ಸೆ. 28 ರಂದು 'ಸಲಾರ್'​ ರಿಲೀಸ್​ ಡೌಟ್!; ಕಾರಣ ಹೀಗಿದೆ

Untitled design - 2023-09-01T191257.842
Published on

ಬೆಂಗಳೂರು: ಟಾಲಿವುಡ್​ನ ರೆಬೆಲ್​ ಸ್ಟಾರ್​, ಡಾರ್ಲಿಂಗ್ ಪ್ರಭಾಸ್​ ಮತ್ತು ಕೆಜಿಎಫ್​ ನಿರ್ದೇಶಕ ಪ್ರಶಾಂತ್​ ನೀಲ್​ ಕಾಂಬಿನೇಷ್​ನಲ್ಲಿ ತಯಾರಾಗಿರುವ 'ಸಲಾರ್'​ ಚಿತ್ರವು ಈ ಹಿಂದೆ ನಿಗದಿಪಡಿಸಲಾಗಿದ್ದ ದಿನಾಂಕದಂದು ಬಿಡುಗಡೆಯಾಗುವುದು ಅನುಮಾನ ಎಂದು ಇತ್ತೀಚಿನ ವರದಿ ತಿಳಿಸಿದೆ.

ಡಾರ್ಲಿಂಗ್​ ಪ್ರಭಾಸ್​ ಅಭಿನಯದ ಬಹುನಿರೀಕ್ಷಿತ 'ಸಲಾರ್'​ ಬಗ್ಗೆ ಅಭಿಮಾನಿಗಳಲ್ಲಿ ಮತ್ತು ಸಿನಿಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆ ವ್ಯಕ್ತವಾಗಿದೆ. ಚಿತ್ರವನ್ನು ಸೆಪ್ಟಂಬರ್​ 28 ರಂದು ರಿಲೀಸ್​ ಮಾಡಲಿದ್ದೇವೆ ಎಂದು ಚಿತ್ರತಂಡ ಈ ಹಿಂದೆಯೇ ತಿಳಿಸಿತ್ತು. ಆದ್ರೆ, ಚಿತ್ರ ತಯಾರಕರು ಇದೀಗ ಸಿನಿಮಾವನ್ನು ನಿಗದಿಪಡಿಸಲಾಗಿದ್ದ ದಿನದಂದು ಬಿಡುಗಡೆಗೊಳಿಸುವುದಯ ಅನುಮಾನ ಎಂದು ಹೇಳಲಾಗಿದೆ. ಇದಕ್ಕೆ ಕಾರಣ ಹೀಗಿದೆ.

ಚಿತ್ರದ ಕೆಲವು ನಿರ್ಣಾಯಕ ವಿಎಫ್ಎಕ್ಸ್ ಶಾಟ್‌ಗಳ ಗುಣಮಟ್ಟವನ್ನು ಒಪ್ಪದ ನಿರ್ದೇಶಕ ಪ್ರಶಾಂತ್ ನೀಲ್​, ಅವುಗಳನ್ನು ರೀ-ವರ್ಕ್​ ಮಾಡಲು ಸ್ಟುಡಿಯೋಗೆ ಕಳುಹಿಸಿದ್ದಾರೆ. ಹೀಗಾಗಿ 'ಸಲಾರ್' ಸೆಪ್ಟಂಬರ್​ 28 ರಂದು ರಿಲೀಸ್​ ಆಗದೆ ಮುಂದೂಡಿಕೆಯಾಗಬಹುದು. ಸದ್ಯದ ಮಾಹಿತಿ ಪ್ರಕಾರ, ಚಿತ್ರವನ್ನು ಡಿಸೆಂಬರ್​ಗೆ ಮುಂದೂಡಲು ಚಿತ್ರತಂಡ ಚಿಂತಿಸಿದೆ ಎಂದು ಹೇಳಲಾಗಿದೆ.

'ಸಲಾರ್'​ ಟ್ರೇಲರ್​ ಸೆ. 06 ರಂದು ಬಿಡುಗಡೆಯಾಗುವ ನಿರೀಕ್ಷೆಯಿತ್ತು. ಆದ್ರೆ, ಇದು ಕೂಡ ಈಗ ತಾಂತ್ರಿಕ ಕೆಲಸಗಳಿಂದ ಮುಂದೋಗಿದೆ. ಟ್ರೇಲರ್​ಗಾಗಿ ಕಾತರದಿಂದ ಕಾಯುತ್ತಿದ್ದ ಪ್ರಭಾಸ್​ ಅಭಿಮಾನಿಗಳಿಗೆ ಶೀಘ್ರವೇ ಚಿತ್ರತಂಡ ಹೊಸ ಮಾಹಿತಿಗಳನ್ನು ಅಧಿಕೃತವಾಗಿ ಪ್ರಕಟಿಸಲಿದೆ ಎಂಬ ನಿರೀಕ್ಷೆಯಿದೆ.

ಚಿತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್, ಶ್ರುತಿ ಹಾಸನ್, ಮೀನಾಕ್ಷಿ ಚೌಧರಿ, ಜಗಪತಿ ಬಾಬು, ಸರಣ್​ ಶಕ್ತಿ, ಈಶ್ವರಿ ರಾವ್​ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net