

ಬೆಂಗಳೂರು: ಟಾಲಿವುಡ್ನ ರೆಬೆಲ್ ಸ್ಟಾರ್ ಪ್ರಭಾಸ್ ಅಭಿನಯದ ಹಾಗೂ ಸ್ಯಾಂಡಲ್ವುಡ್ನ ಸ್ಟಾರ್ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ ಪ್ಯಾನ್ ಇಂಡಿಯಾ 'ಸಲಾರ್' ಕಳೆದ ವರ್ಷ ಡಿ.22 ರಂದು ಜಾಗತಿಕವಾಗಿ ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡು ಇಂದಿಗೆ 35 ದಿನಗಳು ಕಳೆದಿವೆ. ಸಿನಿಪ್ರೇಕ್ಷಕರಿಂದ ಉತ್ತಮ ವಿಮರ್ಶೆ, ಪ್ರತಿಕ್ರಿಯೆಗಳನ್ನು ಪಡೆದ ಸಲಾರ್, ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಚಿತ್ರತಂಡ ನಿರೀಕ್ಷಿಸಿದ ಮೊತ್ತವನ್ನು ತಲುಪಿತೇ? ಎಂಬ ಪ್ರಶ್ನೆಗೆ ಹೀಗಿದೆ ಉತ್ತರ.
ಬಿಡುಗಡೆಗೂ ಮುನ್ನವೇ ಭಾರೀ ಸದ್ದು ಮಾಡಿದ ಸಲಾರ್, ಶಾರುಖ್ ಖಾನ್ ಅಭಿನಯದ ಡಂಕಿ ಚಿತ್ರದೊಂದಿಗೆ ಪೈಪೋಟಿ ಕೊಡುವ ಮೂಲಕ ಚಿತ್ರಮಂದಿರಗಳಲ್ಲಿ ಅಬ್ಬರಿಸಿತು. ಮಾಸ್, ಆ್ಯಕ್ಷನ್ ಜಾನರ್ನಲ್ಲಿ ತಯಾರಿಸಿದ ಈ ಚಿತ್ರಕ್ಕೆ ಪ್ರೇಕ್ಷಕರು ಫಿದಾ ಅಗಿದ್ದು, ಚಿತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್ ಹಾಗೂ ಪ್ರಭಾಸ್ ನಟನೆಗೆ ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿದರು.
ಜಾಗತಿಕವಾಗಿ ಮೊದಲ ದಿನದಿಂದ ಇಲ್ಲಿಯವರೆಗೆ ಪ್ರಭಾಸ್ ಚಿತ್ರ ಕಂಡ ಗಳಿಕೆ ಎಷ್ಟು ಎಂಬುದರ ಸಂಪೂರ್ಣ ವಿವರ ಹೀಗಿದೆ ನೋಡಿ..
ದಿನ 1: 176.52 ಕೋಟಿ ರೂ.
ದಿನ 2: 101.39 ಕೋಟಿ ರೂ.
ದಿನ 3: 95.24 ಕೋಟಿ ರೂ.
ದಿನ 4: 76.91 ಕೋಟಿ ರೂ.
ದಿನ 5: 40.17 ಕೋಟಿ ರೂ.
ದಿನ 6: 31.62 ಕೋಟಿ ರೂ.
ದಿನ 7: 20.78 ಕೋಟಿ ರೂ.
ದಿನ 8: 14.21 ಕೋಟಿ ರೂ.
ದಿನ 9: 21.45 ಕೋಟಿ ರೂ.
ದಿನ 10: 23.09 ಕೋಟಿ ರೂ.
ದಿನ 11: 25.81 ಕೋಟಿ ರೂ.
ದಿನ 12: 12.15 ಕೋಟಿ ರೂ.
ದಿನ 13: 11.07 ಕೋಟಿ ರೂ.
ದಿನ 14: 9.28 ಕೋಟಿ ರೂ.
ದಿನ 15: 7.90 ಕೋಟಿ ರೂ.
ದಿನ 16: 9.78 ಕೋಟಿ ರೂ.
ದಿನ 17: 10.14 ಕೋಟಿ ರೂ.
ದಿನ 18: 6.81 ಕೋಟಿ ರೂ.
ದಿನ 19: 6.05 ಕೋಟಿ ರೂ.
ದಿನ 20: 5.22 ಕೋಟಿ ರೂ.
ದಿನ 21: 5.04 ಕೋಟಿ ರೂ.
ದಿನ 22: 1.53 ಕೋಟಿ ರೂ.
ದಿನ 23: 1.69 ಕೋಟಿ ರೂ.
ದಿನ 24: 1.80 ಕೋಟಿ ರೂ.
ದಿನ 25: 1.56 ಕೋಟಿ ರೂ.
ದಿನ 26: 1.27 ಕೋಟಿ ರೂ.
ದಿನ 27: 1.19 ಕೋಟಿ ರೂ.
ದಿನ 28: 1.04 ಕೋಟಿ ರೂ.
ದಿನ 29: 0.86 ಕೋಟಿ ರೂ.
ದಿನ 30: 0.72 ಕೋಟಿ ರೂ.
ದಿನ 31: 0.61 ಕೋಟಿ ರೂ.
ದಿನ 32: 0.59 ಕೋಟಿ ರೂ.
ದಿನ 33: 0.52 ಕೋಟಿ ರೂ.
ದಿನ 34: 0.36 ಕೋಟಿ ರೂ.
ಒಟ್ಟು: 724.37 ಕೋಟಿ ರೂ.