

ಕೊಪ್ಪ : ಸಮಾಜದ ಕಟ್ಟ ಕಡೆಯ ಜನರ ಧ್ವನಿಯಾಗಿ ಅವರಲ್ಲಿ ಆತ್ಮವಿಶ್ವಾಸ ಮೂಡಿಸಬೇಕು. ಅಧಿಕಾರಿಗಳು, ಜನಪ್ರತಿನಿಧಿಗಳು ನೊಂದವರಿಗೆ ಧ್ವನಿಯಾಗಬೇಕು ಎಂದು ಭದ್ರ ಕಾಡಾ ಅಧ್ಯಕ್ಷ ಕೆ.ಪಿ.ಅಂಶುಮಂತ್ ಹೇಳಿದರು.
ಪುರಭವನದಲ್ಲಿ ಆಯೋಜಿಸಿದ್ದ ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಮ್ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರಜಾತಂತ್ರ ವ್ಯವಸ್ಥೆ ಅಂಬೇಡ್ಕರ್ ಅವರ ಕಲ್ಪನೆ. ಸಂವಿಧಾನಕ್ಕೆ ಅಪಾಯ ಎದುರಾದಾಗ ಅದನ್ನು ರಕ್ಷಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ಸಂವಿಧಾನವನ್ನು ನಾವು ರಕ್ಷಿಸಿದರೆ, ನಮ್ಮನ್ನು ಸಂವಿಧಾನ ರಕ್ಷಿಸುತ್ತದೆ ಎಂದು ತಿಳಿಸಿದರು.
ತಾಪಂ ಇಒ ನವೀನ್ ಕುಮಾರ್ ಮಾತನಾಡಿ, ಭಾರತ ಸ್ವಾತಂತ್ರ್ಯ ಪಡೆದಾಗ ಸ್ವಾತಂತ್ರ್ಯಪಡೆದ ದೇಶಗಳು ರಾಜಕೀಯ ಅಸ್ತಿರತೆಯಲ್ಲಿವೆ. ಆದರೆ ನಮ್ಮ ದೇಶ ಅಭಿವೃದ್ಧಿ ದಿಕ್ಕಿನಲ್ಲಿ ಸಾಗುತ್ತಿದೆ ಎಂದರೆ ಅಂಬೇಡ್ಕರ್ ಕೊಟ್ಟ ಸಂವಿಧಾನ ಕಾರಣ. ಮಹಾತ್ಮರನ್ನು ದೇವರಾಗಿ ಪೂಜಿಸುವ ಬದಲು ಅವರ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು. ಅಸಮಾನತೆ ನಿವಾರಿಸಿ ಸಮ ಸಮಾಜ ನಿರ್ಮಿಸುವ ಮೂಲಕ ಮಹಾತ್ಮರಿಗೆ ಗೌರವ ಸಲ್ಲಿಸಬೇಕಿದೆ ಎಂದರು.
ತಹಸೀಲ್ದಾರ್ ಲಿಖಿತ ಮೋಹನ್, ಕೆಡಿಪಿ ಸದಸ್ಯರಾದ ರಾಜಶಂಕರ್, ಚಿಂತನ್ಬೆಳಗೊಳ, ಅಶೋಕ್ನಾರ್ವೆ,ಪಪಂ ಸದಸ್ಯ ರಶೀದ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಜಿ.ಆರ್.ಸತೀಶ್, ರಾಜೇಂದ್ರ, ಜಿ.ಎನ್.ಧನಂಜಯ್ ಮೂರ್ತಿ, ವಾಸಪ್ಪ, ಹೊಸಮಕ್ಕಿ ರತ್ನಾಕರ್, ಗೋಪಾಲ ಕೃಷ್ಣ, ರವೀಂದ್ರ ಕವಡೆಕಟ್ಟೆ, ಮರಿಯಪ್ಪ, ಗುಲಾಬಿ, ಬಿಇಒ ಜ್ಯೋತಿ, ಚಂದ್ರಕಾಂತ್ ಇದ್ದರು.