ಮಳೆ ನೀರಿಗೆ ಕೊಚ್ಚಿ ಹೋಯ್ತು 264 ಕೋಟಿ ರೂ...!; ಉದ್ಘಾಟನೆಗೊಂಡು ತಿಂಗಳು ಕಳೆದಿರಲಿಲ್ಲ

sattarghat bridge
Published on

ಪಟನಾ: ಬಿಹಾರದ ಗಂಡಕ್​ ನದಿಗೆ ಅಡ್ಡಲಾಗಿ ಕಟ್ಟಿದ್ದ ಸೇತುವೆಯ ಸಂಪರ್ಕ ರಸ್ತೆ ಪ್ರವಾಹಕ್ಕೆ ಕೊಚ್ಚಿ ಹೋಗಿದೆ.

ಸತ್ತರ್​ಘಾಟ್​ ಸೇತುವೆ ಎಂದೇ ಕರೆಯಲಾಗುವ ಈ ಸೇತುವೆಯನ್ನು ಕಳೆದ ತಿಂಗಳು ಇದೇ ದಿನದಂದು (ಜೂನ್ 16) ಸಿಎಂ ನಿತೀಸ್​ಕುಮಾರ್​ ಉದ್ಘಾಟಿಸಿದ್ದರು. ಈ ಸೇತುವೆಯಿಂದಾಗಿ ಗೋಪಾಲ್​ಗಂಜ್​, ಸರಣ್​, ಹಾಗೂ ಪೂರ್ವ ಚಂಪಾರಣ್​ ಜಿಲ್ಲೆಗಳ ನಡುವಿನ ದೂರ 45 ಕಿ.ಗಳಷ್ಟು ಕಡಿಮೆಯಾಗಿತ್ತು.

2012ರಲ್ಲಿ 1.44 ಕಿ.ಮೀ ಉದ್ದದ 263.47 ಕೋಟಿ ರೂ. ವೆಚ್ಚದ ಸೇತುವೆ ಕಾಮಗಾರಿಗೆ ನಿತೀಶ್​ಕುಮಾರ್​ ಅವರೇ ಶಂಕುಸ್ಥಾಪನೆ ನೆರವೇರಿಸಿದ್ದರು. ರಸ್ತೆ ಕೊಚ್ಚಿ ಹೋಗುತ್ತಿದ್ದಂತೆ ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ಟೀಕೆಗಳ ಸುರಿಮಳೆಯನ್ನೇ ಸುರಿಸಿವೆ.

28 ದಿನಗಳ ಹಿಂದಷ್ಟೇ ಉದ್ಘಾಟನೆಗೊಂಡಿದ್ದ ಸೇತುವೆ ಕುಸಿದಿದೆ. ಯಾರಾದರೂ ಇದನ್ನು ನಿತೀಶ್​ಕುಮಾರ್​ ಸರ್ಕಾರದ ಭ್ರಷ್ಟಾಚಾರವೆಂದರೆ ಕರೆದರೆ ಹುಷಾರ್​..! ಎಂದು ತೇಜಶ್ವಿ ಯಾದವ್​ ವ್ಯಂಗ್ಯವಾಗಿ ಟ್ವೀಟ್​ ಮಾಡಿದ್ದಾರೆ. ಇನ್ನು ಕಾಂಗ್ರೆಸ್​ ರಾಜ್ಯಾಧ್ಯಕ್ಷ ಇನ್ನಷ್ಟು ಲೇವಡಿ ಮಾಡಿದ್ದು, ಸೇತುವೆ ಕುಸಿದಿದ್ದಕ್ಕೆ ಇದು ಇಲಿ ಕೊರೆದ ಬಿಲದಿಂದ ಆಗಿದ್ದು ಎಂದು ದೂರಬೇಡಿ ಎಂದು ಹೇಳಿದ್ದಾರೆ.

ಬಿಹಾರ ಲೋಕೋಪಯೋಗಿ ಇಲಾಖೆ ಸ್ಪಷ್ಟನೆ ನೀಡಿದ್ದು, ಪ್ರವಾಹದ ರಭಸಕ್ಕೆ ಸಂಪರ್ಕ ರಸ್ತೆ ಕುಸಿದಿದೆ. ಸೇತುವೆಗೆ ಹಾನಿಯಾಗಿಲ್ಲ ಎಂದು ತಿಳಿಸಿದೆ. ಸೇತವೆಯಿಂದ ಎರಡು ಕಿ.ಮೀ. ದೂರದಲ್ಲಿ ದಿ ಸಂಭವಿಸಿದೆ ಎಂದು ಹೇಳಿದ್ದರೂ. ಸೇತುವೆಗೆ ಹೊಂದಿಕೊಂಡ ರಸ್ತೆಯೇ ಇಲ್ಲವಾಗಿರುವುದು ದೃಶ್ಯಗಳಲ್ಲಿ ಕಂಡು ಬಂದಿದೆ. ಸಹಜವಾಗಿಯೇ ಸೇತುವೆಯ ಸುದೃಢತೆ ಬಗ್ಗೆ ಸಂದೇಹಗಳೆದ್ದಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net