ಮಿಂಚಿನ ವೇಗದಲ್ಲಿ ಬಹುಮುಖ್ಯ ವಿಕೆಟ್​ಗಳು ಪತನ! ಆರಂಭಿಕ ಹಂತದಲ್ಲೇ RCBಗೆ ಸಂಕಷ್ಟ

ವಿಜಯವಾಣಿ - 2025-04-02T194834.136
Published on

RCB vs GT: ಇಂದು (ಏ.02) ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆರ್​ಸಿಬಿ ಮತ್ತು ಗುಜರಾತ್ ಟೈಟನ್ಸ್ ನಡುವಿನ ಪಂದ್ಯದಲ್ಲಿ ಜಿಟಿ ಮೊದಲು ಟಾಸ್​ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ

ಅಂತೆಯೇ ಮೊದಲು ಬ್ಯಾಟಿಂಗ್​ ಇಳಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಡೆಗೆ ಆರಂಭಿಕ ಹಂತದಲ್ಲೇ ದೊಡ್ಡ ಆಘಾತ ಎದುರಾಗಿದೆ. ತಂಡದ ಪರ ಸ್ಫೋಟಕ ಬ್ಯಾಟಿಂಗ್ ನಡೆಸಬೇಕಿದ್ದ ವಿರಾಟ್​ ಕೊಹ್ಲಿ ಕೇವಲ 7 ರನ್​ಗೆ ತಮ್ಮ ವಿಕೆಟ್​ ಒಪ್ಪಿಸಿದರೆ, ಅತ್ತ ಕೊಹ್ಲಿ ಹಿಂದೆಯೇ ಬಂದ ದೇವದತ್ತ ಪಡಿಕ್ಕಲ್ ಕೂಡ ಶೀಘ್ರವೇ ವಿಕೆಟ್​ ಕಳೆದುಕೊಂಡರು. ಇನ್ನು ಸಿರಾಜ್​ ಬೌಲಿಂಗ್​ನಲ್ಲಿ ವಿಕೆಟ್​ ಕಳೆದುಕೊಂಡ ಫಿಲ್​ ಸಾಲ್ಟ್​ ಕೂಡ ಕೊಹ್ಲಿ ಹಾದಿಯನ್ನೇ ಹಿಡಿದರು.

ತವರಿನಲ್ಲೇ ಅಬ್ಬರದ ಬ್ಯಾಟಿಂಗ್ ಮತ್ತು ಉತ್ತಮ ಸ್ಟಾರ್ಟ್​ ಕೊಡಬೇಕಿದ್ದ ಕೊಹ್ಲಿ ಪಡೆ, ಆರಂಭಿಕ ಹಂತದಲ್ಲೇ ಸಂಕಷ್ಟಕ್ಕೆ ಸಿಲುಕಿರುವುದು ಸದ್ಯ ಆರ್​ಸಿಬಿ ಅಭಿಮಾನಿಗಳನ್ನು ಕಂಗಾಲಾಗಿಸಿದೆ. ಇನ್ನು ತನ್ನ ಆಕ್ರಮಣಕಾರಿ ಬೌಲಿಂಗ್​ನಿಂದ ಪಡಿಕ್ಕಲ್ ಮತ್ತು ಸಾಲ್ಟ್​ ವಿಕೆಟ್​ ಕಬಳಿಸಿದ ಮೊಹಮ್ಮದ್​ ಸಿರಾಜ್​, ಗುಜರಾತ್​ ಪರ ಮಿಂಚಿದ್ದಾರೆ.

ಆರ್​ಸಿಬಿ ಬ್ಯಾಟಿಂಗ್ ವಿವರ:

ವಿರಾಟ್​ ಕೊಹ್ಲಿ- 6 ಎಸೆತ, 8 ರನ್​

ಫಿಲ್ ಸಾಲ್ಟ್​- 13 ಎಸೆತ, 14 ರನ್​

ದೇವದತ್ತ ಪಡಿಕ್ಕಲ್​- 3 ಎಸೆತ 4 ರನ್​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net