

ಕಾನ್ಪುರ: ಎಂಟು ಪೊಲೀಸರ ಹತ್ಯೆ ನಡೆಸಿ ತಲೆ ಮರೆಸಿಕೊಂಡಿರುವ ಮೋಸ್ಟ್ ವಾಂಟೆಡ್ ಕ್ರಿಮಿನಲ್ ವಿಕಾಸ್ ದುಬೆಗಾಗಿ ಕಳೆದ ಮೂರು ದಿನಗಳಿಂದ ಶೋಧ ನಡೆಯುತ್ತಲೇ ಇದೆ.
ಬಂಧಿತನಾಗಿರುವ ಆತನ ಸಹಚರ ನೀಡಿರುವ ಮಾಹಿತಿ ಮೇರೆಗೆ ಪೊಲೀಸರಿಂದಲೇ ಆತನಿಗೆ ದಾಳಿಯ ವಿಷಯ ಮುಟ್ಟಿತ್ತು. ಹೀಗಾಗಿ ಪೊಲೀಸರು ಮನೆಗೆ ಬರುವ ಮುನ್ನವೇ ಪ್ರತಿದಾಳಿ ನಡೆಸಲು ಆತ ಸಿದ್ಧತೆ ಮಾಡಿಕೊಂಡಿದ್ದ.
ಇದನ್ನೂ ಓದಿ; ಧರಾಶಾಯಿಯಾಯ್ತು ಬಿಗ್ ಬಿ ಮನೆಯ 43 ವರ್ಷಗಳ ಇತಿಹಾಸ…!
ಇಷ್ಟಕ್ಕೂ ಆತನಿದ್ದದ್ದು ಬರೀ ಮನೆಯಾಗಿರಲಿಲ್ಲ. ಅದೊಂದು ಮದ್ದುಗುಂಡುಗಳ ಮಿನಿ ಕಾರ್ಖಾನೆಯಾಗಿತ್ತು ಎಂದೇ ಪೊಲೀಸರು ಹೇಳಿದ್ದಾರೆ. ಆತನ ಮನೆಯಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಎರಡು ಕೆಜಿ ಸ್ಫೋಟಕಗಳು, ಆರು ನಾಡ ಪಿಸ್ತೂಲ್ಗಳು, 25 ಕಾಟ್ರಿಡ್ಜ್ಗಳು ದೊರೆತಿವೆ.
ಮನೆಯಲ್ಲೇ ಬಾಂಬ್ ತಯಾರಿಕೆ: ವಿಕಾಸ್ ದುಬೆ ಮನೆಯಲ್ಲೇ ಬಾಂಬ್ ತಯಾರಿಸುತ್ತಿದ್ದ. ಇದಕ್ಕಾಗಿ ಸ್ಫೋಟಕಗಳೊಂದಿಗೆ ಭಾರಿ ಪ್ರಮಾಣದಲ್ಲಿ ಕಬ್ಬಿಣದ ಮೊಳೆಗಳನ್ನು ಸಂಗ್ರಹಿಸಿಟ್ಟಿದ್ದ. ಇಡೀ ಪ್ರದೇಶವನ್ನೇ ಬಾಂಬ್ನಿಂದ ಉಡಾಯಿಸುವುದು ಆತನ ಉದ್ದೇಶವಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ. ಈತ ಹಾಗೂ ಸಹಚರರು ಪೊಲೀಸರ ಮೇಲೆ ಎಕೆ-47 ನಂಥ ಶಸ್ತ್ರಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
ಉತ್ತರಪ್ರದೇಶವೊಂದರಲ್ಲಿಯೇ ವಿಕಾಸ್ ದುಬೆ ವಿರುದ್ಧ 60 ಪ್ರಕರಣಗಳಿವೆ. ಆತ ರಾಜ್ಯದಿಂದ ಪಲಾಯನ ಮಾಡಿದ್ದಾನೆ ಎನ್ನಲಾಗಿದೆ. ಈತನ ಜತೆ ಗುರುತಿಸಿಕೊಂಡಿದ್ದ 21 ಜನರನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.