ದಿವ್ಯ ಹಾಗರಗಿ ಜತೆಗಿನ ಫೋಟೊ ವಿಚಾರ : ಫಸ್ಟ್ ನನಗೆ ನೊಟೀಸ್​ ಕೊಡಲಿ ಅಂದ್ರು ಡಿಕೆಶಿ

DKShi
Published on

ಬೆಂಗಳೂರು: ಯಾರಾದರೂ ಬಂದು ನನ್ನ ಜತೆಗೆ ಫೋಟೋ ತೆಗೆಸಿಕೊಂಡಿರಬಹುದು. ನನಗೂ ನೊಟೀಸ್​ ಕೊಡ್ಲಿ ಅದರಿಂದಲಾದರೂ ಆ ಫೋಟೋ ಯಾವುದು ಎಂದು ಗೊತ್ತಾಗಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಪ್ರತಿಕ್ರಿಯಿಸಿದ್ದಾರೆ.

ಪಿಎಸ್​ಐ ನೇಮಕಾತಿ ಹಗರಣದ ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಜತೆಗಿನ ಫೋಟೋ ವಿಚಾರವಾಗಿ ಈ ರೀತಿ ಹೇಳಿದ್ದಾರೆ.

ನಾವು ಪ್ರತಿದಿನ ಹಲವು ಜನರನ್ನು ಭೇಟಿಯಾಗುತ್ತೇವೆ. ಸಾಮಾನ್ಯ ಜನರಿಂದ ಹಿಡಿದು ಪಕ್ಷದ ಕಾರ್ಯಕರ್ತರು ಯಾರೇ ಆಗಿರಲಿ ಎಲ್ಲರ ಭೇಟಿ ದಿನನಿತ್ಯವಿರಲಿದೆ. ಆ ವೇಳೆ ಯಾರೇ ಬಂದರೂ ಫೋಟೋ ತೆಗೆಸಿಕೊಳ್ಳುವುದು ಸಾಮಾನ್ಯ. ಇದು ಅದೇ ರೀತಿಯದ್ದಾಗಿದ್ದು, ಸದ್ಯ ಫೋಟೋ ಯಾವುದೆಂದು ತಿಳಿಯಲು ನನಗೂ ನೋಟಿಸ್​ ಕೊಟ್ಟರೆ ಒಳ್ಳೆಯದು ಎಂದು ಹೇಳಿದ್ದಾರೆ.

ಇನ್ನೂ ಈ ಬಗ್ಗೆ ಸ್ಪಷ್ಟೀಕರಣ ನೀಡಲು ಡಿ.ಕೆ.ಶಿವಕುಮಾರ್​​ ಸಂಜೆ 4 ಗಂಟೆಗೆ ಸುದ್ದಿಗೋಷ್ಠಿ ಕರೆದಿದ್ದಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net