ಎಫ್​ಡಿ ಬಡ್ಡಿದರ ಹೆಚ್ಚಿಸಿದ ಎಸ್​ಬಿಐ

SBI
Published on

ನವದೆಹಲಿ : ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ ಸ್ಥಿರ ಠೇವಣಿಗಳ (ಎಫ್​ಡಿ) ಬಡ್ಡಿದರವನ್ನು ಹೆಚ್ಚಿಸಿದೆ. ಈ ಬಡ್ಡಿ ದರವು 2 ಕೋಟಿ ರೂಪಾಯಿಗಿಂತ ಕಡಿಮೆ ಎಫ್​ಡಿಗಳಿಗೆ ಅನ್ವಯಿಸುತ್ತದೆ. ಹೊಸ ದರವು 2023 ಡಿಸೆಂಬರ್​ 27ರಿಂದ ಜಾರಿಗೆ ಬರುತ್ತದೆ. ಒಂದು ವರ್ಷದಿಂದ 2 ವರ್ಷಕ್ಕಿಂತ ಕಡಿಮೆ, 2 ವರ್ಷದಿಂದ 3 ವರ್ಷಕ್ಕಿಂತ ಕಡಿಮೆ ಮತ್ತು ಐದು ವರ್ಷದಿಂದ 10 ವರ್ಷಗಳನ್ನು ಹೊರತುಪಡಿಸಿ ಎಲ್ಲ ಅವಧಿಗಳ ಮೇಲಿನ ದರವನ್ನು ಹೆಚ್ಚಿಸಿದೆ.

7 ದಿನಗಳಿಂದ 45 ದಿನಗಳ ನಡುವಿನ ಅವಧಿಯ ಠೇವಣಿಗಳ ಮೇಲಿನ ಬಡ್ಡಿ ದರವನ್ನು 3 ಪ್ರತಿಶತದಿಂದ ಶೇ.3.50ರಷ್ಟು ಹೆಚ್ಚಿಸಿದೆ. 46 ದಿನಗಳಿಂದ 179 ದಿನಗಳ ನಡುವಿನ ಅವಧಿಯ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಶೇ.4.50 ರಿಂದ ಶೇ.4.75 ಕ್ಕೆ ಅಂದರೆ 25 ಬೇಸಿಸ್​ ಪಾಯಿಂಟ್​, 180 ದಿನಗಳಿಂದ 210 ದಿನಗಳವರೆಗೆ ಅವಧಿಗೆ 25 ಬಿಪಿಎಸ್​ ಬಡ್ಡಿದರವನ್ನು 5.25 ಪ್ರತಿಶತದಿಂದ 5.75 ಪ್ರತಿಶತಕ್ಕೆ ಹೆಚ್ಚಿಸಿದೆ.

211 ದಿನಗಳಿಂದ 1 ವರ್ಷಕ್ಕಿಂತ ಕಡಿಮೆ ಅವಧಿಯ ಎ್​ಡಿಗಳ ಮೇಲಿನ ಬಡ್ಡಿ ದರವನ್ನು 5.75 ಪ್ರತಿಶತದಿಂದ 6 ಪ್ರತಿಶತಕ್ಕೆ ಹೆಚ್ಚಿಸಲಾಗಿದೆ. ಮೂರು ವರ್ಷದಿಂದ ಐದು ವರ್ಷಕ್ಕಿಂತ ಕಡಿಮೆ ಅವಧಿಯ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಶೇ.6.50ರಿಂದ ಶೇ.6.75ಕ್ಕೆ ಹೆಚ್ಚಿಸಲಾಗಿದೆ. ಹಿರಿಯ ನಾಗರಿಕರು ಈ ಠೇವಣಿಗಳ ಮೇಲೆ ಹೆಚ್ಚುವರಿ 50 ಬೇಸಿಸ್​ ಪಾಯಿಂಟ್​ಗಳನ್ನು (ಬಿಪಿಎಸ್​) ಪಡೆಯುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net