30 ವರ್ಷದಿಂದ ಶೌಚಾಲಯದಲ್ಲೇ ಸಮೋಸ ತಯಾರಿಸುತ್ತಿದ್ದ ರೆಸ್ಟೋರೆಂಟ್​ಗೆ ಕೊನೆಗೂ ಬೀಗ!

Samosa
Published on

ಸೌದಿ ಅರೆಬಿಯಾ: ಇನ್ನು ಶೌಚಾಲಯದ ನೀರು ಬಳಸಿ ಆಹಾರ ತಯಾರಿಸುವುದು ಮಧ್ಯಮ ರಾಷ್ಟ್ರಗಳಲ್ಲಿ ಕೇಳಿರುವುದು ಸಾಮಾನ್ಯ ಆದರೆ ಶ್ರೀಮಂತ ರಾಷ್ಟ್ರಗಳ ಹಾಗೂ ಶುಚಿತ್ವದಲ್ಲಿ ಹೆಸರು ಪಡೆದುಕೊಂಡಿರುವ ಸೌದಿ ಅರೇಬಿಯಾದಲ್ಲೂ ಸಹ ಇಂತಹದ್ದೇ ಪ್ರಕರಣ ಬೆಳಕಿಗೆ ಬಂದಿದೆ.

ಶೌಚಾಲಯದಲ್ಲಿ ಸಮೋಸಾ ಮಾಡಿ ಮಾರಾಟ ಮಾಡುತ್ತಿದ್ದ ಸೌದಿ ಅರೇಬಿಯಾದ ರೆಸ್ಟೋರೆಂಟ್​ನ್ನು ಸದ್ಯ ಮುಚ್ಚಿಸಲಾಗಿದೆ.

ಅಧಿಕಾರಿಗಳು ದಾಳಿ ನಡೆಸಿದ ವೇಳೆ ಶೌಚಾಲಯದಲ್ಲಿ ಸಮೋಸಾ ಸೇರಿದಂತೆ ಇತರೆ ಚಾಟ್​ಫುಡ್​ಗಳನ್ನು ಮಾಡಲಾಗುತ್ತಿತ್ತು ಎನ್ನಲಾಗಿದ್ದು, ಕೂಡಲೇ ರೆಸ್ಟೋರೆಂಟ್​ಗೆ ಬೀಗ ಜಡಿದಿದ್ದಾರೆ.

ಇದು ಇಂದು ನಿನ್ನೆಯದಲ್ಲ ಬರೋಬ್ಬರಿ 30 ವರ್ಷಗಳಿಂದ ಶೌಚಾಲಯದಲ್ಲೇ ಸಮೋಸಾ ತಯಾರಿಸಲಾಗುತ್ತಿತ್ತು ಎಂಬ ಆಘಾತಕಾರಿ ಅಂಶವನ್ನು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.

ಇನ್ನು ಅವಧಿ ಮೀರಿದ ಆಹಾರ ಪದಾರ್ಥಗಳನ್ನು ಕೂಡ ಮಾರಾಟ ಮಾಡಲಾಗುತ್ತಿತ್ತು. ಅಲ್ಲದೇ ಆಹಾರ ಇಲಾಖೆಯಿಂದ ನೀಡಲಾಗುವ ಲೈಸನ್ಸ್​ ಕೂಡ ಅಕ್ರಮದ್ದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ರೆಸ್ಟೋರೆಂಟ್​ನ್ನು ಈ ಹಿಂದೆಯೂ ಮುಚ್ಚಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net