ಅಕೌಂಟ್​ನಲ್ಲಿ 500 ರೂಪಾಯಿ ಬ್ಯಾಲೆನ್ಸ್​ ಕಡ್ಡಾಯ! ಇಂದಿನಿಂದಲೇ ಹೊಸ ನಿಯಮ ಜಾರಿ

bank
Published on

ನವದೆಹಲಿ: ನಿಮ್ಮ ಬ್ಯಾಂಕ್​ ಖಾತೆಯಲ್ಲಿ 500 ರೂಪಾಯಿ ಹಣ ಇದೆಯೇ? ಒಂದು ವೇಳೆ ಅಷ್ಟು ಹಣವನ್ನು ನೀವು ಕನಿಷ್ಟ ಉಳಿತಾಯವಾಗಿ ಇಟ್ಟಿಲ್ಲವೆಂದರೆ ದಂಡ ಕಟ್ಟಬೇಕಾಗಬಹುದು. ಈ ರೀತಿಯ ನಿಯಮ ಈಗಾಗಲೇ ಹಲವು ಬ್ಯಾಂಕುಗಳಲ್ಲಿದೆ. ಇದೀಗ ಮತ್ತೊಂದು ಬ್ಯಾಂಕ್​ ಈ ನಿಮಯವನ್ನು ಜಾರಿಗೊಳಿಸಿದೆ.

ಪೋಸ್ಟ್​ ಆಫೀಸ್​ ಬ್ಯಾಂಕಿಂಗ್​ನಲ್ಲಿ ಇದೀಗ ಈ ನಿಯಮವನ್ನು ಜಾರಿಗೊಳಿಸಲಾಗಿದೆ. ನಿಮ್ಮ ಖಾತೆಯಲ್ಲಿ 500 ರೂಪಾಯಿ ಹಣ ಇಡುವುದು ಕಡ್ಡಾಯ. ಆರ್ಥಿಕ ವರ್ಷದ ಅಂತ್ಯದ ವೇಳೆಗೆ ನಿಮ್ಮ ಖಾತೆಯಲ್ಲಿ 500 ರೂಪಾಯಿ ಇಲ್ಲವಾದಲ್ಲಿ, ನಿಮ್ಮ ಖಾತೆಯಿಂದ 100 ರೂಪಾಯಿ ಕಡಿತ ಮಾಡಲಾಗುವುದು. ಇನ್ನು ಮುಂದೆ ಹಣ ತೆಗೆಯುವಾಗ ಕನಿಷ್ಟ ಉಳಿತಾಯ 500 ರೂಪಾಯಿ ಇರುವಂತೆ ನೋಡಿಕೊಳ್ಳಲಾಗುವುದು ಎಂದು ಪೋಸ್ಟ್​ ಆಫೀಸ್​ ಬ್ಯಾಂಕ್​ ತಿಳಿಸಿದೆ. ಡಿಸೆಂಬರ್​​ 11ರಿಂದಲೇ ಈ ನಿಯಮ ಜಾರಿಯಾಗುವುದಾಗಿ ತಿಳಿಸಲಾಗಿದೆ.

ಪೋಸ್ಟ್​ ಆಫೀಸ್​ ಬ್ಯಾಂಕಿನಲ್ಲಿ ಪ್ರಸ್ತುತ ಉಳಿತಾಯಕ್ಕೆ ಶೇ. 4 ಬಡ್ಡಿದರದಲ್ಲಿ ಬಡ್ಡಿ ನೀಡಲಾಗುತ್ತಿದೆ. ಹೊಸ ಖಾತೆ ತೆರೆಯಲು ಕನಿಷ್ಠ 500 ರೂಪಾಯಿ ಠೇವಣಿ ಮಾಡಬೇಕು. ನಂತರ ಕನಿಷ್ಠ 10 ರೂಪಾಯಿ ಠೇವಣಿ ಮತ್ತು ಕನಿಷ್ಠ 50 ರೂಪಾಯಿ ವಾಪಾಸಾತಿ ಪಡೆಯಬಹುದಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net