ಪೊಲೀಸರೇ ನನ್ನ ಎನ್​ಕೌಂಟರ್​ ಮಾಡ್ತಾರೆ...! ರಕ್ಷಣೆಗೆ ಸುಪ್ರೀಂಕೋರ್ಟ್​ ಮೊರೆ ಹೋದ ಸಬ್​ ಇನ್​ಸ್ಪೆಕ್ಟರ್​

KK sharma- Bhikru
Published on

ಕಾನ್ಪುರ: ಪೊಲೀಸರೇ ನನ್ನ ಎನ್​ಕೌಂಟರ್​ ಮಾಡ್ತಾರೆ, ನನಗೆ ಹಾಗೂ ನನ್ನ ಹೆಂಡತಿಗೆ ರಕ್ಷಣೆ ನೀಡಿ...!

ಇಂಥದ್ದೊಂದು ಮನವಿ ಮಾಡ್ತಾ ಇರೋದು ಯಾರೋ ಸಾಮಾನ್ಯ ವ್ಯಕ್ತಿಯಲ್ಲ ಅಥವಾ ಕುಖ್ಯಾತ ಅಪರಾಧಿಯೂ ಅಲ್ಲ. ಬದಲಿಗೆ ಒಬ್ಬ ಪೊಲೀಸ್​ ಸಬ್​ ಇನ್​ಸ್ಪೆಕ್ಟರ್​. ರಕ್ಷಣೆ ಕೋರಿ ಆತ ಸುಪ್ರೀಂ ಕೋರ್ಟ್​ ಮೊರೆ ಹೋಗಿದ್ದಾನೆ.

ಉತ್ತರಪ್ರದೇಶದ ಭಿಕ್ರು ಠಾಣೆಯ ಎಸ್​ಐ ಕೆ. ಕೆ. ಶರ್ಮಗೆ ಜೀವ ಭಯ ಉಂಟಾಗಿದೆ. ಕಾರಣವೆನೆಂದರೆ, ಜುಲೈ 2 ರಂದು ಎಂಟು ಪೊಲೀಸರನ್ನು ಕೊಂದ ಗ್ಯಾಂಗ್​ಸ್ಟರ್​ ವಿಕಾಸ್​ ದುಬೆ ಪರಾರಿಯಾಗಲು ಈತನೇ ಮಾಹಿತಿ ನೀಡಿದ್ದ. ಸದ್ಯ ವಿಶೇಷ ತನಿಖಾ ತಂಡ ಈತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದೆ.

ವಿಕಾಸ್​ ದುಬೆಯನ್ನು ಬಂಧಿಸಿದ ದಿನವೇ, ಆತನ ಎನ್​ಕೌಂಟರ್​ ನಡೆಯುವ ಭೀತಿ ಇರುವುದಾಗಿ ಸುಪ್ರೀಂ ಕೋರ್ಟ್​ಗೆ ಅರ್ಜಿ ದಾಖಲಾಗಿತ್ತು. ದುಬೆಯನ್ನು ಮಧ್ಯಪ್ರದೇಶದ ಉಜ್ಜೈನಿಯಲ್ಲಿ ಬಂಧಿಸಿ ಕರೆತರುವಾಗ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದ ಗ್ಯಾಂಗಸ್ಟರ್​ನನ್ನು ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು. ಇದೇ ರೀತಿ ನನ್ನನ್ನು ಕೊಲ್ಲಲಿದ್ದಾರೆ ಎಂದು ಆತ ಸುಪ್ರೀಂ ಕೋರ್ಟ್​ಗೆ ಸಲ್ಲಿಸಿರುವ ಅರ್ಜಿಯಲ್ಲಿ ಶರ್ಮಾ ತಿಳಿಸಿದ್ದಾನೆ.

ಶರ್ಮಾ ಮಾತ್ರವಲ್ಲದೇ, ಚೌಬೆಪುರ ಠಾಣಾಧಿಕಾರಿ ವಿನಯ್​ ತಿವಾರಿ ಕೂಡ ಪೊಲೀಸ್​ ವಶದಲ್ಲಿದ್ದಾನೆ. ಈತನೂ ವಿಕಾಸ್​ ದುಬೆ ಜತೆ ನಂಟು ಹೊಂದಿದ್ದಕ್ಕೆ ಸಾಕ್ಷ್ಯಗಳು ದೊರೆತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net