ಅದೊಂದು ವಿಷಯಕ್ಕೆ ಟ್ರೋಲ್, ಟೀಕೆ ಮಾಡುತ್ತಲೇ ಇರ್ತಾರೆ! ಹೊರಬರಲು ಒಂದಷ್ಟು... ನಟಿ ಸಾರಾ ಬಿಚ್ಚುನುಡಿ | Sara Ali Khan

ವಿಜಯವಾಣಿ - 2025-04-02T204128.189
Published on

Sara Ali Khan: ಬಾಲಿವುಡ್​ ಹಿರಿಯ ನಟ ಸೈಫ್ ಅಲಿ ಖಾನ್ ಅವರ ಪ್ರೀತಿಯ ಪುತ್ರಿ, ನಟಿ ಸಾರಾ ಅಲಿ ಖಾನ್ ಬಗ್ಗೆ ಹೆಚ್ಚೇನು ಹೇಳುವ ಹಾಗಿಲ್ಲ. ತಂದೆಯ ನೆಚ್ಚಿನ ಮಗಳು ಈಗ ಬಾಲಿವುಡ್​ನ ಒಂದಷ್ಟು ಚಿತ್ರಗಳಲ್ಲಿ ನಟಿಸಿ, ಸಿನಿಪ್ರೇಕ್ಷಕರಿಗೆ ಪರಿಚಿತರಾಗಿದ್ದಾರೆ. ಆದರೆ, ಯಶಸ್ವಿ ನಟಿ ಎಂಬ ಬಿರುದು ಪಡೆಯುವಲ್ಲಿ ಇನ್ನೂ ಹಿಂದುಳಿದಿದ್ದಾರೆ. ಇದೇ ಕೆಲವರ ಟೀಕಾಸ್ತ್ರಕ್ಕೆ ಕಾರಣವಾಗಿದೆ.

ಈ ಮಧ್ಯೆ ಇತ್ತೀಚಿಗಿನ ಸಂದರ್ಶನವೊಂದರಲ್ಲಿ ಕಾಣಿಸಿಕೊಂಡ ನಟಿ ಸಾರಾ ಅಲಿ ಖಾನ್, ಹಲವು ಆಸಕ್ತಿದಾಯಕ ವಿಷಯಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. "ಜಾಲತಾಣಗಳಲ್ಲಿ ನನ್ನನ್ನು ಆಗಾಗ್ಗೆ ಟ್ರೋಲ್ ಮಾಡಿ ಟೀಕಿಸುತ್ತಾರೆ. ಇಂತಹ ಟೀಕೆಗಳನ್ನು ಎದುರಿಸುತ್ತಲೇ ಇರುತ್ತೇನೆ. ಆದರೆ, ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ ಅಷ್ಟೇ. ಇಂತಹ ನೆಗೆಟಿವ್​ ವಿಷಯಗಳಿಂದ ದೂರ ಉಳಿಯಲು ಒಂದಷ್ಟು ದಾರಿ ಕಂಡುಕೊಂಡಿದ್ದೇನೆ. ಅದರಲ್ಲಿ ನಾನು ಅನುಸರಿಸುವ ಮಾರ್ಗ ಬಹಳ ಸರಳವಾಗಿದೆ" ಎಂದಿದ್ದಾರೆ.

"ಟ್ರೋಲ್​, ಟೀಕೆಗಳನ್ನು ಸಾಧ್ಯವಾದಷ್ಟು ಫಿಲ್ಟರ್ ಮಾಡುತ್ತೇನೆ. ಈ ವಿಷಯದಲ್ಲಿ ಧ್ಯಾನ ನನಗೆ ತುಂಬ ಸಹಾಯ ಮಾಡಿದೆ ಹಾಗೂ ಮಾಡುತ್ತಿದೆ. ಹೀಗೆ ಮಾಡುವುದರಿಂದ, ಸತ್ಯ ಏನೆಂದು ನನಗೆ ತಿಳಿಯುತ್ತದೆ. ನನ್ನ ಸ್ವಂತ ಆಲೋಚನೆಗಳಿಂದ ಇದನ್ನೆಲ್ಲ ಅವಲೋಕಿಸುತ್ತೀನಿ. ಪ್ರತಿಯೊಂದು ಆಲೋಚನೆಗೂ ನಾನು ನನ್ನನ್ನು ಸಮರ್ಥಿಸಿಕೊಳ್ಳುವುದಿಲ್ಲ. ನಟಿಯಾಗಿ, ನಾನು ಉನ್ನತ ಸ್ಥಾನದಲ್ಲಿಲ್ಲ ನಿಜ. ಕೆಲವೊಬ್ಬರು ತಮ್ಮಿಷ್ಟದ ನಟರನ್ನು ಇಷ್ಟಪಡುತ್ತಾರೆ. ಇನ್ನೂ ಕೆಲವರು ಅವರನ್ನು ಇಷ್ಟಪಡುವುದಿಲ್ಲ" ಎಂದರು.

"ಓರ್ವ ನಟಿಯಾಗಿ ನಾನ್ನಿನ್ನೂ ಬಹಳ ದೂರ ಸಾಗಬೇಕಾಗಿದೆ. ದೇವರು ಬಯಸಿದರೆ, ನಾನು ದೀರ್ಘಕಾಲದವರೆಗೆ ಇದೇ ಚಿತ್ರರಂಗದಲ್ಲಿ ಮುಂದುವರಿಯುತ್ತೇನೆ. ಇದಾದ ನಂತರದಲ್ಲಿ, ನಿರ್ಮಾಣ ಮತ್ತು ಉದ್ಯಮಶೀಲತೆಯತ್ತ ಮುಖ ಮಾಡುತ್ತೇನೆ. ಇದರತ್ತ ಹೆಚ್ಚು ಗಮನ ಹರಿಸುತ್ತೇನೆ" ಎಂದು ಸಾರಾ ಹೇಳಿಕೊಂಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net