ಫಿನಾಲೆ ಹಂತ ತಲುಪಿರುವ ಪ್ರತಾಪ್​ ಬಗ್ಗೆ ಪ್ರಥಮ್​ ಶಾಕಿಂಗ್ ಹೇಳಿಕೆ! ಯಾರು ಗೆಲ್ತಾರೆ? ಈ ವಿಡಿಯೋ ನೋಡಿ

ವಿಜಯವಾಣಿ - 2024-01-25T165424.939
Published on

ಬೆಂಗಳೂರು: ಬಿಗ್ ಬಾಸ್​ ಕನ್ನಡ ಸೀಸನ್​ 10ರ ಸ್ಪರ್ಧಿಗಳು ಇದೀಗ ಫಿನಾಲೆ ಹಂತವನ್ನು ತಲುಪಿದ್ದು, ಫೈನಲ್​ಗೆ ಎಂಟ್ರಿ ಕೊಡಲು ಸದಸ್ಯರ ನಡುವೆ ಬಿರುಸಿನ ಹಣಾಹಣಿ ನಡೆಯುತ್ತಿದೆ. ಈ ಮಧ್ಯೆ ಟಾಪ್​ 6 ಫೈನಲಿಸ್ಟ್​ ಆಗಿರುವ ಕಾರ್ತಿಕ್​, ವಿನಯ್, ಪ್ರತಾಪ್, ಸಂಗೀತಾ, ತುಕಾಲಿ ಸಂತೋಷ್​ ಮತ್ತು ವರ್ತೂರು ಸಂತೋಷ್​ ಅವರ ಪೈಕಿ ಪ್ರತಾಪ್​ ಬಗ್ಗೆ ಮಾತನಾಡಿದ ಬಿಗ್ ಬಾಸ್ ಸೀಸನ್​ 04ರ ವಿಜೇತ ಪ್ರಥಮ್​, ಯಾರು ಗೆಲ್ಲುತ್ತಾರೆ ಎಂಬ ಪ್ರಶ್ನೆಗೆ ತಮ್ಮ ಶೈಲಿಯಲ್ಲೇ ಉತ್ತರಿಸಿದ್ದಾರೆ.

ಬಿಗ್ ಬಾಸ್​ ಫಿನಾಲೆಗೆ ಡ್ಯಾನ್ಸ್​ ಮಾಡುತ್ತಿದ್ದೇನೆ. ಅದಕ್ಕೆ ಪ್ರಾಕ್ಟಿಸ್​ ಕೂಡ ನಡೆಯುತ್ತಿದೆ. ಪರ್ಫಾಮೆನ್ಸ್​ ಅನ್ನು ವೇದಿಕೆಯ ಮೇಲೆ ನೋಡಿ ಎಂದು ಹೇಳಿದ ಪ್ರಥಮ್​, "ನಾನು ಪೇಡ್​ ಹಾಗೂ ಫೇಕ್​ ಪ್ರಮೋಷನ್​ಗಳ ಪರಮವಿರೋಧಿ! ಪ್ರಾಮಾಣಿಕವಾಗಿ ಆಡಿ ಗೆಲ್ಲಿರಿ. ಅವನು ಬಡವ, ಹಳ್ಳಿಯವನು, ಇವನು ಮುಗ್ಧ, ಅವಳು ಹೆಣ್ಣು ಎಂದು ಓಪಿನಿಯನ್​ ಕ್ರಿಯೆಟ್​ ಮಾಡಬಾರದು, ಅದು ಗೆಲುವಿನ ಮಾನದಂಡ ಆಗಬಾರದು" ಎಂದಿದ್ದಾರೆ.

"ನಿಮ್ಮ ಗೆಲುವಿಗೆ ಆಟದ ವೈಖರಿ, ಮನರಂಜನೆ, ಕರ್ನಾಟಕ ಜನತೆಯ ಪ್ರೀತಿಯೇ ಮಾನದಂಡ ಆಗಿರಬೇಕು. ಯಾವನ್ನೇ ಆದ್ರೂ ಅಷ್ಟೇ........." ಮತ್ತಷ್ಟು ವಿಷಯ ತಿಳಿಯಲು ಕೆಳಗಿನ ವಿಡಿಯೋ ವೀಕ್ಷಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net