ಮೋದಿ, ಅದಾನಿ, ಸಿಎಂ ಜಗನ್ ವಿರುದ್ಧ ಕೇಸು ದಾಖಲು; ಭಾರತೀಯ ವೈದ್ಯನಿಂದ ಅಮೆರಿಕದಲ್ಲಿ ದೂರು..

Modi
Published on

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ, ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್​. ಜಗನ್ಮೋಹನ್​ ರೆಡ್ಡಿ ಹಾಗೂ ಉದ್ಯಮಿ ಗೌತಮ್ ಅದಾನಿ ವಿರುದ್ಧ ಭಾರತೀಯ ಮೂಲದ ವೈದ್ಯ ಅಮೆರಿಕದಲ್ಲಿ ಕೇಸು ದಾಖಲಿಸಿದ್ದಾರೆ. ಈ ಮೇರೆಗೆ ಮೂವರಿಗೂ ನೋಟಿಸ್ ಜಾರಿಯಾಗಿದೆ.

ಡಾ. ಲೋಕೇಶ್​ ವುಯೂರ್ರು ಎಂಬವರು ಯುಎಸ್ ಡಿಸ್ಟ್ರಿಕ್ಟ್​ ಕೋರ್ಟ್​ ಫಾರ್​ ದ ಡಿಸ್ಟ್ರಿಕ್ಟ್​ ಆಫ್​ ಕೊಲಂಬಿಯಾದಲ್ಲಿ ಮೇ 24ರಂದು ಕೇಸು ದಾಖಲಿಸಿದ್ದರು. ಈ ಮೇರೆಗೆ ಜುಲೈ 22ರಂದು ಸಮನ್ಸ್ ಜಾರಿಯಾಗಿದ್ದು, ಆ. 4ರಂದು ಈ ಮೂವರಿಗೂ ಅದನ್ನು ರವಾನಿಸಲಾಗಿದೆ.

ಆರೋಪಿಗಳ ಪಟ್ಟಿಯಲ್ಲಿ ವರ್ಲ್ಡ್​ ಎಕನಾಮಿಕ್​ ಫೋರಮ್​ನ ಸ್ಥಾಪಕ ಮತ್ತು ಅಧ್ಯಕ್ಷ ಪ್ರೊ. ಕ್ಲಾಸ್ ಸ್ಕ್ವಾಬ್​ ಹೆಸರು ಕೂಡ ಇದೆ. ಭ್ರಷ್ಟಾಚಾರ ಹಾಗೂ ಪೆಗಾಸಸ್​ ಸ್ಪೈವೇರ್​ ದುರ್ಬಳಕೆ ಆರೋಪ ಹೊರಿಸಿ ಮೂವರ ವಿರುದ್ಧ ಈ ದೂರನ್ನು ನೀಡಲಾಗಿದೆ. ಈ ಮೂವರು ಯುಎಸ್​ಗೆ ನಗದು ವರ್ಗಾವಣೆ ಮಾಡುತ್ತಿದ್ದು, ವಿರೋಧಿಗಳ ವಿರುದ್ಧ ಪೆಗಾಸಸ್​ ಬಳಸುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾಗಿ ಮೂಲಗಳು ತಿಳಿಸಿವೆ.

- ಏಜೆನ್ಸೀಸ್​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net