ಸಲ್ಮಾನ್ ಖಾನ್ ಬರೆದ ಪ್ರೇಮ ಪತ್ರ ವೈರಲ್​; ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಪತ್ರ ಬರೆದಿದ್ದು ಯಾರಿಗೆ ಗೊತ್ತಾ?

Salman Khan
Published on

ಮುಂಬೈ: ನಟ ಸಲ್ಮಾನ್​​ ಖಾನ್​ ಬಾಲಿವುಡ್‌ನಲ್ಲಿ ಮಾತ್ರವಲ್ಲ, ಭಾರತೀಯ ಚಿತ್ರರಂಗದಲ್ಲಿ ಸಲ್ಲು ಭಾಯ್ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್. ಯಾಕೆ ಮದುವೆ ಆಗಲಿಲ್ಲ ಅಂತ ಯಾರಿಗೂ ಗೊತ್ತಿಲ್ಲ.. ಆದರೆ ಅವರು ಈ ಹಿಂದೆ ಬರೆದಿದ್ದ ಪ್ರೇಮ ಪತ್ರವಿದೆ. ಈಗ ವೈರಲ್ ಆಗಿರುವ ಅವರು ಯಾರಿಗೆ ಬರೆದಿದ್ದಾರೆ? ಎನ್ನುವ ಕೂತುಹೊಲ ನಿಮಗೆ ಇದ್ದಾರೆ ಈ ಸುದ್ದಿಯ ಸಂಪೂರ್ಣವಾದ ಮಾಹಿತಿ ಇಲ್ಲಿದೆ..

ಸಲ್ಲು ಭಾಯ್ ಇನ್ನೂ ಮದುವೆಯಾಗದೆ 58 ನೇ ವಯಸ್ಸಿನಲ್ಲಿ ಬ್ಯಾಚುಲರ್ ಜೀವನವನ್ನು ಆನಂದಿಸುತ್ತಿದ್ದಾರೆ. ಭಾರತದಲ್ಲಿ ಸಲ್ಮಾನ್ ಖಾನ್ ಬಿಟ್ಟರೆ ಈ ರೇಂಜ್ ಬ್ಯಾಚುಲರ್ ಯಾರೂ ಇಲ್ಲ. ಪ್ರಪಂಚದಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಸಲ್ಮಾನ್ ಖಾನ್ ಅವರನ್ನು ಮದುವೆಯಾಗುತ್ತೀರಾ ಎಂದು ಕೇಳಿದರೆ ಸಾಕು.. ಈಗಂತೂ ಹುಡುಗಿಯರು ಕ್ಯೂ ನಿಲ್ಲುತ್ತಾರೆ. ಸಲ್ಮಾನ್ ಖಾನ್ ಅವರನ್ನು ಇಷ್ಟಪಡದವರೇ ಇಲ್ಲ. . ಆದರೆ ಅವರು ಮದುವೆಯಾಗಲಿಲ್ಲ ಮತ್ತು ಜೀವನವನ್ನು ಆನಂದಿಸಲು ಸಮಯವನ್ನು ಮೀಸಲಿಟ್ಟಿದ್ದಾರೆ.

ಬಾಲಿವುಡ್ ನಲ್ಲಿ ಸಲ್ಮಾನ್ ಜೊತೆ ಹಲವು ಹೀರೋಯಿನ್​​ಗಳು ಅಫೇರ್ ಹೊಂದಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಸ್ಟಾರ್ ಹೀರೋಯಿನ್​ಗಳ ಜೊತೆ ನಟಿಸಿದರೂ ಸಲ್ಮಾನ್ ಯಾರನ್ನೂ ಮದುವೆಯಾಗಿರಲಿಲ್ಲ. ಆದರೆ ಸಲ್ಮಾನ್ ಬರೆದ ಲವ್​​ ಲೇಟರ್​​ವೊಂದು ಬಾಲಿವುಡ್ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ಪತ್ರವನ್ನು ಸ್ವತಃ ಸಲ್ಮಾನ್ ಬರೆದಿದ್ದಾರೆ ಎನ್ನಲಾಗಿದೆ.

34 ವರ್ಷಗಳ ಹಿಂದೆ ಬರೆದಿರುವ ಈ ಪ್ರೇಮ ಪತ್ರವನ್ನು ಸಲ್ಮಾನ್ ಖಾನ್ ತಮಗೆ ಹತ್ತಿರವಿರುವವರಿಗಾಗಿಯೇ ಬರೆದಿದ್ದಾರಂತೆ. ಆದರೆ ಸಲ್ಮಾನ್ ಈ ಪತ್ರ ಬರೆದಿದ್ದು 1989ರಲ್ಲಿ. ಈ ಪತ್ರದಲ್ಲಿ ನಾನು ನಿಮ್ಮನ್ನು ಪ್ರೀತಿಸುತ್ತೇನೆ ಮತ್ತು ನೀವೂ ನನ್ನನ್ನು ಪ್ರೀತಿಸುತ್ತೀರಿ ಎಂದು ಭಾವಿಸುತ್ತೇವೆ. ನನ್ನನ್ನು ಸ್ವೀಕರಿಸಿದ್ದಕ್ಕಾಗಿ ಮತ್ತು ನನ್ನನ್ನು ಪ್ರೀತಿಸಿದ್ದಕ್ಕಾಗಿ ಧನ್ಯವಾದಗಳು. ನೀವು ನನ್ನನ್ನು ಪ್ರೀತಿಸುವುದನ್ನು ನಿಲ್ಲಿಸಿದ ದಿನ ನಾನು  ಸಿನಿಮಾ ಮಾಡುವುದನ್ನು ನಿಲ್ಲಿಸುತ್ತೇನೆ.. ಅದು ನನ್ನ ವೃತ್ತಿಜೀವನದ ಅಂತ್ಯವಾಗುತ್ತದೆ.

ಸಲ್ಲು ಭಾಯ್​ ಬರೆದ ಪತ್ರದಲ್ಲಿ ಏನಿದೆ?:

ಮೊದಲನೆಯದಾಗಿ ನಾನು ನಿಮಗೆ ಧನ್ಯವಾದ ಹೇಳಲು ಬಯಸುತ್ತೇನೆ. ನನಗೆ ಮರೆಯಲಾಗದ ಯಶಸ್ಸನ್ನು ನೀಡಲಾಯಿತು. ಇನ್ನು ಮುಂದೆ ನಾನು ಮಾಡುವ ಯಾವುದೇ ಚಿತ್ರವನ್ನು ಮೈನೆ ಪ್ಯಾರ್ ಕಿಯಾಗೆ ಹೋಲಿಸಲಾಗುತ್ತದೆ ಎಂದು ನನಗೆ ತಿಳಿದಿರುವ ಕಾರಣ ನಾನು ಮೊದಲು ಉತ್ತಮ ಸ್ಕ್ರಿಪ್ಟ್ ಕೆಲಸ ಮಾಡುತ್ತಿದ್ದೇನೆ ಹಾಗಾಗಿ ಉತ್ತಮ ಚಿತ್ರ ಮಾಡಲು ಪ್ರಯತ್ನಿಸುತ್ತೇನೆ ಎಂದು ಸಲ್ಮಾನ್ ಖಾನ್ ಬರೆದಿದ್ದಾರೆ.

salman khan

ಇಲ್ಲಿ ನಿಜವಾದ ಟ್ವಿಸ್ಟ್ ಏನೆಂದರೆ ಸಲ್ಮಾನ್ ಖಾನ್ ತನ್ನ ಗೆಳತಿಗಾಗಿ ಈ ಪತ್ರ ಬರೆದಿಲ್ಲ. ಕೊಂಚ ವೆರೈಟಿ ಇರಲಿರುವ ಈ ಪತ್ರವನ್ನು ಅಭಿಮಾನಿಗಳಿಗಾಗಿಯೇ ಬರೆದಿದ್ದಾರಂತೆ. ಮೈನ್ ಪ್ಯಾರ್ ಕಿಯಾ ಒಂದು ಕಲ್ಟ್ ಕ್ಲಾಸಿಕ್ ಚಲನಚಿತ್ರವಾಗಿದ್ದು, ಸಲ್ಮಾನ್ ಖಾನ್ ಅವರು ಬ್ಲಾಕ್ಬಸ್ಟರ್ ಹಿಟ್ ಆಗಿ ನಟಿಸಿದ್ದಾರೆ. ಈ ಸಿನಿಮಾ ಭರ್ಜರಿ ಯಶಸ್ಸು ಕಾಣುತ್ತಿದ್ದಂತೆ ಸಲ್ಮಾನ್ ಕ್ರೇಜ್ ಕೂಡ ಅಪಾರವಾಗಿ ಹೆಚ್ಚಾಯಿತು. ಸಲ್ಮಾನ್ ಖಾನ್ ತಮ್ಮ ರೊಮ್ಯಾಂಟಿಕ್ ಸೆನ್ಸ್ ಬಳಸಿ ತಮ್ಮ ಅಭಿಮಾನಿಗಳಿಗೆ ಪತ್ರ ಬರೆದಿದ್ದಾರೆ. ಚಲನಚಿತ್ರವು 29 ಡಿಸೆಂಬರ್ 1989 ರಂದು ಬಿಡುಗಡೆಯಾಯಿತು. ನನ್ನನ್ನು ಸ್ವೀಕರಿಸಿದ್ದಕ್ಕಾಗಿ ಮತ್ತು ನನ್ನನ್ನು ಪ್ರೀತಿಸಿದ್ದಕ್ಕಾಗಿ ಧನ್ಯವಾದಗಳನ್ನು ಬರೆದರು. ಈ ಪತ್ರ ಈಗ ವೈರಲ್ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net