More

    ಮಾರುತಿಪುರ ಗ್ರಾಮಸ್ಥರ ಸಮಸ್ಯೆ ಆಲಿಸಿದ ಅಧಿಕಾರಿಗಳು

    ಸವಣೂರ: ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿ ಲೋಕಸಭೆ ಚುನಾವಣೆ ಮತದಾನ ಬಹಿಷ್ಕಾರಕ್ಕೆ ಮುಂದಾಗಿದ್ದ ತಾಲೂಕಿನ ಮಾರುತಿಪುರ ಗ್ರಾಮಸ್ಥರು ಜಿಲ್ಲಾ ಮಟ್ಟದ ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.

    ನಮ್ಮ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಮಾರುತಿಪುರದ 570 ಮತದಾರರು ಲೋಕಸಭೆ ಚುನಾವಣೆ ಮತದಾನ ಬಹಿಷ್ಕರಿಸುವ ನಿರ್ಧಾರ ತೆಗೆದುಕೊಂಡಿದ್ದರು.

    ಈ ಕುರಿತು ಮೇ 3ರಂದು ‘ವಿಜಯವಾಣಿ’ ಯಲ್ಲಿ ‘ಮಾರುತಿಪುರ ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ’ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತ ಜಿಪಂ ಉಪ ಕಾರ್ಯದರ್ಶಿ ಎಸ್.ಬಿ. ಮುಳ್ಳಳ್ಳಿ, ತಾಪಂ ಇಒ ಎಫ್.ಜಿ. ಚಿನ್ನಣ್ಣವರ, ಕಂದಾಯ ನಿರೀಕ್ಷಕ ವೈ.ಎಲ್. ಹಳಕಲ್, ವಿಎ ದೇಸಾಯಿ ಎಸ್., ಹಾಗೂ ಅಧಿಕಾರಿಗಳ ತಂಡ ಶುಕ್ರವಾರ ಮಾರುತಿಪುರಕ್ಕೆ ಭೇಟಿ ನೀಡಿ ಗ್ರಾಮಸ್ಥರ ಅಹವಾಲು ಆಲಿಸಿದರು.

    ಜಿಪಂ ಉಪಕಾರ್ಯದರ್ಶಿ ಎಸ್.ಬಿ. ಮುಳ್ಳಳ್ಳಿ ಮಾತನಾಡಿ, ಮೂಲಸೌಕರ್ಯ ಒದಗಿಸುವ ಕುರಿತು ಸ್ಥಳೀಯ ಅಧಿಕಾರಿಗಳ ಮಟ್ಟದಲ್ಲಿ ರ್ಚಚಿಸಲಾಗುವುದು. ಕಂದಾಯ ಗ್ರಾಮ ಘೊಷಣೆ ಹಾಗೂ 300 ಎಕರೆ ಕೃಷಿ ಜಮೀನು ಉಳುಮೆ ಮಾಡುತ್ತಿರುವ ರೈತರಿಗೆ ಪ್ರತ್ಯೇಕ ಉತಾರ ಬೇಡಿಕೆ ಕುರಿತು ಚುನಾವಣೆ ನಂತರ ಸರ್ಕಾರದ ಮಟ್ಟದಲ್ಲಿ ರ್ಚಚಿಸಿ ಪರಿಹಾರ ಸೂಚಿಸಲಾಗುವುದು ಎಂದು ಭರವಸೆ ನೀಡಿದರು. ಬಳಿಕ ಗ್ರಾಮಸ್ಥರು ಮತದಾನ ಬಹಿಷ್ಕಾರ ನಿರ್ಧಾರ ಕೈಬಿಟ್ಟರು. ಮಾರುತಿಪುರ ನವಜೀವನ ಕಲೆಕ್ಟಿವ್ ಕೋ-ಆಪ್ ಫಾರ್ವಿುಂಗ್ ಸೊಸೈಟಿ ಅಧ್ಯಕ್ಷ ಹುಲಗಪ್ಪ ಹನುಮಂತಪ್ಪ ಅಲ್ಲಿಪುರ, ಕಾರ್ಯದರ್ಶಿ ಮಹಾದೇವಪ್ಪ ಬುಡರಕಟ್ಟಿ, ಗ್ರಾಮದ ಪ್ರಮುಖರಾದ ಹೇಮಣ್ಣ ಸಾಲಿ, ಶರಣಪ್ಪ ಬುಡರಕಟ್ಟಿ, ಹನುಮಂತಪ್ಪ ಲಕಮಾಪೂರ, ಬಸವರಾಜ ಪೂಜಾರ, ಅರ್ಜುನ ಪೂಜಾರ, ಬಸವಣೆಪ್ಪ ಬುಡರಕಟ್ಟಿ, ಮಾರುತಿ ಮೈದೂರ, ಮಾರುತಿ ದುಂಡಸಿ, ಸಣ್ಣಫಕೀರಪ್ಪ ಬೆಳ್ಳಟ್ಟಿ, ರಾಮಣ್ಣ ಕಣವಿಹೊಸೂರ, ಮಂಜುನಾಥ ಲಕಮಾಪೂರ, ತಿಮ್ಮಣ್ಣ ಸವಣೂರ, ಸೋಮಶೇಖರ ಸಾಲಿ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts