

ಬೆಂಗಳೂರು: ಆಕೆ 19ರ ಹರೆಯದ ಯುವತಿ. 2 ವರ್ಷದ ಹಿಂದೆ ಆಕೆಯ ಬದುಕಲ್ಲಿ ಗೆಳೆಯನಂತೆ ಎಂಟ್ರಿಕೊಟ್ಟ ದುಷ್ಕರ್ಮಿಯೊಬ್ಬ ಬಿರುಗಾಳಿಯನ್ನೇ ಎಬ್ಬಿಸಿದ್ದಾನೆ. ಸ್ನೇಹಿತನ ಸೋಗಿನಲ್ಲಿ ಸಲುಗೆ ಬೆಳೆಸಿಕೊಂಡವ ಆಕೆಯ ನಗ್ನ ಚಿತ್ರಗಳನ್ನು ಇಟ್ಟುಕೊಂಡು ಚಿನ್ನಾಭರಣ ದೋಚಿದ್ದಲ್ಲದೆ, ತನ್ನ ಸ್ನೇಹಿತನ ಮೂಲಕವೂ ಚಿತ್ರಹಿಂಸೆ ಕೊಡಿಸಿದ್ದಾನೆ.
ಕೆ.ಆರ್.ಪುರದ ಖಾಸಗಿ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಯುವತಿಗೆ ಆರೋಪಿ ಬ್ರಿಜ್ ಭೂಷಣ್ ಪರಿಚಯವಾಗಿತ್ತು. ಸಲುಗೆ ಹೆಚ್ಚಾದಂತೆ ಇಬ್ಬರೂ ಸ್ನೇಹಿತರಾಗಿದ್ದರು. 2018ರಲ್ಲಿ ಸ್ನೇಹದ ಸೋಗಿನಲ್ಲಿ ಆಗಾಗ ಯುವತಿ ಮನೆಗೆ ಭೂಷಣ್ ಬಂದು ಹೋಗುತ್ತಿದ್ದ. ನಂತರ ಆರೋಪಿಯು "ನನ್ನ ಬಳಿ ನಿನ್ನ ಬೆತ್ತಲೆ ಫೋಟೋಗಳಿವೆ. ಹಣ ಕೊಡದಿದ್ದರೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವೆ' ಎಂದು ಯುವತಿಗೆ ಬೆದರಿಸಿದ್ದ. ಆತಂಕಗೊಂಡ ಯುವತಿ ತನ್ನ ಮಾವನ ಪತ್ನಿಯ ಬಳಿಯಿದ್ದ 218 ಗ್ರಾಂ ಚಿನ್ನಾಭರಣ ಹಾಗೂ 75 ಸಾವಿರ ರೂ. ನಗದನ್ನು ಹಂತ-ಹಂತವಾಗಿ ಆರೋಪಿಗೆ ನೀಡಿದ್ದಳು. ಇದಾದ ಬಳಿಕ ಆರೋಪಿ ಆಕೆಯನ್ನು ಸಂಪರ್ಕಿಸಿರಲಿಲ್ಲ. ಇದಾದ ಕೆಲವೇ ದಿನದಲ್ಲಿ ಮತ್ತೊಬ್ಬ ಸ್ನೇಹಿತನಿಂದ ಯುವತಿಗೆ ಬೆದರಿಕೆ ಕರೆ ಬರುತ್ತೆ! ಇದನ್ನೂ ಓದಿರಿ ಪ್ಲೀಸ್ ಬಾಗಿಲು ತೆಗಿ.. ನಾವೆಲ್ಲ ಇದ್ದೇವೆ.. ಎಂದು ಗೋಗರೆಯುತ್ತಿದ್ದರೂ ನೋಡನೋಡುತ್ತಿದ್ದಂತೆ ನೇಣಿಗೆ ಶರಣಾದ!
ಸಂತ್ರಸ್ತ ಯುವತಿ ನೀಡಿದ ದೂರಿನ ಮೇರೆಗೆ ಆಕೆಯ ಸ್ನೇಹಿತರಾದ ದೇವಸಂದ್ರದ ನಿವಾಸಿಗಳಾದ ಬ್ರಿಜ್ ಭೂಷಣ್ ಯಾದವ್ (21) ಮತ್ತು ವಿವೇಕ್ ರೆಡ್ಡಿ (20) ವಿರುದ್ಧ ಎಫ್ಐಆರ್ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.