ಫೈಟರ್​ ಮರಿಟೈಗರ್​​ ; ನೂತನ್​ ನಿರ್ದೇಶನದಲ್ಲಿ ವಿನೋದ್​ ಪ್ರಭಾಕರ್​

Fighter_(221)
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ವಿನೋದ್​ ಪ್ರಭಾಕರ್​ ಅಭಿನಯದ ನೂತನ್​ ಉಮೇಶ್​ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಸಿನಿಮಾ 'ಫೈಟರ್​'. ನಟ ದರ್ಶನ್​ ಚಿತ್ರೀಕರಣಕ್ಕೆ ಚಾಲನೆ ನೀಡಿದ್ದರು. ಇತ್ತೀಚೆಗಷ್ಟೆ ಚಿತ್ರತಂಡ ಅಭಿಮಾನಿಗಳಿಂದಲೇ ಚಿತ್ರದ ಶೀರ್ಷಿಕೆ ಅನಾವರಣ ಮಾಡಿಸಿತ್ತು. ಇದೀಗ ಟೀಸರ್​ ರಿಲೀಸ್​ ಮಾಡಲಾಗಿದ್ದು, ನಿರ್ದೇಶಕ ನೂತನ್​, "ಸದ್ಯದಲ್ಲೆ ಹಾಡುಗಳನ್ನು ರಿಲೀಸ್​ ಮಾಡಲಿದ್ದೇವೆ ಹಾಗೂ ಅಕ್ಟೋಬರ್​ನಲ್ಲಿ ಟ್ರೇಲರ್​ ಬಿಡುಗಡೆ ಮಾಡುವ ಯೋಚನೆ ಹೊಂದಿದ್ದೇವೆ. "ಫೈಟರ್​' ಎಂದರೆ ಹೊಡೆದಾಡುವವನು ಮಾತ್ರವಲ್ಲ ಅನ್ಯಾಯದ ವಿರುದ್ಧ ಹಾಗೂ ತನ್ನ ಕುಟುಂಬಕ್ಕಾಗಿ ಹೋರಾಡುವವನು. ಈ ಚಿತ್ರದಲ್ಲಿ ವಿನೋದ್​ ಪ್ರಭಾಕರ್​ ಹೊಸ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ' ಎಂದು ಮಾಹಿತಿ ನೀಡಿದರು.

ನಾಯಕ ವಿನೋದ್​ ಪ್ರಭಾಕರ್​, "ಹೋರಾಟದ ಜತೆ ಥ್ರಿಲ್ಲರ್​ ಅಂಶಗಳಿರುವ ತಂದೆ, ತಾಯಿ ಹಾಗೂ ಮಗನ ಬಾಂಧವ್ಯದ ಕುರಿತಾದ ಸಿನಿಮಾ ಇದು. ಸಮಾಜದ ವ್ಯವಸ್ಥೆಯ ವಿರುದ್ಧ ಹೋರಾಡುವ "ಫೈಟರ್​' ನಾನು' ಎಂದು ಹೇಳಿದ್ದಾರೆ. ಇನ್ನು ಈ ಚಿತ್ರಕ್ಕೆ ಪಾವನಾ ಹಾಗೂ ಲೇಖಚಂದ್ರ ಇಬ್ಬರು ನಾಯಕಿಯರು.

"ಲಾಕಪ್​ ಡೆತ್​', "ಬೃಂದಾವನ' ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿದ್ದ ನಿರೋಷಾ ರಾಧಾ ತೆಲುಗು, ತಮಿಳು ಚಿತ್ರರಂಗದಲ್ಲಿ ಬಿಜಿಯಿದ್ದರು. ಈಗ ಈ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಮ್​ಬ್ಯಾಕ್​ ಮಾಡುತ್ತಿರುವುದು ವಿಶೇಷ. ಉಳಿದಂತೆ ಗುರುಕಿರಣ್​ ಸಂಗೀತ ಹಾಗೂ ಥ್ರಿಲ್ಲರ್​ ಮಂಜು ಸಾಹಸ ನಿರ್ದೇಶನ ಚಿತ್ರಕ್ಕೆ ಇರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net