

ಬೆಂಗಳೂರು: ಸಿನಿಮಾರಂಗದಿಂದ ರಾಜಕೀಯ ರಂಗಕ್ಕೆ ಪ್ರವೇಶಿಸಿದ ಸ್ಯಾಂಡಲ್ವುಡ್ ಕ್ವೀನ್, ಮೋಹಕತಾರೆ ರಮ್ಯಾ(Actress Ramya) ಕಳೆದ ಕೆಲ ದಿನಗಳಿಂದ ಎರಡು ಕ್ಷೇತ್ರಗಳಿಂದಲೂ ಅಂತರ ಕಾಯ್ದುಕೊಂಡಿದ್ದಾರೆ. ರಮ್ಯಾ ಅವರ ಒಂದಲ್ಲ ಒಂದು ವಿಚಾರ ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಹರಿದಾಡುತ್ತಿರುತ್ತದೆ. ಅದರಲ್ಲೂ ಅವರ ಮದುವೆ ಸುದ್ದಿಯಂತೂ ಪದೇ ಪದೆ ಮುನ್ನೆಲೆಗೆ ಬರುತ್ತಲೆ ಇರುತ್ತದೆ.
ಸಿಂಗಲ್ ಆಗಿರುವ ರಮ್ಯಾ ಇತ್ತೀಚೆಗಷ್ಟೆ ಉದ್ಯಮಿಯೊಬ್ಬರನ್ನು ಪ್ರೀತಿಸುತ್ತಿದ್ದಾರೆ ಎನ್ನುವ ಮಾತುಗಳು ಜಾಲತಾಣದಲ್ಲಿ ಹರಿದಾಡುತಿತ್ತು. ರಮ್ಯಾ ಬರ್ತ್ಡೇಗೆ ಬಂದ ಶುಭಾಶಯವೇ ಈ ಊಹಾಪೋಹಗಳು ಹರಿದಾಡಲು ಕಾರಣವಾಯಿತು. ಕಳೆದ ನವೆಂಬರ್ನಲ್ಲಿ ರಮ್ಯಾ ಅವರು ವಿದೇಶದಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಆ ವೇಳೆ ರಮ್ಯಾ ಅವರಿಗೆ ಉದ್ಯಮಿ ಸಂಜೀವ್ ಅವರು ಬರ್ತ್ ಡೇ ವಿಶ್ ಮಾಡಿದ್ದರು.
ಹುಟ್ಟುಹಬ್ಬದ ಶುಭಾಶಯಗಳು ನನ್ನ ದಿವೂ, ಲವ್ ಯೂ ಫಾರೆವರ್. ನಿನ್ನೊಂದಿಗೆ ಹೋಗುವ ಪ್ರವಾಸಗಳು ಎಂದಿಗೂ ಅದ್ಭುತ ಎಂದು ಬರೆದು ಪೋಸ್ಟ್ ಮಾಡಿದ್ದರು. ಇದಕ್ಕೆ ಲವ್ ಯೂ ಸನಾ ಎಂದು ರಮ್ಯಾ ಪ್ರತಿಕ್ರಿಯೆ ನೀಡಿದ್ದರು. ಆದರೆ ಇವರಿಬ್ಬರು ಉತ್ತಮ ಸ್ನೇಹಿತರು ಎನ್ನಲಾಗಿದೆ. ಈ ಹಿಂದೆ ರಮ್ಯಾ – ಸಂಜೀವ್ ಅವರು ಜತೆಯಾಗಿ ಪ್ರವಾಸ ಹಾಗೂ ಕ್ರಿಕೆಟ್ ವೀಕ್ಷಿಸಲು ಹೋಗಿದ್ದರು. ಇದರ ನಡುವೆಯೇ ಸಂಜೀವ್ ರಮ್ಯಾ ಅವರ ಬಾಯ್ ಫ್ರೆಂಡ್ ಎನ್ನುವ ರೂಮರ್ಸ್ ಕೂಡ ಹರಿದಾಡಿತ್ತು.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ, ಸ್ಯಾಂಡಲ್ವುಡ್ ಮೋಹಕತಾರೆ ರಮ್ಯಾ ಅವರ ಬಾಯ್ ಫ್ರೆಂಡ್ ಸಂಜೀವ್ ಮೋಹನ!! ಇವರು ರಮ್ಯಾರನ್ನು ಪ್ರೀತಿಯಿಂದ divs ಅಂತ ಕರೀತಾರಂತೆ. ಇದೇ ವರ್ಷ ಹಸೆಮಣೆ ಏರಲಿದ್ದಾರೆ.ನಮ್ಮ ಕ್ರಶ್ ಮದುವೆ ಆಗ್ತಿದ್ದಾರೆ ಕಣ್ರಪ್ಪ ಎಂಬ ಪೋಸ್ಟ್ವೊಂದು ಸದ್ಯ ವೈರಲ್ ಆಗಿದೆ.
ಉದ್ಯಮದಿಂದ ದೂರವಿದ್ದರೂ ಸಾಮಾಜಿಕ ಜಾಲತಾಣದಲ್ಲಿ ಸದಾ ಆ್ಯಕ್ಟಿವ್ ಆಗಿರುವ ರಮ್ಯಾ, ವೈರಲ್ ಆಗುತ್ತಿರುವ ಇಬ್ಬರ ಫೋಟೋ, ಹುಡುಗನನ್ನು ಕೆಲವರು ಟ್ರೊಲ್ ಮಾಡುತ್ತಿರುವ ಕುರಿತು ಮೌನ ಮುರಿದಿದ್ದಾರೆ. ವೈರಲ್ ಫೋಟೋವನ್ನು ಹಾಕಿ ಫೇಕ್ ಎಂದು ಬರೆಯುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ.