More

    ಅಮಿತಾಬ್​ ಬಚ್ಚನ್​ ಮನೆಯ 43 ವರ್ಷಗಳ ಇತಿಹಾಸ ನೆಲಸಮ…!

    ಮುಂಬೈ: ಮಕ್ಕಳ ಮದುವೆಗೆ ಸಾಕ್ಷಿಯಾಗಿದ್ದ, ಮೊಮ್ಮಕ್ಕಳ ಆಟೋಟಗಳ ತಾಣವಾಗಿದ್ದ, ಮನೆಯ ಎಲ್ಲ ಸುಖ, ದುಃಖಗಳಲ್ಲೂ ಮನೆಯ ಹೆಗ್ಗುರುತೊಂದನ್ನು ಬಿಗ್​​ ಬಿ ಕಳೆದುಕೊಂಡಿದ್ದಾರೆ.

    ತನ್ನ ಆಸ್ತಿತ್ವವನ್ನು ಕಳೆದುಕೊಂಡರೂ ಯಾರಿಗೂ ತೊಂದರೆ ಕೊಡದೆ ಅದು ದೂರಾಗಿದೆ. ಸಾವಿನಲ್ಲೂ ಉದಾರತೆಯನ್ನು ಮೆರೆದಿದೆ ಎಂದು ಅಮಿತಾಬ್​ ಬಚ್ಚನ್​ ಕೊಂಡಾಡಿದ್ದಾರೆ.

    ಇದನ್ನೂ ಓದಿ; ಎದುರು ಬಂದವರ ಧರ್ಮ ಕೇಳಿ ಕೊಂದರು; ಶವಗಳನ್ನು ಚರಂಡಿಗೆಸೆದರು; ಪ್ರತ್ಯಕ್ಷದರ್ಶಿಗಳಿಂದ ಪೈಶಾಚಿಕತೆ ಅನಾವರಣ

    ಅಮಿತಾಬ್​ ಬಚ್ಚನ್​ ಮನೆಯ 43 ವರ್ಷಗಳ ಇತಿಹಾಸ ನೆಲಸಮ...!

    ಇಷ್ಟೆಲ್ಲ ಅವರು ವರ್ಣಿಸಿದ್ದು ಮುಂಬೈನ ಪ್ರತೀಕ್ಷಾ ನಿವಾಸದಲ್ಲಿ ಹಸಿರು ಹಾಸಿನ ಮಧ್ಯದಲ್ಲಿದ್ದ ಗುಲ್​ಮೊಹ್​ ವೃಕ್ಷದ ಬಗ್ಗೆ. ಕಳೆದ ವಾರವಷ್ಟೇ ಅದು ನೆಲಕ್ಕುರುಳಿದೆ. ಈ ಮೂಲಕ 43 ವರ್ಷಗಳ ಇತಿಹಾಸವೂ ಇನ್ನಿಲ್ಲವಾಗಿದೆ ಎಂದು ಅವರು ನೊಂದು ನುಡಿದಿದ್ದಾರೆ. ಅದರೊಂದಿಗಿನ ನೆನಪುಗಳನ್ನು ಹಂಚಿಕೊಂಡಿದ್ದಾರೆ.

    ನನ್ನ ತಲೆಮಾರಿನ ಮೊದಲ ಮನೆಯಾಗಿ ನಾವು ಈ ಮನೆಗೆ 1976ರಲ್ಲಿ ಬಂದಾಗ ಗುಲ್​ಮೊಹರ್​ ಸಸಿಯನ್ನು ನೆಟ್ಟಿದ್ದೆ. ಕೆಲವು ಅಂಗುಲಗಳಷ್ಟು ಎತ್ತರವಾಗಿತ್ತು ಆ ಸಸಿ. ನನ್ನ ಮಕ್ಕಳು ಅದರ ಸುತ್ತಲೂ ಆಡುತ್ತ ಬೆಳೆದಿದ್ದಾರೆ. ಅವರ ಜನ್ಮದಿನ, ಹಬ್ಬಗಳಂದು ಈ ಮರವನ್ನು ಸಿಂಗರಿಸಲಾಗುತ್ತಿತ್ತು. ದೀಪಾವಳಿಗೆ ಬೆಳಕಿನ ಮರವೇ ಆಗಿರುತ್ತಿತ್ತು. ಮಕ್ಕಳ ಮದುವೆ ಕೂಡ ಅದರಡಿಯೇ ನಡೆದು, ಅದು ನಿಂತಲ್ಲಿಯೇ ಅವರನ್ನು ಹಾರೈಸಿತ್ತು.

    ಇದನ್ನೂ ಓದಿ; ಬದುಕು ಕ್ಷಣಿಕ ಎಂದಿದ್ದೇಕೆ ಸುಶಾಂತ್​ ಸಿಂಗ್​; ಅಮ್ಮನ ನೆನೆದು ಬಾರದ ಲೋಕಕ್ಕೆ ಪಯಣ 

    ಬೇಸಿಗೆಯಲ್ಲಿ ಗಾಢ ಕಿತ್ತಲೆ ಬಣ್ಣದ ಹೂವುಗಳ ವಿಶೇಷ ಕಳೆಯನ್ನೇ ನೀಡುತ್ತಿದ್ದವು. ನನ್ನ ತಂದೆ, ತಾಯಿ ಅಗಲಿದಾಗಲೂ ಅದರ ನೆರಳನಡಿಯೇ ಶೋಕ ಪಸರಿಸಿತ್ತು. ಹೋಳಿ ಹಬ್ಬಕ್ಕೆ ಇನ್ನಷ್ಟು ಬಣ್ಣಗಳನ್ನು ಇದು ತುಂಬುತ್ತಿತ್ತು. ದುಷ್ಟ ಶಕ್ತಿಯ ಕಾಮದಹನಕ್ಕೂ ಇದು ಸಾಕ್ಷಿಯಾಗಿತ್ತು ಎಂದು ಬಿಗ್​ ಬಿ ನೆನೆದಿದ್ದಾರೆ.

    ತಮ್ಮ ಬ್ಲಾಗ್​ನಲ್ಲಿ ಲೇಖನ, ಜತೆಗೊಂದು ಕವನವನ್ನು ಗುಲ್​ಮೊಹರ್​ಗಾಗಿಯೇ ಬರೆದಿದ್ದಾರೆ. ಇನ್ನೊಂದು ಗುಲ್​ಮೊಹರ್​ ಸಸಿಯನ್ನು ಅದೇ ಜಾಗದಲ್ಲಿ ನೆಡುವುದಾಗಿ ಅಮಿತಾಬ್​ ಬಚ್ಚನ್​ ಕವನದಲ್ಲಿ ಹೇಳಿಕೊಂಡಿದ್ದಾರೆ.

    ಕರೊನಾ ಸೋಂಕು ಖಚಿತವಾದರೆ… ಮುಂದೇನು? ಈ ವಿಷಯಗಳನ್ನು ಅಗತ್ಯವಾಗಿ ತಿಳಿದಿರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts