹಿಲ್​ ಕೈವಾಡ ಇದೆ ಎಂದು ಅಧಿಕಾರಿಗಳ ಬಳಿ ಒಪ್ಪಿಕೊಂಡಿದ್ದಾನೆ ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಗಮನವನ್ನು ತಪ್ಪಿಸಲು ಗೋಹಿಲ್ ಬಾಟಲಿಗಳನ್ನು ಹೊಂದಿರುವ ಚೀಲದ ಮೇಲೆ ಅಂಚೆ ಚೀಟಿಗಳನ್ನು ಅಂಟಿಸಿ ಅಧಿಕೃತ ಇಂಡಿಯಾ ಪೋಸ್ಟ್ ವಾಹನಗಳಿಗೆ ಲೋಡ್ ಮಾಡುವ ಮೂಲಕ ಕಾರ್ಯಾಚರಣೆ ಪೂರ್ಣಗೊಳಸಿಸುತ್ತಿದ್ದೇವು ಎಂದು ಆರೋಪಿ ಹೇಳಿದ್ದಾನೆ. ಇನ್ನು ಪ್ರಕರಣದಲ್ಲಿ ಪೋಸ್ಟ್​ ಮಾಸ್ಟರ್​ ಅನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಠಾಣೆಯ ಇನ್​ಸ್ಪೆಕ್ಟರ್​ ರಾಣಾ ತಿಳಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net