

ದುಬೈ: ಸೌದಿ ಅರೇಬಿಯಾದ ಸೋಶಿಯಲ್ ಮೀಡಿಯಾ ಪ್ರಭಾವಿ ಮಹಿಳೆಯೊಬ್ಬಳು ತನ್ನ ಪತಿಯೊಂದಿಗೆ ಬಾತ್ಟಬ್ನಲ್ಲಿ ಬೆತ್ತಲಾಗಿರುವ ಫೋಟೋವನ್ನು ಪೋಸ್ಟ್ ಮಾಡುವ ಮೂಲಕ ಭಾರಿ ಟೀಕೆಗೆ ಗುರಿಯಾಗಿದ್ದಾಳೆ.
ಬಾತ್ಟಬ್ನಲ್ಲಿ ಮಹಿಳೆ ಬೆತ್ತಲಾಗಲು ಕಾರಣ ಅವಳು ಅಧಿಕೃತ ಸ್ನ್ಯಾಪ್ಚಾಟ್ ಖಾತೆಯನ್ನು ಪಡೆದುಕೊಂಡಿದ್ದು. ಇದೇ ಖುಷಿಯಲ್ಲಿ ಗಂಡನೊಂದಿಗೆ ಬೆತ್ತಲಾಗಿ ಸ್ನಾನ ಮಾಡಿದ ಫೋಟೋವನ್ನು ಹಂಚಿಕೊಂಡಿದ್ದಾಳೆ.
ಮಹಿಳೆಯ ಹೆಸರು ಫೌಜ್ ಅಲ್ ಒಟೈಬಿ. ಬಾತ್ಟಬ್ನಲ್ಲಿ ಪತಿ ಅಹ್ಮೆದ್ ಮೌಸ್ಸಾ ಜತೆ ಟಾಪ್ಲೆಸ್ ಆಗಿ ಕುಳಿತು ಮದ್ಯ ಸೇವನೆ ಮಾಡುತ್ತಿರುವ ಫೋಟೋವನ್ನು ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾಳೆ. ಇದೇ ಚಿತ್ರವೀಗ ಸಂಪ್ರದಾಯವಾದಿ ಸೌದಿ ಅರೇಬಿಯಾದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದ್ದು, ಒಟೈಬಿ ಅವರು ಸಾರ್ವಜನಿಕ ಸಭ್ಯತೆಯನ್ನು ಉಲ್ಲಂಘಿಸಿದ್ದಾರೆಂದು ದೂರಿದ್ದಾರೆ.
ಆಕ್ರೋಶ ಹೊರಹಾಕಿರುವ ನೆಟ್ಟಿಗನೊಬ್ಬ "ಆ ಪ್ರಾಣಿಗಳು ಎಲ್ಲಿ ವಾಸಿಸುತ್ತವೆ" ಎಂದಿದ್ದಾನೆ. ಅಲ್ಲದೆ, ಆ ಪ್ರಾಣಿಗಳು ಸೌದಿ ಅರೇಬಿಯಾದಲ್ಲಿದ್ದರೆ, ವೈರಸ್ ಹರಡಲು ಮತ್ತು ಸಾರ್ವಜನಿಕ ಸಭ್ಯತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಅವರನ್ನು ಬಂಧಿಸಲು ವಾರಂಟ್ ಹೊರಡಿಸಿಲ್ಲವೇಕೆ? ಎಂದು ಪ್ರಶ್ನಿಸಿದ್ದಾರೆ.
ಖ್ಯಾತಿ ಮತ್ತು ಹಣ ಮಾನವನ ಮರ್ಯಾದೆ ಕಳೆಯುತ್ತದೆ ಎಂದು ಮತ್ತೊಬ್ಬ ನೆಟ್ಟಿಗ ಬರೆದಿದ್ದರೆ, ಇನ್ನೊಬ್ಬ ನೆಟ್ಟಿಗ ನಮ್ಮ ಮಕ್ಕಳು ಮತ್ತು ಮುಸ್ಲಿಂ ಹುಡುಗಿಯರು ಕವರ್ ಆಗಿರಲು ನಮ್ಮ ದೇವರು ಬಯಸುತ್ತಾನೆಂದು ಹೇಳುವ ಮೂಲಕ ಒಟೈಬಿ ನಡೆಯನ್ನು ವ್ಯಾಪಕವಾಗಿ ಖಂಡಿಸಿದ್ದಾರೆ.
ಮದ್ಯ ಸೇವಿಸುತ್ತಾಳೆ ಎಂಬ ನೆಟ್ಟಿಗರ ಆರೋಪಕ್ಕೆ ಪ್ರತ್ಯುತ್ತರ ನೀಡಿರುವ ಒಟೈಬಿ ನಾವು ಕುಡಿಯುವ ವೈನ್ ಮತ್ತು ಷಾಂಪೇನ್ನಲ್ಲಿ ಮದ್ಯದ ಅಂಶವಿಲ್ಲ ಎಂದಿದ್ದಾಳೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ವಿಚಾರಗಳನ್ನು ಪ್ರದರ್ಶಿಸುವ ಮೂಲಕವೇ ಒಟೈಬಿ ಸೌದಿಯಲ್ಲಿ ಭಾರಿ ಖ್ಯಾತಿ ಗಳಿಸಿದ್ದು, ಜಾಲತಾಣದಲ್ಲಿ ಬರೋಬ್ಬರಿ 5 ಲಕ್ಷ ಫಾಲೋವರ್ಸ್ಗಳನ್ನು ಹೊಂದಿದ್ದಾರೆ. (ಏಜೆನ್ಸೀಸ್)