ಸರ್ಕಾರಿ ಕಾರ್ನರ್: ಸೇವಾ ಆಧಿಕ್ಯ ಲಭ್ಯವಾಗುತ್ತದೆಯೇ?

corner
Published on
ದಿನದ ಪ್ರಶ್ನೆ

ನಾನು 1991ರ ಆಗಸ್ಟ್ 1ರಂದು ಖಾಸಗಿ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಪ್ರಥಮ ದರ್ಜೆ ಸಹಾಯಕನಾಗಿ ಸೇವೆಗೆ ಸೇರಿದ್ದು, 1997ರ ನವೆಂಬರ್ ನಿಂದ ಅನುದಾನಕ್ಕೆ ಒಳಪಟ್ಟಿದೆ. ಪ್ರಸ್ತುತ ನಾನು ಕಚೇರಿ ಅಧೀಕ್ಷಕನಾಗಿ ಕೆಲಸ ಮಾಡುತ್ತಿದ್ದು, ನನ್ನ ಮೂಲ ವೇತನ ರೂ.45,300/- ಆಗಿದ್ದು, ನಾನು ಸ್ವಯಂ ನಿವೃತ್ತಿ ವೇತನ ಪಡೆದರೆ, ನನಗೆ ಸಿಗುವ ಪಿಂಚಣಿ, ನಿವೃತ್ತಿ ಉಪದಾನ, ಕಮ್ಯೂಟೇಷನ್ ಎಷ್ಟು? ನನ್ನ ಜನ್ಮ ದಿನಾಂಕ : 01.06.1964 ಆಗಿದ್ದು, ನನಗೆ ನಾಲ್ಕು ವರ್ಷಗಳ ಕಾಲ ಅರ್ಹತಾದಾಯಕ ಸೇವೆಗೆ ಸೇವಾ ಆಧಿಕ್ಯ ಲಭ್ಯವಾಗುತ್ತದೆಯೇ ?

| ಜಯಕುಮಾರ್ ಚಿತ್ರದುರ್ಗ

ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ಅವರ ಸೇವೆಯನ್ನು ಅನುದಾನಕ್ಕೆ ಒಳಪಟ್ಟ ದಿನಾಂಕದಿಂದ ನಿವೃತ್ತಿವರೆವಿಗೂ ಪರಿಗಣಿಸಲಾಗುತ್ತದೆ. ಆದರೆ, ನೀವು ಸ್ವಯಂ ನಿವೃತ್ತಿ ಪಡೆದರೆ ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 285(2)ರಂತೆ ಸೇವಾ ಆದಿಕ್ಯೂ ಲಭ್ಯವಾಗುವುದಿಲ್ಲ. ನಿಮ್ಮ ಒಟ್ಟು ಸೇವಾವಧಿ 23 ವರ್ಷಗಳು ಅಥವಾ 46 ಅರ್ಧ ವರ್ಷಗಳಾಗುತ್ತವೆ. ನಿಮಗೆ ಲೆಕ್ಕಾಚಾರದಂತೆ ರೂ.17,365/- ಪಿಂಚಣಿ ನಿವೃತ್ತಿ ಉಪದಾನ ರೂ.5,20,950/- ಕಮ್ಯೂಟೇಷನ್ ರೂ.7,71,006/- ಆಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net