

ನಾನು ಸರ್ಕಾರಿ ಕೆಲಸದಲ್ಲಿದ್ದು, ಒಂದು ವೇಳೆ ಸ್ವಯಂ ನಿವೃತ್ತಿ ತೆಗೆದುಕೊಂಡರೆೆ ನಿವೃತ್ತಿ ವೇತನ ಸೌಲಭ್ಯ ಸಿಗುವುದೇ?
| ಕಾವ್ಯಾ ಮೈಸೂರು
ಕರ್ನಾಟಕ ಸಿವಿಲ್ ಸೇವಾ ನಿಯಮಾವಳಿಯ ನಿಯಮ 285 (1)(ಎ) ರಂತೆ 15 ವರ್ಷಗಳಿಗೆ ಕಡಿಮೆ ಇಲ್ಲದ ಅರ್ಹತಾದಾಯಕ ಸೇವೆ ಸಲ್ಲಿಸಿದ ಸರ್ಕಾರಿ ನೌಕರರು ಸ್ವಯಂ ನಿವೃತ್ತಿ ಪಡೆದರೆ ನಿವೃತ್ತಿ ವೇತನ ಸೌಲಭ್ಯ ಪಡೆಯಲು ಅರ್ಹರಾಗುತ್ತಾರೆ. ಈ ಸ್ವಇಚ್ಛೆ ನಿವೃತ್ತಿಯು ಸರ್ಕಾರಿ ನೌಕರರಿಂದಲೇ ಆರಂಭಗೊಳ್ಳುತ್ತದೆ ಮತ್ತು ಸರ್ಕಾರಿ ನೌಕರರು ನೇಮಕಾತಿ ಅಧಿಕಾರಿಗೆ ಕನಿಷ್ಠ ಪಕ್ಷ 3 ತಿಂಗಳ ಅವಧಿಯ ನೋಟಿಸ್ ಅನ್ನು ಲಿಖಿತ ರೂಪದಲ್ಲಿ ನೀಡಬೇಕು. ಈ ರೀತಿ ಸ್ವಇಚ್ಛೆ ನಿವೃತ್ತಿ ಹೊಂದಿರುವ ನೌಕರರಿಗೆ ನಿಯಮ 285(2)ರಂತೆ ಗರಿಷ್ಠ 5 ವರ್ಷ ಅವಧಿಯ ಸೇವಾ ಅಧಿಕ್ಯವು ಲಭ್ಯವಾಗುತ್ತದೆ. ಆದರೆ, ಅವರೀಗ ನಿವೃತ್ತಿ ಸೌಲಭ್ಯಗಳ ಉದ್ದೇಶಕ್ಕಾಗಿ ಕಾಲ್ಪನಿಕ ವೇತನದ ನಿಗದಿಗೆ ಹಕ್ಕುಳ್ಳವರಾಗಿರುವುದಿಲ್ಲ.