More

    ನೀರು, ಪಿಪಿಇ ಕಿಟ್​ ಕೇಳಿದ ನರ್ಸ್​ಗಳಿಗೆ ವಾಟ್ಸ್ಯಾಪ್​​ನಲ್ಲಿಯೇ ವಜಾ ಆದೇಶ ಕಳುಹಿಸಿದ್ರು…!

    ನವದೆಹಲಿ: ವೈದ್ಯರು, ನರ್ಸ್​ಗಳಿಗೆ ಕೋವಿಡ್​ ವಾರಿಯರ್​ ಎಂದು ಗೌರವಿಸಲಾಗುತ್ತೆ. ಆದರೆ, ರೋಗಿಗಳಿಗೆ ಚಿಕಿತ್ಸೆ ನೀಡುವ ಇವರಿಗೂ ಕರೊನಾದಿಂದ ರಕ್ಷಣೆ ಬೇಕಲ್ಲವೇ..?

    ಹೀಗಾಗಿಯೇ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ನರ್ಸ್​ಗಳು ತಮಗೂ ಕುಡಿಯುವ ನೀರು, ಪಿಪಿಇ ಕಿಟ್​ಗಳನ್ನು ನೀಡಿ ಎಂದು ಆಡಳಿತ ಮಂಡಳಿಗೆ ಕೋರಿದ್ದಾರೆ. ಬದಲಿಗೆ ಅವರಿಗೆ ಸಿಕ್ಕಿದ್ದು, ಟರ್ಮಿನೇಷನ್​ ಆರ್ಡರ್​. ಅದೂ ಕೂಡ ವಾಟ್ಸ್ಯಾಪ್​ ಮೂಲಕ.

    ಇದನ್ನೂ ಓದಿ; ದಲಿತರಿಗೆ ಮೀಸಲಾಗಿದ್ದ ಜಾಗದಲ್ಲಿ 9 ಅಂತಸ್ತಿನ ಕಟ್ಟಡ ನಿರ್ಮಿಸಿದ ಗಾಂಧಿ ಕುಟುಂಬದ ಸಂಸ್ಥೆ; ಇಡಿಯಿಂದ ವಶಕ್ಕೆ 

    ದೆಹಲಿಯ ಹಮ್​ದರ್ದ್​ ಆಸ್ಪತ್ರೆ ಎಂದೇ ಕರೆಯಲಾಗುವ ಹಕೀಮ್​ ಅಬ್ದುಲ್​ ಹಮೀದ್​ ಶತಮಾನೋತ್ಸವ ಆಸ್ಪತ್ರೆಯ 84 ನರ್ಸ್​ಗಳನ್ನು ಕೆಲಸದಿಂದ ತೆಗೆಯಲಾಗಿದೆ. ಈ ವಿಚಾರವನ್ನು ನರ್ಸ್​ಗಳ ಒಕ್ಕೂಟ ದೆಹಲಿ ಸಿಎಂ ಗಮನಕ್ಕೂ ತಂದಿದೆ.

    ವಜಾ ಮಾಡಲಾದ ಕೆಲವು ನರ್ಸ್​​ಗಳು ಕರೊನಾ ಸೋಂಕಿಗೆ ಒಳಗಾಗಿ ಹೋಮ್​ ಕ್ವಾರಂಟೈನ್​ನಲ್ಲಿ ಇದ್ದಾರೆ. ಇವರ ಕೋವಿಡ್​ ಪರೀಕ್ಷೆಗೂ ಆಸ್ಪತ್ರೆ ಹಣ ಪಡೆದಿದೆ. ಗುತ್ತಿಗೆ ಒಪ್ಪಂದ ಮುಗಿದಿದ್ದರೆ ಆಗಲೇ ತಿಳಿಸಬೇಕಿತ್ತು. ಮೂಲಸೌಕರ್ಯ ಕೇಳಿದ್ದಕ್ಕೆ ಕೆಲಸದಿಂದ ತೆಗೆದಿರುವುದು ಎಷ್ಟು ಸರಿ ಎಂದು ನರ್ಸ್​ಗಳು ಪ್ರಶ್ನಿಸಿದ್ದಾರೆ.

    ಇದನ್ನೂ ಓದಿ; ಇಂಟರ್​ನೆಟ್​ನಲ್ಲಿ ಹೇಗೆಲ್ಲಾ ಹಣ ಗಳಿಸಬಹುದು ನೋಡಿ…., ‘ನಾಯಿ’ಯಂತಾಡಿದರೂ ಲಕ್ಷಗಟ್ಟಲೇ ಗಳಿಕೆ….!

    ಗುತ್ತಿಗೆ ಒಪ್ಪಂದ ಮುಗಿದಿದ್ದರಿಂದ ಕೆಲಸದಿಂದ ತೆಗೆಯಲಾಗಿದೆ. ಮತ್ತೆ ಸಂದರ್ಶನಕ್ಕೆ ಹಾಜರಾಗಲು ಎಲ್ಲರಿಗೂ ಅವಕಾಶವಿದೆ ಎಂಬುದು ಆಸ್ಪತ್ರೆ ಆಡಳಿತ ಮಂಡಳಿ ವಾದ. ಆದರೆ, ಸಂಕಷ್ಟದ ಸಮಯದಲ್ಲಿ ಅವರನ್ನು ಕೈಬಿಟ್ಟಿರುವುದು ಸರಿಯಲ್ಲ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

    ಆಗಸ್ಟ್​ 15ಕ್ಕೆ ಬಳಕೆಗೆ ದೊರೆಯಲಿದೆ ಕರೊನಾ ಲಸಿಕೆ; ಆದರೆ ಭಾರತದ್ದಲ್ಲ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts