

ಚೆನ್ನೈ: ಜೋಶ್, ಮೈನಾ, ಕೋಟಿಗೊಬ್ಬ 2 ಸಿನಿಮಾಗಳಲ್ಲಿ ನಟಿಸಿ ಕನ್ನಡಿಗರ ಮನಗೆದ್ದಿರುವ ನಟಿ ನಿತ್ಯಾ ಮೆನನ್(Nithya Menen) ಕುರಿತು ಹೊಸದಾಗಿ ಪರಿಚಯಿಸುವ ಅಗತ್ಯವಿಲ್ಲ. ಕನ್ನಡ ಸಿನಿಮಾ ಮಾತ್ರವಲ್ಲದೆ ತೆಲುಗು, ತಮಿಳು, ಮಲಯಾಳಂ ಚಿತ್ರಗಳು ಸೇರಿದಂತೆನ ಬಾಲಿವುಡ್ನಲ್ಲೂ ತನ್ನ ನಟನಾ ಕೌಶಲ್ಯ ತೋರಿಸಿ ಸೈ ಎನ್ನಿಸಕೊಂಡಿದ್ದಾರೆ. ಕನ್ನಡವನ್ನು ಸ್ಪಷ್ಟವಾಗಿ, ನಿರ್ಗಳವಾಗಿ ಮಾತನಾಡುವ ಈ ನಟಿಯ ವಿಚಾರ ತಿಳಿದುಕೊಳ್ಳಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿರುತ್ತಾರೆ. ಯಾವಾಗಲೂ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸುವ ಸೆಲಿಬ್ರಿಟಿಗಳಲ್ಲಿ ನಿತ್ಯಾ ಮೆನನ್ ಕೂಡ ಒಬ್ಬರು ಎಂದರೆ ತಪ್ಪಾಗಲಾರದು.
ಇತ್ತೀಚೆಗೆ ನಿತ್ಯಾ ಮೆನನ್ ಅವರ ಮದುವೆ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತಿತ್ತು. ಆದರೀಗ ಸಂದರ್ಶನವೊಂದರಲ್ಲಿ ನಿರೂಪಕ ಕೇಳಿದ ಪ್ರಶ್ನೆಗೆ ಬ್ಲಶ್ ಆದ ನಟಿ ಸಪ್ರೈಸ್ ಆಗುತ್ತಿದೆ. ಆತನೆಂದರೆ ನನಗೆ ಇಷ್ಟ ಎಂದು ಹೇಳಿದ್ದಾರೆ. ಐ ಲವ್ ವಿಜಯ್ ಪ್ರಕಾಶ್.. ಪಾಪಾ ಅವರಿಗೆ ಇದು ಗೊತ್ತಿಲ್ಲ. ನನಗೆ ಅವರ ವಾಯ್ಸ್ ಎಂದರೆ ಬಹಳ ಇಷ್ಟ. ಅದಷ್ಟೆ ಅಲ್ಲದೆ ಅವರು ಕನ್ನಡ ಸಾಂಗ್ ಹಾಡುತ್ತಾರೆ. ನನಗೆ ಕನ್ನಡ ಭಾಷೆ ಮಾತೃ ಭಾಷೆ ಇದ್ದಂತೆ, ಸೋ ಐ ಲವ್ ಹಿಸ್ ಕನ್ನಡ ಸಾಂಗ್ಸ್ ಎಂದು ಹೇಳಿದ್ದಾರೆ.
ಯಾವುದಾದರೂ ತೆಲುಗು, ತಮಿಳು, ಕನ್ನಡದಲ್ಲಿ ವಿಜಯ್ ಪ್ರಕಾಶ್ ಹಾಡಿರುವ ಹಾಡೊಂದನ್ನು ಹಾಡುವಂತೆ ಕೇಳಿದಾಗ, ನಟಿ ನಿತ್ಯಾ ಮೆನನ್ ವಿಜಯ್ ಪ್ರಕಾಶ್ ಅವರು ಹಾಡಿರುವ ಎಷ್ಟೋ ಹಾಡುಗಳು ನನಗಿಷ್ಟ. ಅದರಲ್ಲಿ ಸುದೀಪ್ ಅಭಿಯನದ ಸಿನಿಮಾದಲ್ಲಿನ ಒಂದು ಹಾಡು ವಿಜಯ್ ಪ್ರಕಾಶ್ ಹಾಡಿದ್ದಾರೆ, ಅದು ನನಗೆ ಬಹಳ ಇಷ್ಟ. ಸುದೀಪ್ ಕೂಡ ನನಗೆ ಕ್ಲೋಸ್ ಫ್ರೆಂಡ್ ಎಂದು ಹೇಳುತ್ತಾ ನಿತ್ಯಾ ಮೆನನ್ ತಾವು ಅದೇ ಸಾಲುಗಳನ್ನು ಹಾಡಿದರು. ಹಲೋ..ಹಲೋ ಸಾಂಗ್ ಹಾಡಿ ಈ ಹಾಡು ಬಹಳ ಚೆನ್ನಾಗಿದೆ ಎಂದರು.
ಇತ್ತೀಚೆಗಷ್ಟೇ 'ತಿರುಚಿತ್ರಾಂಬಲಂ' ಸಿನಿಮಾದಲ್ಲಿನ ಅಭಿನಯಕ್ಕಾಗಿ ನಿತ್ಯಾ ಮೆನನ್‌ಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಲಭಿಸಿದೆ. ನಿತ್ಯಾ ಮೆನನ್ ಮತ್ತು ಜಯಂ ರವಿ ನಟನೆಯ ಸಿನಿಮಾ 'ಕಾದಲಿಕ್ಕ ನೆರಮಿಲ್ಲೈ’ ಇತ್ತೀಚೆಗೆ ಬಿಡುಗಡೆಗೊಂಡಿದೆ. (ಏಜೆನ್ಸೀಸ್)