

ಹೈದರಾಬಾದ್: ಟಾಲಿವುಡ್ ಟ್ಯಾಲೆಂಟೆಡ್ ಡೈರೆಕ್ಟರ್ SS ರಾಜಮೌಳಿ ಅವರು ಮಹೇಶ್ ಬಾಬು ಮತ್ತು ಪ್ರಿಯಾಂಕಾ ಚೋಪ್ರಾ ಅವರ ಮುಂದಿನ ಚಿತ್ರ SSMB29 ಅನ್ನು ಖಚಿತಪಡಿಸಿದ್ದಾರೆ. ಆದರೆ ಇದನ್ನು ಅಭಿಮಾನಿಗಳಿಗೆ ವಿಭಿನ್ನವಾಗಿ ತಿಳಿಸಿದ್ದಾರೆ. ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆ ವಿಡಿಯೋಗೆ ಟಾಲಿವುಡ್ ಪ್ರಿನ್ಸ್ ಮಹೇಶ್ಬಾಬು ಮತ್ತು ಪಿಗ್ಗಿ ಇಬ್ಬರು ಪ್ರತಿಕ್ರಿಯಿಸಿದ್ದಾರೆ.
ಹೌದು ರಾಜಮೌಳಿ ಅವರು ತಮ್ಮ ಮುಂದಿನ ಸಿನಿಮಾದ ಕುರಿತು ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ. ಅವರು ಹಂಚಿಕೊಂಡಿರುವ ವಿಡಿಯೋದಲ್ಲಿ, ರಾಜಮೌಳಿ ಅವರು ತಮ್ಮ ಚಿತ್ರದ ಶೂಟಿಂಗ್ನಲ್ಲಿ ಬ್ಯುಸಿಯಾಗಿರುವುದರಿಂದ ಸಿಂಹವನ್ನು ಪಂಜರದಲ್ಲಿ ಬಂಧಿಸಿ, ನಟನ ಪಾಸ್ಪೋರ್ಟ್ ಅನ್ನು ಸಹ ತೆಗೆದುಕೊಂಡಿರುವುದಾಗಿ ಪ್ರೇಕ್ಷಕರಿಗೆ ತಮಾಷೆಯಾಗಿ ಹೇಳಿದ್ದಾರೆ.
ಈ ವಿಡಿಯೋಗೆ ಮಹೇಶ್ ಬಾಬು ತನ್ನ 2006ರ ಬ್ಲಾಕ್ಬಸ್ಟರ್ ಪೋಕರಿ ಸಿನಿಮಾದ ಪ್ರಸಿದ್ಧ ಡೈಲಾಗ್ನೊಂದಿಗೆ ಪ್ರತಿಕ್ರಿಯಿಸಿದ್ದಾರೆ. ಒಕ್ಕಸಾರಿ ಕಮಿಟ್ ಐತೆ ನಾ ಮಾತಾ ನೆನೆ ವಿನನು(ಒಮ್ಮೆ ನಾನು ಒಪ್ಪಿಗೆ ನೀಡಿದರೆ, ನನ್ನ ಮಾತನ್ನು ನಾನೇ ಕೇಳುವುದಿಲ್ಲ)ಎಂದು ಅವರು ತೆಲುಗಿನಲ್ಲಿ ಬರೆದಿದ್ದಾರೆ.
ಇನ್ನು ಈ ಸಿನಿಮಾದಲ್ಲಿ ಬಾಲಿವುಡ್ನಿಂದ ಹಾಲಿವುಡ್ನಲ್ಲಿಯೂ ಹೆಸರು ಮಾಡಿರುವ ಪ್ರಿಯಾಂಕಾ ಚೋಪ್ರಾ ಇರುವುದು ಖಚಿವಾಗಿದೆ. ಇತ್ತೀಚೆಗೆ ಅವರು ಹೈದರಾಬಾದ್ಗೆ ಆಗಮಿಸುತ್ತಿರುವ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ಆ ಮೂಲಕ 'ತನ್ನ ಜೀವನದಲ್ಲಿ ಹೊಸ ಅಧ್ಯಾಯ'ದ ಸುಳಿವು ನೀಡಿದ್ದರು. ಈಗ ರಾಜಮೌಳಿ ಅವರ ಪೋಸ್ಟ್ಗೆ ಫೈನಲಿ ಎಂದು ಹೇಳಿದ್ದಾರೆ. ಈ ಹೊಸ ಪೋಸ್ಟ್ನಿಂದಾಗಿ ಪ್ರಿಯಾಂಕಾ ಚೋಪ್ರಾ ಮತ್ತು ಮಹೇಶ್ ಬಾಬು ಅಭಿಮಾನಿಗಳು ಖುಷಿಯಾಗಿದ್ದಾರೆ. SSMB29 ಅನ್ನು ಜನವರಿ 2 ರಂದು ಹೈದರಾಬಾದ್ನಲ್ಲಿ ಎಸ್ಎಸ್ ರಾಜಮೌಳಿ ಮತ್ತು ಮಹೇಶ್ ಬಾಬು ಅವರ ವಿಶೇಷ ಪೂಜಾ ಸಮಾರಂಭದೊಂದಿಗೆ ಪ್ರಾರಂಭಿಸಲಾಯಿತು.(ಏಜೆನ್ಸೀಸ್)