

ಚೆನ್ನೈ: ಚಲಿಸುತ್ತಿದ್ದ ರೈಲಿನಿಂದ ಬೀಳುತ್ತಿದ್ದ ವ್ಯಕ್ತಿಯೋರ್ವನನ್ನು ಮಹಿಳಾ ಪೇದೆ ರಕ್ಷಿಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಮಹಿಳಾ ಪೇದೆಯ ಈ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಚೆನ್ನೈ ರೈಲ್ವೇ ನಿಲ್ದಾಣದಲ್ಲಿ ಚೆನ್ನೈ-ತಿರುಚಿ ಎಕ್ಸ್ಪ್ರೆಸ್ ರೈಲಿನಲ್ಲಿ ಹತ್ತಿದ್ದ ವ್ಯಕ್ತಿ ಇನ್ನೇನು ರೈಲು ಹೊರಡಲು ಮುಂದಾಗಿತ್ತು. ಫ್ಲಾಟ್ ಫಾರಂನಿಂದ ಮುಂದೆ ನಿಧಾನವಾಗಿ ಚಲಿಸುತ್ತಿರುವಾಗಲೇ ರೈಲಿನಿಂದ ಆಕಸ್ಮಿಕವಾಗಿ ವ್ಯಕ್ತಿಯೋರ್ವ ಕೆಳಗೆ ಬೀಳುತ್ತಾನೆ.
ವ್ಯಕ್ತಿ ಬೀಳುತ್ತಿರುವುದನ್ನು ಗಮನಿಸಿದ ಮಹಿಳಾ ಪೇದೆ ಆತನನ್ನು ಎಳೆದು ರಕ್ಷಿಸಿದ್ದಾರೆ. ಕೂಡಲೇ ಇತರೆ ಪ್ರಯಾಣಿಕರು ನೆರವಿಗೆ ಧಾವಿಸಿದ್ದಾರೆ.