More

    ಹುಣಸೋಡು ಜಿಲೆಟಿನ್ ಲಾರಿ ಸ್ಫೋಟ ಘಟನೆ ನಂತರ ಜನರಿಗೆ ಈ ಅಧಿಕಾರಿ ನೆನಪಾಗಿದ್ದೇಕೆ?

    ದಾವಣಗೆರೆ: ಶಿವಮೊಗ್ಗದ ಹುಣಸೋಡು ಕಲ್ಲುಕ್ವಾರಿಯ ಕರಾಳ ಮುಖಗಳು ಈ ಅಧಿಕಾರಿಗೆ ಪರಿಚಿತ. ಆ ತಾಲೂಕಿನ ಎಲ್ಲ ಕ್ವಾರಿಗಳ ಜಾತಕವೂ ಇವರಿಗೆ ಗೊತ್ತು. ಅಲ್ಲಿ ಕೆಲಸ ಮಾಡಿದಷ್ಟು ದಿನವೂ ಅಕ್ರಮ ಗಣಿಗಾರಿಕೆ ಮಾಡುವವರಿಗೆ ಇವರು ಸಿಂಹಸ್ವಪ್ನವಾಗಿದ್ದರು. ಈಗ ದಾವಣಗೆರೆ ತಹಸೀಲ್ದಾರ್ ಆಗಿರುವ ಬಿ.ಎನ್. ಗಿರೀಶ್, 2019ರ ಜ. 17 ರಿಂದ 2020ರ ಏ. 8ರ ವರೆಗೆ ಶಿವಮೊಗ್ಗದ ತಹಸೀಲ್ದಾರ್ ಆಗಿ ಕಾರ್ಯ ನಿರ್ವಹಿಸಿದ ಅವಧಿಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ತಡೆಯಲು ಇವರು ಮಾಡಿದ ಪ್ರಯತ್ನ ಇಂದಿಗೂ ಜನರ ನೆನಪಿನಲ್ಲಿ ಉಳಿದಿದೆ.

    ಇದನ್ನೂ ಓದಿ: ಪಟಾಕಿ ನಿಷೇಧಕ್ಕೆ ಹೈಕೋರ್ಟ್ ಒಲವು: 3 ತಿಂಗಳೊಳಗೆ ತೀರ್ಮಾನಿಸುವಂತೆ ಸರ್ಕಾರಕ್ಕೆ ನಿರ್ದೇಶನ

    ತಾಲೂಕಿನ ಇತರ ಕ್ವಾರಿಗಳ ಜತೆಗೆ ಇವರು ಹುಣಸೋಡು ಗ್ರಾಮದ ಕ್ವಾರಿಗಳಲ್ಲೂ ಓಡಾಡಿದ್ದಾರೆ. ಕಲ್ಲುಗಳ ಸ್ಫೋಟದಿಂದ ಆಗುವ ಶಬ್ದ ಮಾಲಿನ್ಯ, ಪರಿಸರಕ್ಕೆ ಆಗುತ್ತಿರುವ ಹಾನಿಯ ಬಗ್ಗೆ ಅಕ್ಕಪಕ್ಕದ ಗ್ರಾಮಸ್ಥರು ನೀಡಿದ ದೂರು ಆಧರಿಸಿ ಕ್ರಮ ಕೈಗೊಂಡಿದ್ದರು. ವಸ್ತುಸ್ಥಿತಿ ತಿಳಿಯಲು ಅವರು ಪೊಲೀಸರ ಸಹಾಯವನ್ನೂ ಪಡೆಯದೇ ಮಾರುವೇಷದಲ್ಲಿ ಬೈಕ್‌ನಲ್ಲಿ ತೆರಳುತ್ತಿದ್ದರಂತೆ. ಅಪಾಯದ ಸನ್ನಿವೇಶದ ನಡುವೆಯೂ ಧೈರ್ಯವಾಗಿ ಮುನ್ನುಗ್ಗುತ್ತಿದ್ದರಂತೆ.

    ಸ್ಥಳಕ್ಕೆ ಭೇಟಿ ನೀಡಿದಾಗ ಸಂಬಂಧಪಟ್ಟ ಭೂಮಿಯ ಮಾಲೀಕರಾಗಲಿ, ಕಲ್ಲು ಗಣಿಗಾರಿಕೆ ಮಾಡುವವರಾಗಲಿ ಇರದೇ ಕೇವಲ ಜೆಸಿಬಿ, ಹಿಟಾಚಿ ಇನ್ನಿತರ ವಾಹನಗಳು ಕಣ್ಣಿಗೆ ಬೀಳುತ್ತಿದ್ದವು. ಆ ವಾಹನಗಳಿಗೆ ನೋಂದಣಿ ಸಂಖ್ಯೆಯೂ ಇರುತ್ತಿರಲಿಲ್ಲ. ಅವುಗಳನ್ನು ಜಪ್ತಿ ಮಾಡಿ ದಂಡ ವಿಧಿಸುತ್ತಿದ್ದರಂತೆ. ಅಕ್ರಮವಾಗಿ ಪಡೆದ ವಿದ್ಯುತ್ ಸಂಪರ್ಕವನ್ನು ಕಡಿತ ಮಾಡುತ್ತಿದ್ದರಂತೆ. ನೋಟಿಸ್ ನೀಡುವುದು, ಎಫ್‌ಐಆರ್ ಮಾಡುವುದು ಸಾಮಾನ್ಯವಾಗಿತ್ತು. ಈಗಲೂ ಆ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿವೆ.

    ಅಲ್ಲಿನ ಕಲ್ಲುಕ್ವಾರಿಗಳ ಲೋಕವೇ ಭಯಾನಕ. ಆಳವಾದ ಕಂದಕಗಳು, ದುರ್ಗಮ ದಾರಿಯನ್ನು ಕ್ರಮಿಸಿ ಹೋಗಬೇಕು. ಬಹಳ ಅಪಾಯಕಾರಿಯಾದ ಜಾಗಗಳವು. ರಾತ್ರಿ ವೇಳೆ ಕಲ್ಲುಗಳನ್ನು ಸ್ಫೋಟಿಸಲಾಗುತ್ತದೆ. ಬೆಳಗಿನ ಜಾವ ಕಲ್ಲುಗಳನ್ನು ಲಾರಿಗಳಿಗೆ ತುಂಬಲಾಗುತ್ತದೆ.

    ಇದನ್ನೂ ಓದಿ: ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್‌ನಲ್ಲಿ ಮುಗ್ಗರಿಸಿದ ಪಿವಿ ಸಿಂಧು, ಸಮೀರ್ ವರ್ಮ, ಉಪಾಂತ್ಯಕ್ಕೇರಿದ ಅಶ್ವಿನಿ ಪೊನ್ನಪ್ಪ- ಸಾತ್ವಿಕ್ ಜೋಡಿ

    ಆ ಪ್ರದೇಶಕ್ಕೆ ಬಂದು ಹೋಗುವವರ ಮೇಲೆ ನಿಗಾ ಇಡಲು, ಸಂದೇಶ ರವಾನಿಸಲು ಅಲ್ಲಲ್ಲಿ ಕೆಲವರನ್ನು ನಿಯೋಜಿಸಿರುತ್ತಾರೆ. ಕಂದಾಯ, ಗಣಿ ಮತ್ತು ಭೂವಿಜ್ಞಾನ, ಅರಣ್ಯ ಇನ್ನಿತರ ಇಲಾಖೆಗಳ ಅಧಿಕಾರಿಗಳು ಬರುವ ಸೂಚನೆ ಕಂಡರೆ ಸಂಬಂಧಿಸಿದವರಿಗೆ ತಕ್ಷಣ ಮಾಹಿತಿ ಹೋಗುತ್ತದೆ, ಅವರು ಅಲ್ಲಿಂದ ಪರಾರಿಯಾಗುತ್ತಾರೆ. ‘ಗಿರೀಶ್ ಅವರೇ, ಈಗ ನೀವು ಶಿವಮೊಗ್ಗದಲ್ಲಿ ಇರಬೇಕಿತ್ತು, ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ’ ಎಂಬ ಸಂದೇಶಗಳು ಗಿರೀಶ್ ಅವರ ಮೊಬೈಲ್‌ಗೆ ಬರುತ್ತಿವೆಯಂತೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಗಿರೀಶ್, ‘‘ಗಣಿ ಮತ್ತು ಭೂವಿಜ್ಞಾನ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್, ಪೊಲೀಸ್, ಕಂದಾಯ, ಅರಣ್ಯ ಸೇರಿದಂತೆ ವಿವಿಧ ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡಿದರೆ ಅಕ್ರಮ ಗಣಿಗಾರಿಕೆ ತಡೆಯಲು ಸಾಧ್ಯವಿದೆ. ತಪ್ಪಿತಸ್ಥರಿಗೆ ಸರಿಯಾದ ಶಿಕ್ಷೆಯಾಗಬೇಕು’’ ಎಂದಿದ್ದಾರೆ.

    ಕಾಲೇಜ್ ಗ್ರೂಪ್‌ನಲ್ಲಿ ಸಿಕ್ಕ ಹುಡುಗಿಯರ ನಂಬರ್‌ಗೆ ವಿದ್ಯಾರ್ಥಿಗಳ ವೈಯಕ್ತಿಕ ಮೆಸೇಜ್!

    ಕೇಂದ್ರ ಸರ್ಕಾರದಿಂದ ಕೃಷಿಕರಿಗೆ ಶೀಘ್ರವೇ ಗುಡ್‌ನ್ಯೂಸ್‌: ಸಿಗಲಿದೆ 10 ಸಾವಿರ ರೂ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts